ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ, “ನಾಶವಾಗೋಕೆ ಬಿಡಬೇಡ” ಅನ್ನೋ ರಾಗದಲ್ಲಿ ಹಾಡಬೇಕು. ದಾವೀದನ ಕೀರ್ತನೆ. ಮಿಕ್ತಾಮ್.*
58 ಜನ್ರೇ, ನೀವು ಮೌನವಾಗಿದ್ರೆ ನೀತಿ ಬಗ್ಗೆ ಮಾತಾಡೋಕೆ ಆಗುತ್ತಾ?+ ಸರಿಯಾಗಿ ತೀರ್ಪು ಕೊಡೋಕೆ ಆಗುತ್ತಾ?+
5 ಹಾವಾಡಿಗರು ಎಷ್ಟೇ ಚೆನ್ನಾಗಿ ಪುಂಗಿ ಊದಿದ್ರೂ
ಅದು ಅವ್ರ ಸ್ವರನ ಕೇಳಲ್ಲ.
6 ದೇವರೇ, ಅವ್ರ ಹಲ್ಲನ್ನ ಉದುರಿಸು!
ಯೆಹೋವನೇ, ಈ ಸಿಂಹಗಳ ದವಡೆಯನ್ನ ಮುರಿದುಬಿಡು!
7 ಹರಿದು ಹೋಗೋ ನೀರಿನ ತರ ಅವ್ರೂ ಕಾಣದೆ ಹೋಗಲಿ.
ದೇವರು ತನ್ನ ಬಿಲ್ಲನ್ನ ಬಾಗಿಸಿ, ಬಾಣಗಳಿಂದ ಅವ್ರನ್ನ ಬೀಳಿಸಲಿ.
8 ತೆವಳ್ತಾ ತೆವಳ್ತಾ ಕರಗಿಹೋಗೋ ಬಸವನ ಹುಳದ ತರ ಅವ್ರಾಗಲಿ,
ಅಮ್ಮನ ಹೊಟ್ಟೆಯಲ್ಲೇ ಸತ್ತು, ಸೂರ್ಯನ ಬೆಳಕನ್ನೇ ನೋಡದಿರೋ ಮಗುವಿನ ತರ ಅವ್ರಾಗಲಿ.
9 ಮುಳ್ಳಿನ ಪೊದೆ ಸುಟ್ಟು ಅದ್ರ ಬಿಸಿ ನಿಮ್ಮ ಅಡುಗೆ ಪಾತ್ರೆನ ತಾಕೋ ಮುಂಚೆ,
ಆ ಹಸಿರಾಗಿರೋ ಉರಿದುಹೋಗ್ತಿರೋ ಕಡ್ಡಿಗಳನ್ನ ಒಂದು ಬಿರುಗಾಳಿ ಎತ್ಕೊಂಡು ಹೋಗೋ ತರ ದೇವರು ಮಾಡ್ತಾನೆ.+
11 ಆಗ ಜನ್ರು “ನೀತಿವಂತನಿಗೆ ನಿಜವಾಗ್ಲೂ ಪ್ರತಿಫಲ ಇದೆ.+
ಭೂಮಿ ಮೇಲೆ ನ್ಯಾಯತೀರಿಸೋ ದೇವರೊಬ್ಬ ನಿಜವಾಗ್ಲೂ ಇದ್ದಾನೆ” ಅಂತಾರೆ.+