ಯೆಶಾಯ
46 ಬೇಲ್ ಬೊಗ್ಗಿಕೊಂಡಿದೆ,+ ನೆಬೋ ತಲೆ ತಗ್ಗಿಸಿದೆ.
ಅವುಗಳ ಮೂರ್ತಿಗಳನ್ನ ಪ್ರಾಣಿಗಳ ಮೇಲೆ, ಭಾರವನ್ನ ಹೊರೋ ಪ್ರಾಣಿಗಳ ಮೇಲೆ ಇಡಲಾಗಿದೆ.+
ಅವು ಬಳಲಿ ಹೋಗಿರೋ ಪ್ರಾಣಿಗಳ ಮೇಲಿನ ಭಾರದಂತಿವೆ.
2 ಬೇಲ್ ಮತ್ತು ನೆಬೋ ತಲೆ ತಗ್ಗಿಸಿ ಒಟ್ಟಾಗಿ ಬಾಗಿಕೊಂಡಿವೆ,
ಈ ದೇವರುಗಳು, ಪ್ರಾಣಿಗಳ ಮೇಲೆ ಹೇರಲಾಗಿರೋ ತಮ್ಮ ಸ್ವಂತ ಮೂರ್ತಿಗಳನ್ನ ಕಾಪಾಡಲಾರವು,
ಸ್ವತಃ ಅವೇ ಬಂದಿವಾಸಕ್ಕೆ ಹೋಗ್ತವೆ.
3 “ಯಾಕೋಬನ ಮನೆತನದವ್ರೇ, ಇಸ್ರಾಯೇಲಿನ ಮನೆತನದಲ್ಲಿ ಉಳಿದವ್ರೇ ನನಗೆ ಕಿವಿಗೊಡಿ,+
ನೀವು ಹುಟ್ಟಿದಾಗಿಂದ ನಾನು ನಿಮ್ಮನ್ನ ಬೆಂಬಲಿಸ್ತಾ ಬಂದೆ, ಗರ್ಭದಲ್ಲಿ ಇದ್ದಾಗಿಂದ ನಿಮ್ಮನ್ನ ಹೊರ್ತಾ ಬಂದೆ.+
ಇಲ್ಲಿ ತನಕ ಮಾಡಿದ ಹಾಗೆ ನಾನು ನಿಮ್ಮನ್ನ ಎತ್ಕೊಳ್ತೀನಿ, ಹೊರ್ತಿನಿ ಮತ್ತು ಕಾಪಾಡ್ತೀನಿ.+
5 ನನ್ನನ್ನ ನೀವು ಯಾರಿಗೆ ಹೋಲಿಸ್ತೀರ? ನೀನು ಅವನ ತರಾನೇ ಇರ್ತಿಯ ಅಂತ ಯಾರಿಗೆ ಹೋಲಿಕೆ ಮಾಡ್ತೀರ?+
ನಾನು ಯಾರ ಜೊತೆ ಸರಿಸಮಾನ ಅಂತ ಹೇಳ್ತೀರ? ನನ್ನನ್ನ ಯಾರ ಜೊತೆ ತುಲನೆಮಾಡಿ ನೋಡ್ತೀರ?+
6 ತಮ್ಮ ಚೀಲಗಳಲ್ಲಿ ಚಿನ್ನವನ್ನ ತಂದು ಸುರಿಯುವವ್ರಿದ್ದಾರೆ,
ಅವರು ತಕ್ಕಡಿಯಲ್ಲಿ ಬೆಳ್ಳಿಯನ್ನ ತೂಗಿನೋಡ್ತಾರೆ,
ಅಕ್ಕಸಾಲಿಗನಿಗೆ ಕೂಲಿ ಕೊಟ್ಟು ಕೆಲಸಕ್ಕೆ ಇಡ್ತಾರೆ, ಅವನ ಕೈಯಿಂದ ಒಂದು ದೇವರ ಮೂರ್ತಿಯನ್ನ ಮಾಡಿಸ್ತಾರೆ.+
ಆಮೇಲೆ ಅವರು ಅದಕ್ಕೆ ಅಡ್ಡಬಿದ್ದು ಅದನ್ನ ಆರಾಧಿಸ್ತಾರೆ.*+
7 ಅವರು ಅದನ್ನ ತಮ್ಮ ಭುಜಗಳ ಮೇಲೆ ಹೊತ್ಕೊಂಡು ಹೋಗ್ತಾರೆ,+
ಅದನ್ನ ಮೆರವಣಿಗೆ ಮಾಡಿಸಿ ಅದ್ರ ಸ್ಥಳದಲ್ಲಿ ಇಡ್ತಾರೆ,
ಅದು ಅದ್ರ ಸ್ಥಳವನ್ನ ಬಿಟ್ಟು ಅಲುಗಾಡಲ್ಲ.+
ಅವರು ಅದಕ್ಕೆ ಎಷ್ಟೇ ಮೊರೆಯಿಟ್ರೂ ಅದು ಅವ್ರಿಗೆ ಉತ್ರ ಕೊಡಲ್ಲ.
ಯಾರನ್ನೂ ಕಷ್ಟಗಳಿಂದ ಬಿಡಿಸೋಕೆ ಅದ್ರಿಂದ ಆಗಲ್ಲ.+
8 ಇದನ್ನ ನೆನಪಲ್ಲಿಟ್ಕೊಳ್ಳಿ, ಧೈರ್ಯ ತಂದ್ಕೊಳ್ಳಿ.
ಅಪರಾಧಿಗಳೇ, ಇದನ್ನ ಮನಸ್ಸಲ್ಲಿ ಇಟ್ಕೊಳ್ಳಿ.
ನಾನೇ ದೇವರು, ನನ್ನ ತರ ಬೇರೆ ಯಾರೂ ಇಲ್ಲ.+
10 ಮುಂದೆ ಏನಾಗುತ್ತೆ ಅಂತ ನಾನು ತುಂಬ ಮುಂಚೆನೇ ಹೇಳ್ತೀನಿ.
ಇನ್ನೂ ನಡೆಯದ ವಿಷ್ಯಗಳನ್ನ ನಾನು ತುಂಬ ಹಿಂದೆನೇ ಹೇಳಿದ್ದೆ.+
11 ನಾನು ಪೂರ್ವದಿಂದ ಒಂದು ಹದ್ದನ್ನ ಕರಿತೀನಿ,+
ನನ್ನ ನಿರ್ಣಯವನ್ನ* ನೆರವೇರಿಸೋ ತರ ದೂರದ ದೇಶದಿಂದ ಒಬ್ಬ ವ್ಯಕ್ತಿಯನ್ನ ಕರಿತೀನಿ.+
ನಾನು ಹೇಳಿದ್ದೀನಿ, ಅದನ್ನ ಮಾಡೇ ಮಾಡ್ತೀನಿ.
ನಾನು ಉದ್ದೇಶಿಸಿದ್ದೀನಿ, ಅದನ್ನ ನೆರವೇರಿಸಿಯೇ ನೆರವೇರಿಸ್ತೀನಿ.+
13 ತುಂಬ ಬೇಗ ನಾನು ನನ್ನ ನೀತಿಯನ್ನ ತೋರಿಸ್ತೀನಿ,
ಅದು ತಡವಾಗಲ್ಲ.
ನಾನು ದಯಪಾಲಿಸೋ ರಕ್ಷಣೆ ಬೇಗ ಬರುತ್ತೆ.+
ನಾನು ಚೀಯೋನಿನಲ್ಲಿ ರಕ್ಷಣೆಯನ್ನ ದಯಪಾಲಿಸ್ತೀನಿ,
ಇಸ್ರಾಯೇಲನ್ನ ನನ್ನ ವೈಭವದಿಂದ ತುಂಬಿಸ್ತೀನಿ.”+