ಜ್ಞಾನೋಕ್ತಿ
26 ಬೇಸಿಗೆಯಲ್ಲಿ ಹಿಮ ಬೀಳಬಾರದು, ಸುಗ್ಗಿಕಾಲದಲ್ಲಿ ಮಳೆ ಸುರಿಬಾರದು.
ಅದೇ ರೀತಿ ಮೂರ್ಖನಿಗೆ ಗೌರವ ಕೊಡ್ಲೇಬಾರದು.+
2 ಹಕ್ಕಿಗೆ ತಪ್ಪಿಸ್ಕೊಂಡು ಹೋಗೋಕೆ, ಕವಲುತೋಕೆ ಪಕ್ಷಿಗೆ ಹಾರಿಹೋಗೋಕೆ ಕಾರಣ ಇರೋ ತರ,
ಒಂದೊಂದು ಶಾಪಕ್ಕೂ ಒಂದೊಂದು ಕಾರಣ ಇರುತ್ತೆ.*
6 ಮೂರ್ಖನಿಗೆ ಜವಾಬ್ದಾರಿ ವಹಿಸ್ಕೊಡುವವನು,
ಕಾಲು ಮುರಿದ್ಕೊಂಡು ತನಗೆ ತಾನೇ ಹಾನಿ ಮಾಡ್ಕೊಳ್ಳುವವನಿಗೆ ಸಮ.
8 ಮೂರ್ಖನಿಗೆ ಗೌರವ ಕೊಡೋದು,
ಕವಣೆಗೆ ಕಲ್ಲನ್ನ ಕಟ್ಟಿದ ಹಾಗೆ.+
9 ಮೂರ್ಖನ ಬಾಯಲ್ಲಿರೋ ಗಾದೆ,
ಕುಡುಕನ ಕೈಯಲ್ಲಿರೋ ಮುಳ್ಳುಗಿಡದ ಹಾಗೆ.
10 ದಾರೀಲಿ ಹೋಗುವವರನ್ನ, ದಡ್ಡರನ್ನ ಕೆಲಸಕ್ಕೆ ಇಟ್ಕೊಳ್ಳೋನು,
ಗೊತ್ತುಗುರಿ ಇಲ್ಲದೆ ಬಾಣ ಬಿಡೋ* ಬಿಲ್ಲುಗಾರನಿಗೆ ಸಮ.
11 ನಾಯಿ ತಾನು ಕಕ್ಕಿದ್ದನ್ನ ನೆಕ್ಕೋಕೆ ವಾಪಸ್ ಹೋದ ಹಾಗೆ,
ಮೂರ್ಖ ತನ್ನ ಮೂರ್ಖತನವನ್ನ ಮತ್ತೆ ಮತ್ತೆ ತೋರಿಸ್ತಾನೆ.+
12 ತಾನೇ ದೊಡ್ಡ ಬುದ್ಧಿವಂತ ಅಂದ್ಕೊಂಡಿರೋ ವ್ಯಕ್ತಿಯನ್ನ ನೋಡಿದ್ದೀಯಾ?+
ಅವನಿಗೆ ಸಹಾಯ ಮಾಡೋದಕ್ಕಿಂತ ಮೂರ್ಖನಿಗೆ ಸಹಾಯ ಮಾಡೋದು ಸುಲಭ.
13 ಸೋಮಾರಿ “ದಾರೀಲಿ ಸಿಂಹ ಇದೆ!
ಅದು ಪಟ್ಟಣದ ಮುಖ್ಯಸ್ಥಳದಲ್ಲಿ* ತಿರುಗಾಡ್ತಿದೆ!” ಅಂತಾನೆ.+
14 ಬಾಗಿಲು ತಿರುಗಣಿಯಲ್ಲಿ ತಿರುಗೋ ತರ,
ಸೋಮಾರಿ ತನ್ನ ಹಾಸಿಗೆ ಮೇಲೆ ಹೊರಳಾಡ್ತಾನೆ.+
16 ಸೋಮಾರಿ ತಿಳುವಳಿಕೆಯಿಂದ ಉತ್ತರ ಕೊಡೋ ಏಳು ಜನ್ರಿಗಿಂತ,
ತಾನೇ ಬುದ್ಧಿವಂತ ಅಂದ್ಕೊಳ್ತಾನೆ.
18 ಕೊಳ್ಳಿಗಳನ್ನ, ಅಂಬುಗಳನ್ನ, ಜೀವ ತೆಗಿಯೋ ಬಾಣಗಳನ್ನ ಎಸಿಯೋ ಹುಚ್ಚನೂ ಒಂದೇ,
19 ಪಕ್ಕದ ಮನೆಯವನಿಗೆ ಕುತಂತ್ರ ಮಾಡಿ “ಸುಮ್ನೆ ತಮಾಷೆ ಮಾಡ್ದೆ” ಅಂತ ಹೇಳುವವನೂ ಒಂದೇ.+
20 ಕಟ್ಟಿಗೆ ಇಲ್ಲದಿದ್ರೆ ಬೆಂಕಿ ಆರಿಹೋಗುತ್ತೆ,
ಸುಳ್ಳುಸುದ್ದಿ ಹಬ್ಬಿಸುವವನು ಇಲ್ಲದಿದ್ರೆ ಜಗಳ ನಿಂತುಹೋಗುತ್ತೆ.+
21 ಕೆಂಡಕ್ಕೆ ಇದ್ದಲು ಹೇಗೋ, ಬೆಂಕಿಗೆ ಕಟ್ಟಿಗೆ ಹೇಗೋ,
ಜಗಳ ಹೆಚ್ಚಿಸೋಕೆ ಜಗಳಗಂಟನೂ ಹಾಗೇ.+
24 ಬೇರೆಯವ್ರನ್ನ ದ್ವೇಷ ಮಾಡುವವನು ಚೆನ್ನಾಗೇನೋ ಮಾತಾಡ್ತಾನೆ,
ಆದ್ರೆ ಹೃದಯದಲ್ಲಿ ಮೋಸ ಕಪಟವನ್ನ ಬಚ್ಚಿಟ್ಟಿರ್ತಾನೆ.
25 ಅವನ ಜೇನಿನಂಥ ಮಾತುಗಳನ್ನ ನಂಬಬೇಡ,
ಯಾಕಂದ್ರೆ ಹೇಸಿಗೆ ಹುಟ್ಟಿಸೋ ಏಳು ವಿಷ್ಯ ಅವನ ಹೃದಯದಲ್ಲಿದೆ.*
26 ಅವನು ತನ್ನ ದ್ವೇಷವನ್ನ ಮೋಸದಿಂದ ಬಚ್ಚಿಟ್ರೂ,
ಸಭೆಯಲ್ಲಿ ಅವನ ಕೆಟ್ಟತನ ಬಯಲಾಗುತ್ತೆ.
27 ಗುಂಡಿ ತೋಡುವವನು ತಾನೇ ಅದ್ರಲ್ಲಿ ಬೀಳ್ತಾನೆ,
ಕಲ್ಲನ್ನ ಉರುಳಿಸುವವನ ಮೇಲೆ ಅದೇ ಕಲ್ಲು ಉರುಳಿ ಬರುತ್ತೆ.+
28 ಸುಳ್ಳು ನಾಲಿಗೆ ತನ್ನ ಸುಳ್ಳಿಗೆ ಬಲಿಯಾದವ್ರನ್ನ ದ್ವೇಷಿಸುತ್ತೆ,
ಬೆಣ್ಣೆ ಹಚ್ಚಿ ಮಾತಾಡೋ ಬಾಯಿ ನಾಶ ಆಗುತ್ತೆ.+