ಯೆಶಾಯ
56 ಯೆಹೋವ ಹೀಗೆ ಹೇಳ್ತಿದ್ದಾನೆ
“ನ್ಯಾಯವನ್ನ ಪಾಲಿಸಿ,+ ಸರಿಯಾಗಿರೋದನ್ನೇ ಮಾಡಿ,
ಯಾಕಂದ್ರೆ ನಾನು ತಕ್ಷಣ ರಕ್ಷಣೆಯನ್ನ ತರ್ತಿನಿ,
ನನ್ನ ನೀತಿಯನ್ನ ಬಯಲುಪಡಿಸ್ತೀನಿ.+
2 ಹೀಗೆ ಮಾಡುವವನು,
ನನ್ನ ನಿಯಮಗಳನ್ನ ಭದ್ರವಾಗಿ ಹಿಡ್ಕೊಳ್ತಾನೆ,
ಸಬ್ಬತ್ತಿನ ದಿನ ಆಚರಿಸ್ತಾ ಅದನ್ನ ಪವಿತ್ರ ದಿನವನ್ನಾಗಿ ಕಾಣ್ತಾನೆ,+
ಯಾವುದೇ ರೀತಿಯ ಕೆಟ್ಟದ್ದನ್ನ ಮಾಡದೆ ಇರುವವನು ಸಂತೋಷವಾಗಿ ಇರ್ತಾನೆ.
ಹಾಗೇ ನಪುಂಸಕ* ‘ಇಗೋ! ನಾನು ಒಣಗಿಹೋಗಿರೋ ಮರ’ ಅಂತ ಅಂದ್ಕೊಬಾರದು.”
4 ಯಾಕಂದ್ರೆ ಯೆಹೋವ ಹೀಗೆ ಹೇಳ್ತಿದ್ದಾನೆ “ನನ್ನ ಸಬ್ಬತ್ಗಳನ್ನ ಆಚರಿಸ್ತಾ, ನನಗೆ ಇಷ್ಟವಾಗಿರೋದನ್ನ ಆರಿಸ್ಕೊಳ್ಳೋ, ನನ್ನ ಒಪ್ಪಂದಕ್ಕೆ ಯಾವಾಗ್ಲೂ ಬದ್ಧರಾಗಿರೋ ನಪುಂಸಕರಿಗೆ
5 ನಾನು ನನ್ನ ಆಲಯದಲ್ಲಿ ಒಂದು ಸ್ಥಳ ಕೊಡ್ತೀನಿ, ಒಂದು ಹೆಸ್ರನ್ನ ಕೊಡ್ತೀನಿ.
ಅದು ಗಂಡು ಹೆಣ್ಣು ಮಕ್ಕಳಿಗಿಂತ ಉತ್ತಮವಾಗಿರುತ್ತೆ.
ನಾನು ಅವ್ರಿಗೆ ಯಾವತ್ತೂ ಅಳಿದುಹೋಗದ,
ಶಾಶ್ವತಕ್ಕೂ ಉಳಿಯೋ ಹೆಸ್ರನ್ನ ಕೊಡ್ತೀನಿ.
6 ಯೆಹೋವನನ್ನ ಆರಾಧಿಸ್ತಾ ಆತನ ಸೇವೆಮಾಡೋಕೆ,
ಯೆಹೋವನ ಹೆಸ್ರನ್ನ ಪ್ರೀತಿಸೋಕೆ,+
ಆತನ ಸೇವಕರಾಗೋಕೆ ಮುಂದೆ ಬರೋ ವಿದೇಶಿಯರನ್ನ ಸಹ,
ಅಂದ್ರೆ ಸಬ್ಬತ್ತನ್ನ ಆಚರಿಸ್ತಾ ಅದನ್ನ ಅಪವಿತ್ರ ಮಾಡದೆ,
ನನ್ನ ಒಪ್ಪಂದಕ್ಕೆ ಯಾವಾಗ್ಲೂ ಬದ್ಧರಾಗಿರೋ ವಿದೇಶಿಯರನ್ನ ಸಹ,
7 ನಾನು ನನ್ನ ಪವಿತ್ರ ಬೆಟ್ಟದ ಹತ್ರ ಕರ್ಕೊಂಡು ಬರ್ತಿನಿ,+
ನನ್ನ ಪ್ರಾರ್ಥನಾಲಯದಲ್ಲಿ ಅವರು ಸಂತೋಷ ಪಡೋ ತರ ಮಾಡ್ತೀನಿ.
ನನ್ನ ಯಜ್ಞವೇದಿ ಮೇಲೆ ಅವರು ಅರ್ಪಿಸೋ ಸರ್ವಾಂಗಹೋಮ ಬಲಿಗಳನ್ನ ಮತ್ತು ಬೇರೆ ಬಲಿಗಳನ್ನ ನಾನು ಸ್ವೀಕರಿಸ್ತೀನಿ.
ಯಾಕಂದ್ರೆ ನನ್ನ ಆಲಯಕ್ಕೆ ಎಲ್ಲ ಜನ್ರಿಗಾಗಿ ಇರೋ ಪ್ರಾರ್ಥನಾ ಮಂದಿರ ಅನ್ನೋ ಹೆಸ್ರು ಬರುತ್ತೆ.”+
8 ಚೆದರಿಹೋಗಿರೋ ಇಸ್ರಾಯೇಲ್ಯರನ್ನ ಒಟ್ಟುಗೂಡಿಸ್ತಿರೋ ವಿಶ್ವದ ರಾಜನಾದ ಯೆಹೋವ+ ಹೀಗೆ ಘೋಷಿಸ್ತಿದ್ದಾನೆ “ನಾನು ಇಲ್ಲಿ ತನಕ ಒಟ್ಟುಸೇರಿಸಿದ ಜನ್ರನ್ನಲ್ಲದೆ ಬೇರೆಯವ್ರನ್ನೂ ಅವ್ರ ಹತ್ರ ಒಟ್ಟುಸೇರಿಸ್ತೀನಿ.”+
10 ಕಾವಲುಗಾರರು ಕುರುಡರಾಗಿದ್ದಾರೆ,+ ಅವ್ರಲ್ಲಿ ಒಬ್ರೂ ಗಮನಕೊಡಲ್ಲ.+
ಅವ್ರೆಲ್ಲ ಮೂಕ ನಾಯಿಗಳು, ಬೊಗಳೋಕಾಗಲ್ಲ.+
ಅವರು ಬಿದ್ಕೊಂಡು ಏದುಸಿರು ಬಿಡ್ತಿದ್ದಾರೆ, ಅವರು ನಿದ್ದೆ ಪ್ರಿಯರು.
11 ಅವರು ಊಟಕ್ಕಾಗಿ ಮೈಮೇಲೆ ಬೀಳೋ ಹೊಟ್ಟೆಬಾಕ ನಾಯಿಗಳು,
ಅವ್ರಿಗೆ ಯಾವತ್ತೂ ತೃಪ್ತಿಯಾಗಲ್ಲ.
ಅವರು ತಿಳುವಳಿಕೆಯಿಲ್ಲದ ಕುರುಬರು.+
ಅವ್ರೆಲ್ಲ ತಮ್ಮತಮ್ಮ ದಾರಿ ಹಿಡಿದಿದ್ದಾರೆ,
ಅವ್ರಲ್ಲಿ ಪ್ರತಿಯೊಬ್ಬ ಅನ್ಯಾಯದ ಲಾಭಕ್ಕೋಸ್ಕರ ಹಂಬಲಿಸ್ತಾ ಹೀಗನ್ನುತ್ತಾನೆ
12 “ನಾನು ಸ್ವಲ್ಪ ದ್ರಾಕ್ಷಾಮದ್ಯ ತರ್ತಿನಿ,
ಬನ್ನಿ, ಮತ್ತು ಏರೋ ತನಕ ನಾವು ಕುಡಿಯೋಣ.+
ನಾಳೆನೂ ಇವತ್ತಿನ ತರಾನೇ ಇರುತ್ತೆ, ಇಲ್ಲಾಂದ್ರೆ ಇನ್ನೂ ಚೆನ್ನಾಗಿರುತ್ತೆ!”