ಕೀರ್ತನೆ
33 ನೀತಿವಂತರೇ, ಯೆಹೋವ ಮಾಡಿದ ಒಳ್ಳೇ ಕೆಲಸಗಳಿಗೆ ಖುಷಿಯಾಗಿ ಜೈಕಾರ ಹಾಕಿ.+
ನೀತಿವಂತರು ಆತನನ್ನ ಹೊಗಳಲೇಬೇಕು.
2 ತಂತಿವಾದ್ಯಗಳನ್ನ ನುಡಿಸಿ ಯೆಹೋವನಿಗೆ ಧನ್ಯವಾದ ಹೇಳಿ,
ಹತ್ತು ತಂತಿಗಳ ವಾದ್ಯ ನುಡಿಸ್ತಾ ಆತನನ್ನ ಹಾಡಿ ಹೊಗಳಿ.*
3 ಆತನಿಗಾಗಿ ಹೊಸ ಹಾಡನ್ನ ಹಾಡಿ,+
ಸಂತೋಷದಿಂದ ಜೈಕಾರ ಹಾಕ್ತಾ ತಂತಿವಾದ್ಯಗಳನ್ನ ಚೆನ್ನಾಗಿ ನುಡಿಸಿ.
4 ಯಾಕಂದ್ರೆ ಯೆಹೋವನ ಮಾತು ಸತ್ಯ,+
ಆತನು ಮಾಡೋದೆಲ್ಲ ನಂಬೋಕೆ ಯೋಗ್ಯ.
5 ಆತನು ನೀತಿ ನ್ಯಾಯವನ್ನ ಪ್ರೀತಿಸ್ತಾನೆ.+
ಭೂಮಿ ಯೆಹೋವನ ಶಾಶ್ವತ ಪ್ರೀತಿಯಿಂದ ತುಂಬಿಹೋಗಿದೆ.+
7 ಅಣೆಕಟ್ಟಿನ ನೀರಿನ ಹಾಗೆ ಆತನು ಸಮುದ್ರದ ನೀರನ್ನ ಕೂಡಿಸ್ತಾನೆ,+
ಉಕ್ಕೇರೋ ಜಲರಾಶಿನ ಆತನು ಕಣಜದಲ್ಲಿ ಸಂಗ್ರಹಿಸ್ತಾನೆ.
8 ಇಡೀ ಭೂಮಿ ಯೆಹೋವನಿಗೆ ಭಯಪಡಲಿ.+
ಭೂಮಿಯಲ್ಲಿ ಇರೋರೆಲ್ಲ ಆತನನ್ನ ನೋಡಿ ಆಶ್ಚರ್ಯಪಡಲಿ.
12 ಯಾವ ಜನಾಂಗದ ಜನ್ರಿಗೆ ಯೆಹೋವ ದೇವರಾಗಿ ಇರ್ತಾನೋ,+
ಯಾವ ಜನ್ರನ್ನ ಆತನು ತನ್ನ ಆಸ್ತಿಯಾಗಿ ಆರಿಸ್ಕೊಂಡಿದ್ದಾನೋ ಅವರು ಭಾಗ್ಯವಂತರು.+
13 ಯೆಹೋವ ಸ್ವರ್ಗದಿಂದ ಕೆಳಗೆ ನೋಡ್ತಾನೆ,
ಆತನ ಕಣ್ಣು ಎಲ್ಲ ಜನ್ರ ಮೇಲಿರುತ್ತೆ.+
14 ಆತನು ತನ್ನ ಸ್ವರ್ಗದಿಂದ,
ಜನ್ರನ್ನ ದಿಟ್ಟಿಸಿ ನೋಡ್ತಾನೆ.
15 ಎಲ್ರ ಹೃದಯಗಳನ್ನ ರೂಪಿಸಿದವನು ಆತನೇ,
ಅವ್ರ ಕೆಲಸಗಳನ್ನೆಲ್ಲ ಪರೀಕ್ಷಿಸುವವನೂ ಆತನೇ.+
16 ಯಾವ ರಾಜನಿಗೂ ದೊಡ್ಡ ಸೈನ್ಯದಿಂದ ರಕ್ಷಣೆ ಸಿಗಲ್ಲ.+
ಒಬ್ಬ ವ್ಯಕ್ತಿ ಎಷ್ಟೇ ಶಕ್ತಿಶಾಲಿ ಆಗಿದ್ರೂ ಅವನ ಶಕ್ತಿ ಅವನನ್ನ ಕಾಪಾಡಲ್ಲ.+
17 ಕುದುರೆಯಿಂದ ರಕ್ಷಣೆ* ಸಿಗುತ್ತೆ ಅನ್ನೋದು ಸುಳ್ಳು.+
ಅದಕ್ಕೆ ತುಂಬ ಶಕ್ತಿ ಇದ್ರೂ ಅದು ಕಾಪಾಡಕ್ಕಾಗಲ್ಲ.
20 ನಾವು ಯೆಹೋವನಿಗಾಗಿ ಕಾಯ್ತಾ ಇರ್ತಿವಿ.
ಆತನೇ ನಮ್ಮ ಸಹಾಯಕ, ಆತನೇ ನಮ್ಮ ಗುರಾಣಿ.+
21 ನಮ್ಮ ಹೃದಯಗಳು ಆತನಲ್ಲಿ ಖುಷಿಪಡುತ್ತೆ,
ಯಾಕಂದ್ರೆ ಆತನ ಪವಿತ್ರ ಹೆಸ್ರಿನ ಮೇಲೆ ನಮಗೆ ಭರವಸೆ ಇದೆ.+