10 ಆ ದೇವದೂತ ಪವಿತ್ರ ಶಕ್ತಿಯ ಸಹಾಯದಿಂದ ನನ್ನನ್ನ ಒಂದು ಎತ್ತರವಾದ ಬೆಟ್ಟಕ್ಕೆ ಕರ್ಕೊಂಡು ಹೋದ. ಪವಿತ್ರ ಪಟ್ಟಣವಾದ ಯೆರೂಸಲೇಮ್ ಸ್ವರ್ಗದಲ್ಲಿರೋ ದೇವರ ಹತ್ರದಿಂದ ಕೆಳಗೆ ಇಳಿದು ಬರೋದನ್ನ ನನಗೆ ತೋರಿಸಿದ.+ 11 ಅದ್ರಲ್ಲಿ ದೇವರ ಮಹಿಮೆ ತುಂಬಿತ್ತು.+ ಅದು ಅಮೂಲ್ಯವಾದ ರತ್ನದ ತರ, ಗಾಜಿನ ತರ ಸ್ಪಷ್ಟವಾಗಿತ್ತು. ಸೂರ್ಯಕಾಂತ ಮಣಿ ತರ ಪಳಪಳ ಅಂತ ಹೊಳಿತಿತ್ತು.+