ಯೆಶಾಯ
7 ಉಜ್ಜೀಯನ ಮೊಮ್ಮಗನೂ ಯೋತಾಮನ ಮಗನೂ ಆದ ಆಹಾಜ+ ಯೆಹೂದದ ರಾಜನಾಗಿದ್ದಾಗ ಅರಾಮ್ಯರ ರಾಜ ರೆಚೀನ ಮತ್ತು ಇಸ್ರಾಯೇಲ್ ರಾಜ ರೆಮಲ್ಯನ ಮಗ ಪೆಕಹ+ ಯೆರೂಸಲೇಮಿನ ವಿರುದ್ಧ ಯುದ್ಧಮಾಡೋಕೆ ಬಂದ್ರು. ಆದ್ರೆ ಆ ಪಟ್ಟಣ ವಶ ಮಾಡ್ಕೊಳ್ಳೋಕೆ ಅವನಿಂದ* ಆಗಲಿಲ್ಲ.+ 2 “ಅರಾಮ್ಯರು ಎಫ್ರಾಯೀಮ್ಯರ ಜೊತೆ ಸೇರ್ಕೊಂಡಿದ್ದಾರೆ” ಅನ್ನೋ ಸುದ್ದಿ ದಾವೀದನ ಮನೆತನಕ್ಕೆ ಸಿಕ್ತು.
ಆಗ ಆಹಾಜ ಅವನ ಪ್ರಜೆಗಳು ಹೆದರಿಹೋದ್ರು. ಕಾಡಲ್ಲಿರೋ ಮರಗಳು ಗಾಳಿಗೆ ಅಲ್ಲಾಡೋ ತರ ಭಯದಿಂದ ಅವ್ರ ಹೃದಯ ನಡುಗೋಕೆ ಶುರು ಆಯ್ತು.
3 ಆಮೇಲೆ ಯೆಹೋವ ಯೆಶಾಯನಿಗೆ ಹೀಗಂದನು “ದಯವಿಟ್ಟು ನೀನು ಮತ್ತು ನಿನ್ನ ಮಗ ಶೆಯಾರ್-ಯಾಶೂಬ್*+ ಹೋಗಿ ಎತ್ರದಲ್ಲಿದ್ದ ಕೆರೆಯ ಕಾಲುವೆಯ ಕೊನೆಯಲ್ಲಿ+ ಆಹಾಜನನ್ನ ಭೇಟಿಮಾಡಿ. ಅದು ಅಗಸರ ಮೈದಾನದ ಕಡೆ ಹೋಗೋ ಹೆದ್ದಾರಿಯಲ್ಲಿದೆ. 4 ನೀನು ಅವನಿಗೆ ಹೀಗೆ ಹೇಳಬೇಕು ‘ಹುಷಾರಾಗಿರು, ಹೆದರಬೇಡ. ಅರಾಮ್ಯರ ರಾಜ ರೆಚೀನ ಮತ್ತು ರೆಮಲ್ಯನ ಮಗ+ ಹೊತ್ತಿ ಉರಿತಿರೋ ಎರಡು ಮರದ ದಿಮ್ಮಿಗಳ ತರ ಇದ್ದಾರೆ, ಅವು ಇನ್ನೇನು ಸುಟ್ಟು ಭಸ್ಮವಾಗುತ್ತೆ. ಕುದಿತಿರೋ ಅವ್ರ ಕೋಪ ನೋಡಿ ನೀನು ಧೈರ್ಯ ಕಳ್ಕೋಬೇಡ. 5 ಅರಾಮ್ಯರು ಎಫ್ರಾಯೀಮ್ಯರ ಜೊತೆ ಮತ್ತು ರೆಮಲ್ಯನ ಜೊತೆ ಕೈಜೋಡಿಸಿ ನಿನಗೆ ಹಾನಿಮಾಡೋಕೆ ಸಂಚು ಹೂಡಿದ್ದಾರೆ. ಅವರು ಹೀಗೆ ಮಾತಾಡ್ಕೊಳ್ತಿದ್ದಾರೆ 6 “ನಾವು ಯೆಹೂದದ ವಿರುದ್ಧ ಹೋಗಿ ಅದನ್ನ ಸೀಳಿ* ವಶ ಮಾಡ್ಕೊಳ್ಳೋಣ,* ಟಾಬೆಯೇಲನ ಮಗನನ್ನ ಅದ್ರ ಮೇಲೆ ರಾಜನಾಗಿ ಮಾಡೋಣ.”+
8 ಅರಾಮಿನ ರಾಜಧಾನಿ ದಮಸ್ಕ,
ದಮಸ್ಕದ ರಾಜ ರೆಚೀನ,
ಕೇವಲ 65 ವರ್ಷದೊಳಗೆ
ಎಫ್ರಾಯೀಮ್ ಪೂರ್ತಿ ಚೆದರಿ ಹೋಗುತ್ತೆ,
ಆ ಜನಾಂಗನೇ ಇಲ್ಲವಾಗುತ್ತೆ.+
ನಿಮಗೆ ಬಲವಾದ ನಂಬಿಕೆ ಇಲ್ಲದಿದ್ರೆ
ನೀವು ದೃಢವಾಗಿ ನಿಲ್ಲಲ್ಲ.”’”
10 ಯೆಹೋವ ಆಹಾಜನಿಗೆ ಆಮೇಲೆ ಹೀಗಂದನು 11 “ನೀನು ನಿನ್ನ ದೇವರಾದ ಯೆಹೋವನಿಂದ ಒಂದು ಗುರುತನ್ನ ಕೇಳು,+ ಅದು ಸಮಾಧಿಯಷ್ಟು* ಆಳವಾಗಿದ್ರೂ ಅಥವಾ ಆಕಾಶದಷ್ಟು ಎತ್ರ ಇದ್ರೂ ಪರವಾಗಿಲ್ಲ.” 12 ಆದ್ರೆ ಆಹಾಜ “ಇಲ್ಲ, ನಾನು ಕೇಳಲ್ಲ. ನಾನು ಯೆಹೋವನನ್ನ ಪರೀಕ್ಷಿಸಲ್ಲ” ಅಂದ.
13 ಆಗ ಯೆಶಾಯ ಹೀಗಂದ “ದಾವೀದನ ಮನೆತನದವ್ರೇ, ದಯವಿಟ್ಟು ಕೇಳಿ. ಮನುಷ್ಯರ ತಾಳ್ಮೆಯನ್ನ ಪರೀಕ್ಷಿಸಿ ನಿಮಗೆ ಸಾಕಾಗಿಲ್ವಾ? ದೇವರ ತಾಳ್ಮೆಯನ್ನೂ ನೀವು ಪರೀಕ್ಷಿಸಬೇಕಾ?+ 14 ಹಾಗಾಗಿ ನಿಮಗೊಂದು ಗುರುತನ್ನ ಯೆಹೋವನೇ ಕೊಡ್ತಾನೆ: ನೋಡಿ! ಒಬ್ಬ ಯುವತಿ* ಗರ್ಭಿಣಿಯಾಗಿ ಒಂದು ಗಂಡು ಮಗುನ ಹೆರ್ತಾಳೆ+ ಮತ್ತು ಅವಳು ಆ ಮಗುಗೆ ಇಮ್ಮಾನುವೇಲ್*+ ಅಂತ ಹೆಸರಿಡ್ತಾಳೆ. 15 ಕೆಟ್ಟದ್ದನ್ನ ತಿರಸ್ಕರಿಸಿ ಒಳ್ಳೇದನ್ನ ಆರಿಸ್ಕೊಳ್ಳೋದು ಹೇಗಂತ ಅವನಿಗೆ ಗೊತ್ತಾಗುವಷ್ಟರಲ್ಲಿ ಅವನು ಬೆಣ್ಣೆಯನ್ನ, ಜೇನನ್ನ ತಿಂತಾನೆ. 16 ಕೆಟ್ಟದ್ದನ್ನ ತಿರಸ್ಕರಿಸಿ ಒಳ್ಳೇದನ್ನ ಆರಿಸ್ಕೊಳ್ಳೋದು ಹೇಗಂತ ಆ ಬಾಲಕನಿಗೆ ಗೊತ್ತಾಗೋದಕ್ಕಿಂತ ಮುಂಚೆನೇ ನೀನು ಹೆದರೋ ಆ ಇಬ್ರು ರಾಜರ ದೇಶ ಪೂರ್ತಿ ನಾಶವಾಗಿರುತ್ತೆ.+ 17 ಯೆಹೋವ ನಿನಗೆ, ನಿನ್ನ ಜನ್ರಿಗೆ, ನಿನ್ನ ತಂದೆಯ ಮನೆತನದವ್ರಿಗೆ ಎಂಥ ಕಷ್ಟಕಾಲ ತರ್ತಾನಂದ್ರೆ ಎಫ್ರಾಯೀಮಿಂದ ಯೆಹೂದ ಬೇರೆ ಆದ ದಿನದಿಂದ+ ಇಲ್ಲಿ ತನಕ ಅಂಥ ಕಾಲ ಬಂದಿಲ್ಲ. ಆತನು ನಿನ್ನ ವಿರುದ್ಧ ಅಶ್ಶೂರ್ಯರ ರಾಜನನ್ನ ಕಳಿಸ್ತಾನೆ.+
18 ಆ ದಿನ ಯೆಹೋವ ದೂರದಲ್ಲಿರೋ ಈಜಿಪ್ಟಿನ ನೈಲ್ ನದಿಯ ತೊರೆಗಳ ಹತ್ರದಿಂದ ನೊಣಗಳನ್ನ ಮತ್ತು ಅಶ್ಶೂರ್ಯರ ದೇಶದಿಂದ ಜೇನುನೊಣಗಳನ್ನ ಸೀಟಿ ಹೊಡೆದು ಕರಿತಾನೆ. 19 ಅವೆಲ್ಲ ಬಂದು ಕಡಿದಾದ ಕಣಿವೆಗಳ* ಮೇಲೆ, ಬಿರುಕು ಬಿದ್ದಿರೋ ಬಂಡೆಗಳ ಮೇಲೆ, ಎಲ್ಲ ಮುಳ್ಳುಪೊದೆಗಳ ಮೇಲೆ ಮತ್ತು ಹುಲ್ಲುಗಾವಲುಗಳ* ಮೇಲೆ ಮುತ್ತಿಕೊಳ್ಳುತ್ತೆ.
20 ಆ ದಿನ ಯೆಹೋವ ನದಿಯ* ಪ್ರಾಂತ್ಯದಿಂದ ಬಾಡಿಗೆಗೆ ತಂದ ಕ್ಷೌರಕತ್ತಿಯ ಮೂಲಕ ಅಂದ್ರೆ ಅಶ್ಶೂರ್ಯರ ರಾಜನ ಮೂಲಕ+ ತಲೆ ಕೂದಲನ್ನ, ಕಾಲಿನ ಮೇಲಿರೋ ಕೂದಲನ್ನ ಬೋಳಿಸಿಬಿಡ್ತಾನೆ. ಅದು ಗಡ್ಡವನ್ನೂ ಬೋಳಿಸಿಬಿಡುತ್ತೆ.
21 ಆ ದಿನ ಒಬ್ಬ ವ್ಯಕ್ತಿ ಮಂದೆಯಲ್ಲಿನ ಒಂದು ಕಡಸನ್ನ, ಎರಡು ಕುರಿಗಳನ್ನ ಜೀವಂತವಾಗಿ ಉಳಿಸ್ತಾನೆ. 22 ಹಾಲು ಸಮೃದ್ಧವಾಗಿ ಇರೋದ್ರಿಂದ ಬೆಣ್ಣೆ ತಿಂತಾನೆ. ದೇಶದಲ್ಲಿರೋ ಪ್ರತಿಯೊಬ್ರು ಬೆಣ್ಣೆಯನ್ನೂ ಜೇನನ್ನೂ ತಿಂತಾರೆ.
23 ಒಂದು ಕಾಲದಲ್ಲಿ 1,000 ಬೆಳ್ಳಿ ಶೆಕೆಲಿಗೆ ಸಮನಾದ 1,000 ದ್ರಾಕ್ಷಿಬಳ್ಳಿಗಳು ಇದ್ದ ಜಾಗಗಳಲ್ಲಿ ಆ ದಿನ ಮುಳ್ಳುಪೊದೆಗಳೂ ಕಳೆಗಳೂ ಇರುತ್ತೆ. 24 ಇಡೀ ದೇಶ ಮುಳ್ಳುಪೊದೆಗಳಿಂದ, ಕಳೆಗಳಿಂದ ತುಂಬಿ ಹೋಗೋದ್ರಿಂದ ಜನ ಅಲ್ಲಿಗೆ ಬಿಲ್ಲುಬಾಣಗಳನ್ನ ಹಿಡ್ಕೊಂಡು ಹೋಗ್ತಾರೆ. 25 ಒಂದು ಕಾಲದಲ್ಲಿ ಸಲಿಕೆಯಿಂದ ಕಳೆಗಳನ್ನ ತೆಗೆದುಹಾಕ್ತಿದ್ದ ಬೆಟ್ಟಗಳ ಮೇಲೆ ಈಗ ಮುಳ್ಳುಪೊದೆಗಳೂ ಕಳೆಗಳೂ ಬೆಳಿತಿರೋದ್ರಿಂದ ನೀವು ಅವುಗಳಿಗೆ ಹೆದರಿ ಅವುಗಳ ಹತ್ರನೂ ಸುಳಿಯಲ್ಲ. ಅವು ಹೋರಿಗಳಿಗೆ ಮತ್ತು ಕುರಿಗಳಿಗೆ ಮೇಯೋ ಸ್ಥಳವಾಗಿಬಿಡುತ್ತೆ.”