7 ನಿಮ್ಮ ದೇವರಾದ ಯೆಹೋವ ಕೊಡೋ ದೇಶದ ಯಾವುದಾದ್ರೂ ಒಂದು ಪಟ್ಟಣದಲ್ಲಿ ನಿಮ್ಮ ಸಹೋದರನೊಬ್ಬ ಬಡವನಾದ್ರೆ ಅವನ ಜೊತೆ ನೀವು ಕಲ್ಲು ಹೃದಯದವನ ತರ ನಡ್ಕೊಬಾರದು, ಜಿಪುಣತನ ತೋರಿಸಬಾರದು.+8 ನೀವು ಕೈಬಿಚ್ಚಿ ಉದಾರವಾಗಿ ಕೊಡಬೇಕು.+ ಅವನಿಗೆ ಅಗತ್ಯ ಇರೋದನ್ನ ಅಥವಾ ಅವನ ಹತ್ರ ಇಲ್ಲದಿರೋದನ್ನ ಅವನಿಗೆ ಸಾಲವಾಗಿ* ಕೊಡೋಕೆ ಹಿಂದೆಮುಂದೆ ನೋಡಬಾರದು.
35 ಯಾಕಂದ್ರೆ ನಾನು ಹಸಿದಿದ್ದಾಗ ತಿನ್ನೋಕೆ ಕೊಟ್ರಿ. ಬಾಯಾರಿಕೆ ಆದಾಗ ಕುಡಿಯೋಕೆ ಕೊಟ್ರಿ. ನಾನು ಅಪರಿಚಿತನಾಗಿದ್ರೂ ನನಗೆ ಅತಿಥಿಸತ್ಕಾರ ಮಾಡಿದ್ರಿ.+36 ಬಟ್ಟೆ ಇರ್ಲಿಲ್ಲ ನನಗೆ ಬಟ್ಟೆ ಕೊಟ್ರಿ.+ ನನಗೆ ಹುಷಾರು ಇಲ್ಲದಿದ್ದಾಗ ನನ್ನನ್ನ ನೋಡ್ಕೊಂಡ್ರಿ. ನಾನು ಜೈಲಲ್ಲಿದ್ದಾಗ ನನ್ನನ್ನ ನೋಡೋಕೆ ಬಂದ್ರಿ’ ಅಂತ ಹೇಳ್ತಾನೆ.+
4 ಆದ್ರೆ ಒಬ್ಬ ವಿಧವೆಗೆ ಮಕ್ಕಳು, ಮೊಮ್ಮಕ್ಕಳು ಇದ್ರೆ ಮೊದ್ಲು ಅವರು ತಮ್ಮ ಕುಟುಂಬದವ್ರನ್ನ ನೋಡ್ಕೊಳ್ಳಲಿ. ಹೀಗೆ ದೇವರ ಮೇಲೆ ಭಕ್ತಿಯಿದೆ ಅಂತ ತೋರಿಸೋಕೆ ಕಲೀಲಿ.+ ಅವರು ತಮ್ಮ ಅಪ್ಪಅಮ್ಮಗೆ, ಅಜ್ಜಅಜ್ಜಿಗೆ ಮಾಡಬೇಕಾದ ಕರ್ತವ್ಯ ಮಾಡ್ಲಿ.+ ಇದನ್ನ ದೇವರು ಮೆಚ್ತಾನೆ.+
27 ನಮ್ಮ ತಂದೆ ಆಗಿರೋ ದೇವರ ದೃಷ್ಟಿಯಲ್ಲಿ ಶುದ್ಧವಾಗಿರೋ ಕಳಂಕ ಇಲ್ಲದ ಆರಾಧನಾ ಪದ್ಧತಿ ಯಾವುದಂದ್ರೆ ಕಷ್ಟದಲ್ಲಿರೋ+ ಅನಾಥ ಮಕ್ಕಳನ್ನ,+ ವಿಧವೆಯರನ್ನ+ ನೋಡ್ಕೊಳ್ಳೋದು ಮತ್ತು ಈ ಲೋಕದ ಕೆಟ್ಟತನದಿಂದ ದೂರ ಇರೋದೇ ಆಗಿದೆ.+
17 ಆದ್ರೆ ಒಬ್ಬ ವ್ಯಕ್ತಿಗೆ ಆಸ್ತಿಪಾಸ್ತಿ ಇದೆ ಅಂದ್ಕೊಳ್ಳಿ. ಅವನ ಸಹೋದರನಿಗೆ ಅಗತ್ಯ ಬಂದಾಗ ಅವನು ಕರುಣೆ ತೋರಿಸಿಲ್ಲಾಂದ್ರೆ ಆ ವ್ಯಕ್ತಿ ದೇವರನ್ನ ಪ್ರೀತಿಸ್ತಾನೆ ಅಂತ ಹೇಗೆ ಹೇಳಕ್ಕಾಗುತ್ತೆ?+