ಕೀರ್ತನೆ
ದಾವೀದನ ಮಧುರ ಗೀತೆ
29 ಶೂರವೀರರ ಮಕ್ಕಳೇ, ಯೆಹೋವನನ್ನ ಹೊಗಳಿ,
ಯೆಹೋವನ ಮಹಿಮೆಗಾಗಿ, ಬಲಕ್ಕಾಗಿ ಆತನಿಗೆ ಸಲ್ಲಿಸಬೇಕಾಗಿ ಇರೋದನ್ನ ಸಲ್ಲಿಸಿ.+
2 ಯೆಹೋವನ ಹೆಸ್ರಿಗೆ ಕೊಡಬೇಕಾದ ಗೌರವವನ್ನ ಕೊಡಿ.
ಪವಿತ್ರ ಬಟ್ಟೆಗಳನ್ನ ಹಾಕೊಂಡು* ಯೆಹೋವನಿಗೆ ಬಗ್ಗಿ ನಮಸ್ಕರಿಸಿ.*
3 ಮೋಡಗಳ ಮೇಲಿಂದ ಯೆಹೋವನ ಧ್ವನಿ ಕೇಳಿಸ್ತಿದೆ,
ಮಹಿಮಾಭರಿತ ದೇವರು ಗುಡುಗ್ತಿದ್ದಾನೆ.+
ಯೆಹೋವ ದಟ್ಟವಾದ ಮೋಡಗಳ ಮೇಲಿದ್ದಾನೆ.+
4 ಯೆಹೋವನ ಧ್ವನಿಯಲ್ಲಿ ಗತ್ತಿದೆ,+
ಯೆಹೋವನ ಸ್ವರ ಅದ್ಭುತವಾಗಿದೆ.
5 ಯೆಹೋವನ ಧ್ವನಿ ದೇವದಾರು ಮರಗಳನ್ನ ಸೀಳಿಹಾಕುತ್ತೆ,
ಯೆಹೋವ ಲೆಬನೋನಿನ ದೇವದಾರುಗಳನ್ನ ತುಂಡುತುಂಡು ಮಾಡ್ತಾನೆ.+
7 ಯೆಹೋವನ ಧ್ವನಿಯ ಜೊತೆ ಅಗ್ನಿ ಜ್ವಾಲೆ ಬರುತ್ತೆ.+
9 ಯೆಹೋವನ ಧ್ವನಿಗೆ ಜಿಂಕೆ ನಡುಗಿ ಮರಿ ಹಾಕುತ್ತೆ,
ಕಾಡಿಗೆ ಕಾಡೇ ಬರಿದಾಗಿ ಹೋಗುತ್ತೆ.+
ಆತನ ಆಲಯದಲ್ಲಿ ಎಲ್ರೂ “ದೇವರಿಗೆ ಮಹಿಮೆ!” ಅಂತ ಹೇಳ್ತಾರೆ.
11 ಯೆಹೋವ ತನ್ನ ಜನ್ರಿಗೆ ಬಲ ಕೊಡ್ತಾನೆ.+
ಯೆಹೋವ ತನ್ನ ಜನ್ರಿಗೆ ಶಾಂತಿ-ಸಮಾಧಾನ ಕೊಟ್ಟು ಆಶೀರ್ವದಿಸ್ತಾನೆ.+