ಯೆಶಾಯ
39 ಆ ಕಾಲದಲ್ಲಿ ಬಾಬೆಲಿನ ರಾಜನೂ ಬಲದಾನನ ಮಗನೂ ಆದ ಮೆರೋದಕ-ಬಲದಾನನಿಗೆ ಹಿಜ್ಕೀಯ ಕಾಯಿಲೆ ಬಿದ್ದು ಚೇತರಿಸ್ಕೊಂಡಿದ್ದಾನೆ ಅಂತ ಗೊತ್ತಾಯ್ತು.+ ಆಗ ಅವನು ತನ್ನ ಸಂದೇಶವಾಹಕರ ಮೂಲಕ ಹಿಜ್ಕೀಯನಿಗೆ ಪತ್ರಗಳನ್ನ ಮತ್ತು ಉಡುಗೊರೆಯನ್ನ ಕಳಿಸ್ಕೊಟ್ಟ.+ 2 ಹಿಜ್ಕೀಯ ಅವ್ರನ್ನ ಸ್ವಾಗತಿಸಿ* ಅವ್ರಿಗೆ ತನ್ನ ಭಂಡಾರವನ್ನ ತೋರಿಸಿದ.+ ಅವನು ಬೆಳ್ಳಿ, ಬಂಗಾರ, ಸುಗಂಧ ತೈಲ ಮತ್ತು ಇತರ ಬೆಲೆ ಬಾಳೋ ತೈಲವನ್ನ, ಅವನ ಆಯುಧಗಳ ಇಡೀ ಭಂಡಾರವನ್ನ ಹೀಗೆ ತನ್ನ ಖಜಾನೆಯಲ್ಲಿದ್ದ ಎಲ್ಲವನ್ನೂ ತೋರಿಸಿದ. ಹಿಜ್ಕೀಯ ತನ್ನ ಅರಮನೆಯಲ್ಲಿ, ರಾಜ್ಯದಲ್ಲಿ ಅವ್ರಿಗೆ ತೋರಿಸದೆ ಇದ್ದ ಒಂದೇ ಒಂದು ವಸ್ತುನೂ ಇರಲಿಲ್ಲ.
3 ಆಮೇಲೆ ಪ್ರವಾದಿ ಯೆಶಾಯ ರಾಜ ಹಿಜ್ಕೀಯನ ಹತ್ರ ಬಂದು “ಆ ಗಂಡಸ್ರು ಎಲ್ಲಿಂದ ಬಂದಿದ್ರು? ನಿನ್ನ ಹತ್ರ ಏನು ಮಾತಾಡಿದ್ರು?” ಅಂತ ಕೇಳಿದ. ಆಗ ಹಿಜ್ಕೀಯ “ಅವರು ತುಂಬ ದೂರ ದೇಶವಾದ ಬಾಬೆಲಿಂದ ಬಂದಿದ್ರು”+ ಅಂದ. 4 ಆಮೇಲೆ ಯೆಶಾಯ “ನಿನ್ನ ಅರಮನೆಯಲ್ಲಿ ಅವರು ಏನೆಲ್ಲ ನೋಡಿದ್ರು?” ಅಂತ ಕೇಳಿದ. ಅದಕ್ಕೆ ಹಿಜ್ಕೀಯ “ಅವರು ನನ್ನ ಅರಮನೆಯಲ್ಲಿ ಇರೋದೆಲ್ಲ ನೋಡಿದ್ರು. ನಾನು ನನ್ನ ಖಜಾನೆಯಲ್ಲಿ ಅವ್ರಿಗೆ ತೋರಿಸದೆ ಬಿಟ್ಟ ವಸ್ತು ಯಾವುದೂ ಇಲ್ಲ” ಅಂದ.
5 ಆಗ ಯೆಶಾಯ ಹಿಜ್ಕೀಯನಿಗೆ “ಸೈನ್ಯಗಳ ದೇವರಾದ ಯೆಹೋವನ ಮಾತನ್ನ ಕೇಳು. 6 ಯೆಹೋವ ಹೇಳ್ತಿದ್ದಾನೆ+ ‘ನೋಡು, ನಿನ್ನ ಅರಮನೆಯಲ್ಲಿ ಇರೋದನ್ನೆಲ್ಲ ಮತ್ತು ನಿನ್ನ ಪೂರ್ವಜರು ಇವತ್ತಿನ ತನಕ ಕೂಡಿಸಿಟ್ಟಿರೋದನ್ನೆಲ್ಲ ಬಾಬೆಲಿಗೆ ತಗೊಂಡು ಹೋಗೋ ದಿನ ಹತ್ರ ಆಗ್ತಿದೆ. ಆಗ ಏನೂ ಉಳಿಯಲ್ಲ.+ 7 ಅಷ್ಟೇ ಅಲ್ಲ ನಿನಗೆ ಹುಟ್ಟೋ ಗಂಡು ಮಕ್ಕಳಲ್ಲಿ ಕೆಲವ್ರನ್ನ ಬಾಬೆಲಿಗೆ ತಗೊಂಡು ಹೋಗಿ ಅವ್ರನ್ನ ಬಾಬೆಲಿನ ರಾಜನ ಅರಮನೆಯಲ್ಲಿ ಆಸ್ಥಾನದ ಅಧಿಕಾರಿಗಳಾಗಿ ಮಾಡಲಾಗುತ್ತೆ’”+ ಅಂದ.
8 ಅದಕ್ಕೆ ಹಿಜ್ಕೀಯ ಯೆಶಾಯನಿಗೆ “ನೀನು ಹೇಳಿದ ಯೆಹೋವನ ಆ ಮಾತು ನ್ಯಾಯವಾಗಿದೆ. ಯಾಕಂದ್ರೆ ನಾನು ಬದುಕಿರೋ ತನಕ ನನ್ನ ರಾಜ್ಯದಲ್ಲಿ ಶಾಂತಿ ಮತ್ತು ಭದ್ರತೆ* ಇರೋದು ದೇವರ ದಯೆ”+ ಅಂದ.