ಇಬ್ರಿಯರಿಗೆ ಬರೆದ ಪತ್ರ
3 ಹಾಗಾಗಿ ಸ್ವರ್ಗಕ್ಕೆ ಹೋಗೋಕೆ ಆಮಂತ್ರಣ ಸಿಕ್ಕಿರೋ ಪವಿತ್ರ ಸಹೋದರರೇ,+ ಅಪೊಸ್ತಲ ಮತ್ತು ಮಹಾ ಪುರೋಹಿತ ಅಂತ ನಾವು ಒಪ್ಪಿರೋ* ಯೇಸು ಬಗ್ಗೆ ನೀವು ಚೆನ್ನಾಗಿ ಯೋಚಿಸಿ.+ 2 ಮೋಶೆ ದೇವರ ಇಡೀ ಮನೇಲಿ ಹೇಗೆ ನಂಬಿಕೆಯಿಂದ ಸೇವೆ ಮಾಡಿದ್ನೋ ಅದೇ ತರ+ ಯೇಸು ತನ್ನನ್ನ ನೇಮಿಸಿದ ದೇವರಿಗೆ ನಂಬಿಗಸ್ತನಾಗಿದ್ದ.+ 3 ಆದ್ರೆ ಮನೆಗಿಂತ ಮನೆ ಕಟ್ಟಿದವನಿಗೆ ಜಾಸ್ತಿ ಮರ್ಯಾದೆ ಸಿಗೋ ತರ ಮೋಶೆಗಿಂತ ಆತನು* ಜಾಸ್ತಿ ಮಹಿಮೆ ಪಡಿಯೋಕೆ ಯೋಗ್ಯನಾಗಿದ್ದಾನೆ.+ 4 ನಿಜ ಹೇಳಬೇಕಂದ್ರೆ, ಪ್ರತಿಯೊಂದು ಮನೆಯನ್ನ ಯಾರಾದ್ರೂ ಒಬ್ರು ಕಟ್ಟಿರ್ತಾರೆ. ಆದ್ರೆ ಎಲ್ಲವನ್ನೂ ಸೃಷ್ಟಿಸಿದ್ದು* ದೇವರೇ. 5 ದೇವರ ಇಡೀ ಮನೇಲಿ ಮೋಶೆ ನಂಬಿಗಸ್ತ ಸೇವಕನಾಗಿದ್ದ. ಅವನ ಆ ಸೇವೆ ದೇವರು ಮುಂದೆ ತಿಳಿಸೋ ವಿಷ್ಯಗಳಿಗೆ ಸಾಕ್ಷಿಯಾಗಿತ್ತು. 6 ಆದ್ರೆ ದೇವರ ಮನೆಯ ಜವಾಬ್ದಾರಿ ಹೊತ್ಕೊಂಡಿರೋ ಕ್ರಿಸ್ತನು ನಂಬಿಗಸ್ತ ಮಗನಾಗಿದ್ದ.+ ನಾವು ಧೈರ್ಯವನ್ನ,* ಹೆಮ್ಮೆ ಪಡೋ ನಿರೀಕ್ಷೆಯನ್ನ ಕೊನೆ ತನಕ ಕಾಪಾಡ್ಕೊಂಡ್ರೆ ನಾವು ದೇವರ ಮನೆ ಆಗಿರ್ತೀವಿ.+
7 ಹಾಗಾಗಿ ಪವಿತ್ರಶಕ್ತಿ ಹೀಗೆ ಹೇಳುತ್ತೆ+ “ಇವತ್ತು ನೀವು ನನ್ನ ಮಾತನ್ನ ಕೇಳಿಸ್ಕೊಳ್ಳುವಾಗ 8 ಹೃದಯ ಕಲ್ಲು ಮಾಡ್ಕೊಬೇಡಿ. ನಿಮ್ಮ ಪೂರ್ವಜರು ಕಾಡಲ್ಲಿ ನನ್ನನ್ನ ಪರೀಕ್ಷಿಸಿದ ದಿನ ನನಗೆ ತುಂಬ ಕೋಪ ಬರಿಸಿದ ತರ ನಡ್ಕೊಬೇಡಿ.+ 9 ಅಲ್ಲಿ ಅವರು 40 ವರ್ಷ ನನ್ನ ಕೆಲಸಗಳನ್ನ ಕಣ್ಣಾರೆ ನೋಡಿದ್ರೂ ನನ್ನನ್ನ ಪರೀಕ್ಷೆ ಮಾಡಿದ್ರು.+ 10 ಹಾಗಾಗಿ ಈ ಪೀಳಿಗೆಯಿಂದ ರೋಸಿಹೋಗಿ ‘ಅವರು ಹಠಹಿಡಿದು ಮನಸ್ಸಿಗೆ ಬಂದ ಹಾಗೆ ನಡಿತಾರೆ. ಅವರು ನನ್ನನ್ನ ತಿಳ್ಕೊಂಡಿಲ್ಲ’ ಅಂತ ಹೇಳ್ದೆ. 11 ನಾನು ಸಿಟ್ಟಿಂದ ‘ಅವರು ನನ್ನ ಜೊತೆ ವಿಶ್ರಾಂತಿ ಪಡಿಯಲ್ಲ’ ಅಂತ ಆಣೆ ಮಾಡ್ದೆ.”+
12 ಸಹೋದರರೇ, ನಿಮ್ಮಲ್ಲಿ ಯಾರೂ ಜೀವ ಇರೋ ದೇವರಿಂದ ದೂರ ಹೋಗದೆ ಇರೋ ತರ ಹುಷಾರಾಗಿರಿ! ಹಾಗೆ ಹೋದ್ರೆ ನಂಬಿಕೆ ಇಲ್ಲದ ಕೆಟ್ಟ ಹೃದಯ ನಿಮ್ಮಲ್ಲಿ ಬೆಳಿಯುತ್ತೆ.+ 13 “ಇವತ್ತು”+ ಅನ್ನೋ ದಿನ ಇರೋ ತನಕ ನಾವು ಪ್ರತಿದಿನ ಒಬ್ರನ್ನೊಬ್ರು ಪ್ರೋತ್ಸಾಹಿಸ್ತಾ ಇರೋಣ. ಆಗ ನಿಮ್ಮಲ್ಲಿ ಯಾರ ಹೃದಯನೂ ಪಾಪಕ್ಕಿರೋ ಮೋಸದ ಶಕ್ತಿಯಿಂದ ಕಲ್ಲಾಗಲ್ಲ. 14 ಯಾಕಂದ್ರೆ ಮೊದ್ಲು ನಮಗಿದ್ದ ನಂಬಿಕೆಯನ್ನ ಕೊನೇ ತನಕ ಕಾಪಾಡ್ಕೊಂಡ್ರೆ ಮಾತ್ರ ಕ್ರಿಸ್ತ ಪಡ್ಕೊಂಡಿದ್ದನ್ನ ನಾವು ಪಡಿಯೋಕೆ ಆಗುತ್ತೆ.+ 15 “ಇವತ್ತು ನೀವು ನನ್ನ ಮಾತನ್ನ ಕೇಳಿಸ್ಕೊಳ್ಳುವಾಗ ಹೃದಯ ಕಲ್ಲು ಮಾಡ್ಕೊಬೇಡಿ. ನಿಮ್ಮ ಪೂರ್ವಜರು ನನಗೆ ತುಂಬ ಕೋಪ ಬರಿಸಿದ ತರ ನೀವು ನಡ್ಕೊಬೇಡಿ” ಅಂತ ಹೇಳಲಾಗಿದೆ.+
16 ದೇವರ ಧ್ವನಿ ಕೇಳಿದ್ರೂ ಆತನಿಗೆ ತುಂಬ ಕೋಪ ಬರಿಸಿದ್ದು ಯಾರು? ಮೋಶೆಯ ಮೇಲ್ವಿಚಾರಣೆಯ ಕೆಳಗೆ ಈಜಿಪ್ಟಿಂದ ಬಂದವ್ರೇ ತಾನೇ?+ 17 ಅಷ್ಟೇ ಅಲ್ಲ 40 ವರ್ಷ ಆತನಿಗೆ ಯಾರಿಂದ ರೋಸಿಹೋಯ್ತು?+ ಪಾಪ ಮಾಡಿದವ್ರಿಂದಾನೇ ಅಲ್ವಾ? ಕಾಡಲ್ಲಿ ಅವ್ರ ಶವಗಳು ಬಿದ್ವು ಅಲ್ವಾ?+ 18 ತನ್ನ ಜೊತೆ ವಿಶ್ರಾಂತಿ ಪಡಿಯಲ್ಲ ಅಂತ ಆತನು ಯಾರಿಗೆ ಆಣೆ ಮಾಡಿ ಹೇಳಿದ? ಆತನ ಮಾತು ಕೇಳದವ್ರಿಗೆ ಅಲ್ವಾ? 19 ನಂಬಿಕೆ ಇಲ್ಲದೆ ಇದ್ದಿದ್ರಿಂದ ಅವರು ಆತನ ಜೊತೆ ವಿಶ್ರಾಂತಿ ಪಡಿಯೋಕೆ ಆಗಲಿಲ್ಲ ಅಂತ ನಮಗೆ ಗೊತ್ತಾಗುತ್ತೆ.+