ಎರಡನೇ ಪೂರ್ವಕಾಲವೃತ್ತಾಂತ
15 ಓದೇದನ ಮಗ ಅಜರ್ಯನ ಮೇಲೆ ದೇವರ ಪವಿತ್ರಶಕ್ತಿ ಬಂತು. 2 ಹಾಗಾಗಿ ಅವನು ಆಸನನ್ನ ಭೇಟಿಯಾಗಿ ಹೀಗಂದ “ರಾಜ ಆಸನೇ, ಎಲ್ಲ ಯೆಹೂದ ಮತ್ತು ಬೆನ್ಯಾಮೀನ್ ಕುಲದವರೇ, ಕೇಳಿ! ನೀವು ಎಲ್ಲಿ ತನಕ ಯೆಹೋವನ ಪಕ್ಷದಲ್ಲಿ ಇರ್ತೀರೋ ಅಲ್ಲಿ ತನಕ ಆತನೂ ನಿಮ್ಮ ಜೊತೆ ಇರ್ತಾನೆ.+ ನೀವು ದೇವರನ್ನ ಹುಡುಕಿದ್ರೆ ಆತನು ನಿಮಗೆ ಸಿಕ್ತಾನೆ.+ ಆದ್ರೆ ನೀವು ಆತನನ್ನ ಬಿಟ್ರೆ ಆತನೂ ನಿಮ್ಮನ್ನ ಬಿಟ್ಟುಬಿಡ್ತಾನೆ.+ 3 ತುಂಬ ದಿನಗಳ ತನಕ ಇಸ್ರಾಯೇಲ್ಯರು ಸತ್ಯ ದೇವರಿಲ್ಲದೆ, ಪುರೋಹಿತರು ಇಲ್ಲದೆ, ನಿಯಮ ಪುಸ್ತಕ ಇಲ್ಲದೆ ಇದ್ರು.+ 4 ಆದ್ರೆ ಅವ್ರಿಗೆ ಕಷ್ಟ ಬಂದಾಗ ಅವರು ಇಸ್ರಾಯೇಲ್ ದೇವರಾದ ಯೆಹೋವನ ಹತ್ರ ವಾಪಸ್ ಹೋದ್ರು. ಅವರು ತನ್ನನ್ನ ಹುಡುಕೋಕೆ ದೇವರೇ ಅವ್ರಿಗೆ ಸಹಾಯಮಾಡಿದನು.+ 5 ದೇಶದಲ್ಲಿ ಶಾಂತಿ ಇಲ್ಲದಿದ್ರಿಂದ ಆಗ ಯಾರೂ ಸುರಕ್ಷಿತವಾಗಿ ಪ್ರಯಾಣ ಮಾಡೋಕೆ ಆಗ್ತಿರಲಿಲ್ಲ.* 6 ಎಲ್ಲ ತರದ ಕಷ್ಟಗಳಿಂದ ದೇವರು ಅವ್ರನ್ನ ಅಲ್ಲೋಲಕಲ್ಲೋಲ ಮಾಡಿದ್ರಿಂದ ಒಂದು ಜನಾಂಗ ಇನ್ನೊಂದು ಜನಾಂಗವನ್ನ, ಒಂದು ಪಟ್ಟಣ ಇನ್ನೊಂದು ಪಟ್ಟಣವನ್ನ ನಾಶಮಾಡ್ತಿತ್ತು.+ 7 ಆದ್ರೆ ಈಗ, ನೀವು ಧೈರ್ಯವಾಗಿರಿ. ಭಯಪಡಬೇಡಿ.*+ ನಿಮ್ಮ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತ್ತೆ.”
8 ಅಜರ್ಯ ಹೇಳಿದ ಈ ಮಾತುಗಳನ್ನ ಮತ್ತು ಪ್ರವಾದಿ ಓದೇದನ ಭವಿಷ್ಯವಾಣಿಯನ್ನ ಕೇಳಿದ ತಕ್ಷಣ ಆಸ ಧೈರ್ಯ ತಂದ್ಕೊಂಡ. ಯೆಹೂದದಿಂದ, ಬೆನ್ಯಾಮೀನಿಂದ ಮತ್ತು ಎಫ್ರಾಯೀಮ್ ಬೆಟ್ಟ ಪ್ರದೇಶದಲ್ಲಿ ಅವನು ವಶ ಮಾಡ್ಕೊಂಡಿದ್ದ ಪಟ್ಟಣಗಳಿಂದ ಅಸಹ್ಯ ಮೂರ್ತಿಗಳನ್ನ ತೆಗೆದುಹಾಕಿದ.+ ಯೆಹೋವನ ಮಂಟಪದ ಮುಂದೆ ಇದ್ದ ಯೆಹೋವನ ಯಜ್ಞವೇದಿನ ರಾಜ ಆಸ ಮತ್ತೆ ಕಟ್ಟಿಸಿದ.+ 9 ಎಫ್ರಾಯೀಮ್, ಮನಸ್ಸೆ, ಸಿಮೆಯೋನ್ ಪ್ರಾಂತ್ಯಗಳಲ್ಲಿದ್ದ ವಿದೇಶಿಯರಿಗೆ ಆಸನ ಜೊತೆ ಅವನ ದೇವರಾದ ಯೆಹೋವ ಇದ್ದಾನೆ ಅಂತ ಗೊತ್ತಾದಾಗ ಎಷ್ಟೋ ಜನ ಇಸ್ರಾಯೇಲನ್ನ ಬಿಟ್ಟು ಆಸನ ಹತ್ರ ಬಂದಿದ್ರು. ಹಾಗಾಗಿ ಆಸ ಯೆಹೂದ ಮತ್ತು ಬೆನ್ಯಾಮೀನಿನ ಎಲ್ಲ ಜನ್ರನ್ನ, ಆ ವಿದೇಶಿಯರನ್ನ ಒಟ್ಟುಸೇರಿಸಿದ.+ 10 ಆಸನ ಆಳ್ವಿಕೆಯ 15ನೇ ವರ್ಷದ ಮೂರನೇ ತಿಂಗಳಲ್ಲಿ ಅವ್ರೆಲ್ಲ ಯೆರೂಸಲೇಮಲ್ಲಿ ಒಟ್ಟುಸೇರಿದ್ರು. 11 ಅವರು ತಂದಿದ್ದ ಕೊಳ್ಳೆಯಿಂದ ಆ ದಿನ 700 ದನ ಮತ್ತು 7,000 ಕುರಿಗಳನ್ನ ಯೆಹೋವನಿಗೆ ಬಲಿ ಕೊಟ್ರು. 12 ಅಷ್ಟೇ ಅಲ್ಲ ಅವ್ರ ಪೂರ್ವಜರ ದೇವರಾದ ಯೆಹೋವನನ್ನ ಪೂರ್ಣ ಹೃದಯದಿಂದ ಮತ್ತು ಪೂರ್ಣ ಪ್ರಾಣದಿಂದ ಆರಾಧಿಸ್ತೀವಿ* ಅಂತ ಹೇಳಿ ಒಪ್ಪಂದ ಮಾಡ್ಕೊಂಡ್ರು.+ 13 ಇಸ್ರಾಯೇಲ್ ದೇವರಾದ ಯೆಹೋವನನ್ನ ಆರಾಧಿಸದೆ ಇರೋರು ಚಿಕ್ಕವರಾಗಿರಲಿ, ದೊಡ್ಡವರಾಗಿರಲಿ, ಗಂಡಸರಾಗಿರಲಿ, ಹೆಂಗಸರಾಗಿರಲಿ ಅವ್ರನ್ನ ಕೊಲ್ಲಬೇಕು.+ 14 ಹೀಗೆ ಅವರು ಗಟ್ಟಿ ಸ್ವರದಲ್ಲಿ, ಖುಷಿಯಿಂದ ಕೂಗ್ತಾ, ತುತ್ತೂರಿ ಮತ್ತು ಕೊಂಬುಗಳನ್ನ ಊದುತ್ತಾ ಯೆಹೋವನಿಗೆ ಮಾತುಕೊಟ್ರು. 15 ಹೀಗೆ ಮಾತು ಕೊಟ್ಟಿದ್ದಕ್ಕೆ ಯೆಹೂದದ ಜನ್ರು ಖುಷಿಪಟ್ರು. ಯಾಕಂದ್ರೆ ಅವರು ಹೃದಯದಾಳದಿಂದ ಈ ಮಾತು ಕೊಟ್ಟಿದ್ರು. ಅವರು ಆತನನ್ನ ತುಂಬ ಹುಡುಕಿದ್ರು. ಆಗ ಆತನು ಅವ್ರಿಗೆ ಸಿಕ್ಕಿದನು.+ ಅವ್ರ ಸುತ್ತ ಇದ್ದ ಶತ್ರುಗಳು ಆಕ್ರಮಣ ಮಾಡದೆ ಅವರು ನೆಮ್ಮದಿಯಿಂದ ಇರೋ ತರ ಯೆಹೋವ ನೋಡ್ಕೊಂಡ.+
16 ರಾಜ ಆಸ ತನ್ನ ಅಜ್ಜಿ ಮಾಕಾಳನ್ನ+ ರಾಜಮಾತೆಯ ಸ್ಥಾನದಿಂದ ಇಳಿಸಿದ. ಯಾಕಂದ್ರೆ ಅವಳು ಪೂಜಾಕಂಬದ*+ ಆರಾಧನೆಗಾಗಿ ಅಸಹ್ಯವಾದ ಒಂದು ಮೂರ್ತಿಯನ್ನ ಮಾಡಿಸಿದ್ದಳು. ಆಸ ಆ ಮೂರ್ತಿಯನ್ನ ಕಡಿದು, ಚೂರುಚೂರು ಮಾಡಿ ಕಿದ್ರೋನ್ ಕಣಿವೆಯಲ್ಲಿ ಸುಟ್ಟುಹಾಕಿದ.+ 17 ಆದ್ರೆ ಇಸ್ರಾಯೇಲಿನಲ್ಲಿದ್ದ ದೇವಸ್ಥಾನಗಳನ್ನ ತೆಗೆದುಹಾಕಲಿಲ್ಲ.+ ಹಾಗಿದ್ರೂ ಆಸ ಸಾಯೋ ತನಕ ಅವನ ಹೃದಯ ಸಂಪೂರ್ಣವಾಗಿ ದೇವರ ಕಡೆ ಇತ್ತು.+ 18 ಆಸ ಮತ್ತು ಅವನ ಅಪ್ಪ ಚಿನ್ನ, ಬೆಳ್ಳಿ ಮತ್ತು ಬೇರೆಬೇರೆ ಪಾತ್ರೆಗಳನ್ನ ಪವಿತ್ರ ಸೇವೆಗೆ ಅಂತಾನೇ ಇಟ್ಟಿದ್ರು. ಆಸ ಆ ವಸ್ತುಗಳನ್ನ ತಂದು ಸತ್ಯ ದೇವರ ಆಲಯದಲ್ಲಿ ಇಟ್ಟ.+ 19 ಆಸನ ಆಳ್ವಿಕೆಯಲ್ಲಿ 35 ವರ್ಷದ ತನಕ ಯಾವುದೇ ಯುದ್ಧ ಇರಲಿಲ್ಲ.+