ಕೀರ್ತನೆ
ಆಸಾಫನ+ ಮಧುರ ಗೀತೆ.
79 ದೇವರೇ, ಬೇರೆ ದೇಶದ ಜನ್ರು ನಿನ್ನ ಆಸ್ತಿ ಮೇಲೆ ಆಕ್ರಮಣ ಮಾಡಿದ್ರು,+
ಅವರು ನಿನ್ನ ಪವಿತ್ರ ಆಲಯವನ್ನ ಅಪವಿತ್ರ ಮಾಡಿದ್ರು,+
ಯೆರೂಸಲೇಮನ್ನ ಪಾಳುಬಿದ್ದ ಪಟ್ಟಣವಾಗಿ ಮಾಡಿದ್ರು.+
2 ಅವರು ನಿನ್ನ ಸೇವಕರ ಶವಗಳನ್ನ ಆಕಾಶದ ಪಕ್ಷಿಗಳಿಗೆ,
ನಿನ್ನ ನಿಷ್ಠಾವಂತರ ಮಾಂಸವನ್ನ ಭೂಮಿಯ ಕ್ರೂರ ಮೃಗಗಳಿಗೆ ಆಹಾರವಾಗಿ ಕೊಟ್ರು.+
3 ಅವರು ನಿನ್ನ ಸೇವಕರ ರಕ್ತನ ಯೆರೂಸಲೇಮಿನ ಸುತ್ತ ನೀರಿನ ತರ ಹರಿಸಿದ್ರು,
ನಿನ್ನ ಸೇವಕರ ಶವಗಳನ್ನ ಮಣ್ಣುಮಾಡೋಕೆ ಯಾರೂ ಉಳಿದಿರಲಿಲ್ಲ.+
4 ನಮ್ಮ ಅಕ್ಕಪಕ್ಕ ಇರೋರು ನಮ್ಮನ್ನ ನೋಯಿಸ್ತಿದ್ದಾರೆ,+
ನಮ್ಮ ಸುತ್ತ ಇರೋರು ನಮ್ಮನ್ನ ನೋಡಿ ನಗ್ತಾರೆ, ಅಣಕಿಸ್ತಾರೆ.
5 ಯೆಹೋವನೇ, ಎಲ್ಲಿ ತನಕ ನೀನು ಹೀಗೆ ಕೋಪಮಾಡ್ಕೊಂಡು ಇರ್ತೀಯ? ಶಾಶ್ವತವಾಗಿ ಹೀಗೇ ಇರ್ತಿಯಾ?+
ಎಲ್ಲಿ ತನಕ ಬೆಂಕಿ ತರ ನಿನ್ನ ಕೋಪ ಉರಿತಾನೇ ಇರುತ್ತೆ?+
6 ನಿನ್ನ ಕಡುಕೋಪವನ್ನ ನಿನ್ನ ಬಗ್ಗೆ ಗೊತ್ತಿಲ್ಲದ ಜನ್ರ ಮೇಲೆ ಸುರಿ,
ನಿನ್ನ ರೋಷನ ನಿನ್ನ ಹೆಸರೆತ್ತಿ ಪ್ರಾರ್ಥನೆ ಮಾಡದ ರಾಜ್ಯಗಳ ಮೇಲೆ ಹಾಕು.+
7 ಯಾಕಂದ್ರೆ ಅವರು ಯಾಕೋಬನನ್ನ ನುಂಗಿಹಾಕಿದ್ದಾರೆ,
ಅವನ ಸ್ವದೇಶವನ್ನ ನಿರ್ಜನ ಮಾಡಿದ್ದಾರೆ.+
8 ನಮ್ಮ ಪೂರ್ವಜರು ಮಾಡಿದ ತಪ್ಪುಗಳಿಗೆ ನಮ್ಮಿಂದ ಲೆಕ್ಕ ಕೇಳಬೇಡ.+
ಬೇಗ ನಮಗೆ ನಿನ್ನ ಕರುಣೆ ತೋರಿಸು,+
ಯಾಕಂದ್ರೆ ನಾವು ಪೂರ್ತಿಯಾಗಿ ಕೆಳಗೆ ಬಿದ್ದುಬಿಟ್ಟಿದ್ದೀವಿ.
10 “ಅವರ ದೇವರು ಎಲ್ಲಿದ್ದಾನೆ?” ಅಂತ ಜನ ಯಾಕೆ ಹೇಳಬೇಕು,+
ನಿನ್ನ ಸೇವಕರ ರಕ್ತ ಸುರಿಸಿದಕ್ಕೆ ನೀನು ಸೇಡು ತೀರಿಸ್ತೀಯ ಅಂತ ಆ ಜನ್ರಿಗೆ ಗೊತ್ತಾಗಲಿ,
ಅದನ್ನ ನಮ್ಮ ಕಣ್ಣು ನೋಡಲಿ.+
11 ಕೈದಿಯ ನಿಟ್ಟುಸಿರು ನಿನಗೆ ಕೇಳಿಸಲಿ.+