2 ದೇಶಗಳು ಯಾಕಷ್ಟು ಕೋಪ ಮಾಡ್ಕೊಂಡಿವೆ?
ಜನ ಕೆಟ್ಟ ವಿಷ್ಯಗಳ ಬಗ್ಗೆ ಯಾಕಷ್ಟು ಗೊಣಗ್ತಿದ್ದಾರೆ?+
2 ರಾಜರು ಯೆಹೋವನ ಮತ್ತು ಆತನ ಅಭಿಷಿಕ್ತನ ವಿರುದ್ಧ ನಿಂತಿದ್ದಾರೆ,+
ದೊಡ್ಡ ಅಧಿಕಾರಿಗಳು ಅವರ ವಿರುದ್ಧ ಒಟ್ಟುಸೇರಿದ್ದಾರೆ.+
3 “ಹಾಕಿರೋ ಬೇಡಿಗಳನ್ನ ಮುರಿದು ಹಾಕೋಣ,
ಕಟ್ಟಿರೋ ಹಗ್ಗಗಳನ್ನ ಕಿತ್ತು ಬಿಸಾಡೋಣ” ಅಂತ ಹೇಳ್ತಿದ್ದಾರೆ.
4 ಸ್ವರ್ಗದಲ್ಲಿರೋ ದೇವರು ಅವರನ್ನ ನೋಡಿ ನಗ್ತಾನೆ,
ಯೆಹೋವ ಅವರನ್ನ ಅಣಕಿಸ್ತಾನೆ.
5 ಆಗ ಆತನು ಅವರ ಜೊತೆ ಕೋಪದಿಂದ ಮಾತಾಡ್ತಾನೆ,
ಅವರನ್ನ ತನ್ನ ರೋಷಾಗ್ನಿಯಿಂದ ಹೆದರಿಸ್ತಾನೆ.
6 ಆತನು ಅವರಿಗೆ, “ನಾನು ಮಾಡಿರೋ ರಾಜನನ್ನ,+
ನನ್ನ ಪವಿತ್ರ ಬೆಟ್ಟವಾದ ಚೀಯೋನಿನ+ ಮೇಲೆ ಕೂರಿಸಿದ್ದೀನಿ” ಅಂತ ಹೇಳ್ತಾನೆ.
7 ನಾನು ಯೆಹೋವನ ಆಜ್ಞೆಯನ್ನ ಹೇಳ್ತೀನಿ.
ಆತನು ನನಗೆ ಹೀಗೆ ಹೇಳಿದ್ದಾನೆ: “ನೀನು ನನ್ನ ಮಗ,+
ಇವತ್ತಿಂದ ನಾನು ನಿನ್ನ ಅಪ್ಪ.+
8 ನನ್ನ ಕೇಳು, ದೇಶಗಳನ್ನ ಆಸ್ತಿಯಾಗಿ ಕೊಡ್ತೀನಿ,
ಇಡೀ ಭೂಮಿಯನ್ನ ನಿನ್ನ ಸೊತ್ತಾಗಿ ಮಾಡ್ತೀನಿ.+
9 ನೀನು ಅವರನ್ನ ಕಬ್ಬಿಣದ ರಾಜದಂಡದಿಂದ ಚೂರುಚೂರು ಮಾಡ್ತೀಯ,+
ಮಣ್ಣಿನ ಮಡಿಕೆ ಒಡೆಯೋ ತರ ಅವರನ್ನ ಒಡೆದು ಹಾಕ್ತೀಯ.”+
10 ಹಾಗಾಗಿ ರಾಜರೇ, ಚೆನ್ನಾಗಿ ಯೋಚಿಸಿ ನಡ್ಕೊಳ್ಳಿ,
ಭೂಮಿಯ ನ್ಯಾಯಾಧೀಶರೇ, ಎಚ್ಚರಿಕೆನ ಕೇಳಿಸ್ಕೊಳ್ಳಿ.
11 ಭಯಭಕ್ತಿಯಿಂದ ಯೆಹೋವನ ಸೇವೆಮಾಡಿ,
ಆತನಿಗೆ ತುಂಬ ಗೌರವ ಕೊಡ್ತಾ ಖುಷಿಪಡಿ.
12 ದೇವರ ಮಗನಿಗೆ ಗೌರವಕೊಡಿ,+ ಇಲ್ಲದಿದ್ರೆ ದೇವರಿಗೆ ಕೋಪ ಬಂದು,
ನೀವು ನಿಮ್ಮ ಪ್ರಾಣ ಕಳ್ಕೊಳ್ತೀರ.+
ಯಾಕಂದ್ರೆ ಆತನ ಕೋಪ ಯಾವಾಗ ಬೇಕಾದ್ರೂ ಹೊತ್ತಿ ಉರಿಬಹುದು.
ಆತನಲ್ಲಿ ಆಶ್ರಯ ಪಡ್ಕೊಳ್ಳೋ ಜನ ಖುಷಿಯಾಗಿ ಇರ್ತಾರೆ.