ರೂತ್
2 ನೊವೊಮಿಗೆ ತನ್ನ ಗಂಡ ಎಲೀಮೆಲೆಕನ ಕಡೆಯಿಂದ ಒಬ್ಬ ಸಂಬಂಧಿಕ ಇದ್ದ. ಅವನ ಹೆಸ್ರು ಬೋವಜ,+ ದೊಡ್ಡ ಶ್ರೀಮಂತ.
2 ಮೋವಾಬಿನ ರೂತ್ ನೊವೊಮಿಗೆ “ನೀನು ಒಪ್ಪಿಗೆ ಕೊಟ್ರೆ ನಾನು ಯಾರದಾದ್ರೂ ಹೊಲಕ್ಕೆ ಹೋಗ್ತಿನಿ, ಅವರು ದಯೆ ತೋರಿಸಿ ಹೊಲದಲ್ಲಿ ತೆನೆಗಳನ್ನ ಬಿಟ್ಟಿದ್ರೆ ಕೂಡಿಸ್ಕೊಂಡು+ ಬರ್ತೀನಿ” ಅಂದಳು. ಅದಕ್ಕೆ ನೊವೊಮಿ “ಹೋಗಮ್ಮ” ಅಂದಳು. 3 ಆಗ ರೂತ್ ಹೊಲಕ್ಕೆ ಹೋಗಿ ಕೊಯ್ಯುವವರ ಹಿಂದೆನೇ ಹೋಗ್ತಾ ತೆನೆಗಳನ್ನ ಕೂಡಿಸೋಕೆ ಶುರುಮಾಡಿದಳು. ಹಾಗೆ ತೆನೆಗಳನ್ನ ಕೂಡಿಸ್ತಾ ಎಲೀಮೆಲೆಕನ+ ಕುಟುಂಬಕ್ಕೆ ಸೇರಿದ ಬೋವಜನ+ ಹೊಲಕ್ಕೆ ಬಂದಳು. 4 ಆಗ್ಲೇ ಬೋವಜ ಬೆತ್ಲೆಹೇಮಿಂದ ಹೊಲಕ್ಕೆ ಬಂದ. ಅವನು ಕೊಯ್ಲುಗಾರರಿಗೆ “ಯೆಹೋವ ನಿಮ್ಮ ಜೊತೆ ಇರ್ಲಿ” ಅಂತ ವಂದಿಸಿದ. ಅದಕ್ಕವರು “ಯೆಹೋವ ನಿನ್ನನ್ನ ಆಶೀರ್ವದಿಸ್ಲಿ” ಅಂದ್ರು.
5 ಆಮೇಲೆ ಬೋವಜ ಕೊಯ್ಲುಗಾರರ ಮೇಲ್ವಿಚಾರಕನಿಗೆ “ಈ ಹುಡುಗಿ ಯಾರು? ಯಾರ ಕುಟುಂಬದವಳು?” ಅಂತ ಕೇಳಿದ. 6 ಅವನು ಅದಕ್ಕೆ “ಅವಳು ಮೋವಾಬ್ ದೇಶದವಳು.+ ಅಲ್ಲಿಂದ ನೊವೊಮಿ ಜೊತೆ ಬಂದಿದ್ದಾಳೆ.+ 7 ನನ್ನ ಹತ್ರ ‘ಕೊಯ್ಲುಗಾರರು* ಬಿಟ್ಟಿರೋ ತೆನೆ ಕೂಡಿಸೋಕೆ+ ದಯವಿಟ್ಟು ಅನುಮತಿ ಕೊಡು’ ಅಂತ ಕೇಳಿದಳು. ಬೆಳಿಗ್ಗೆ ಬಂದವಳು ಇಲ್ಲಿ ತನಕ ಕೂಡಿಸ್ತಾ ಇದ್ದಳು. ಈಗಷ್ಟೇ ಸ್ವಲ್ಪ ಆರಾಮ ಮಾಡೋಕೆ ಚಪ್ಪರದ ಕೆಳಗೆ ಕೂತಳು” ಅಂದ.
8 ಆಗ ಬೋವಜ ರೂತ್ಗೆ “ಮಗಳೇ ತೆನೆ ಕೂಡಿಸೋಕೆ ಬೇರೆ ಯಾರ ಹೊಲಕ್ಕೂ ಹೋಗಬೇಡ. ನನ್ನ ಹೊಲದಲ್ಲಿ ಕೆಲಸಮಾಡೋ ಹೆಂಗಸ್ರ ಜೊತೆನೇ ಇರು.+ 9 ಅವ್ರು ಎಲ್ಲಿ ಕಟಾವು ಮಾಡ್ತಾರೆ ಅಂತ ನೋಡ್ತಾ ಇರು, ಅವ್ರ ಜೊತೆನೇ ಹೋಗು. ನಿನಗೆ ತೊಂದ್ರೆ ಕೊಡಬಾರದು* ಅಂತ ಇಲ್ಲಿ ಕೆಲಸ ಮಾಡೋ ಗಂಡಸ್ರಿಗೆ ಹೇಳಿದ್ದೀನಿ. ನಿನಗೆ ಬಾಯಾರಿಕೆ ಆದ್ರೆ ನನ್ನ ಆಳುಗಳು ಮಡಿಕೆಯಲ್ಲಿ ಸೇದಿಟ್ಟಿರೋ ನೀರು ಕುಡಿ” ಅಂದ.
10 ಆಗ ರೂತ್ ಮಂಡಿಹಾಕಿ ಬಗ್ಗಿ “ನಾನು ಬೇರೆ ದೇಶದವಳಾಗಿದ್ರೂ ನನ್ನನ್ನ ನೋಡಿ ದಯೆ ತೋರಿಸ್ತಿದ್ದೀರ ಯಾಕೆ?”+ ಅಂತ ಕೇಳಿದಳು. 11 ಅದಕ್ಕೆ ಬೋವಜ “ನೀನು ಗಂಡ ತೀರಿಕೊಂಡ ಮೇಲೆ ಅತ್ತೆಗಾಗಿ ಏನೆಲ್ಲಾ ಮಾಡ್ದೆ ಅಂತ ನನಗೆ ಗೊತ್ತಾಯ್ತು. ಅಪ್ಪ-ಅಮ್ಮ, ಹುಟ್ಟೂರು, ಬಂಧುಬಳಗ ಎಲ್ಲ ಬಿಟ್ಟು ಪರಿಚಯನೇ ಇಲ್ದಿರೋ ಜನ್ರ ಹತ್ರ ಬಂದಿದ್ದೀಯ ಅಂತ ಗೊತ್ತಾಯ್ತು.+ 12 ಇದಕ್ಕೆಲ್ಲ ಯೆಹೋವ ನಿನ್ನನ್ನ ಆಶೀರ್ವದಿಸ್ತಾನೆ.+ ಇಸ್ರಾಯೇಲಿನ ದೇವರಾದ ಯೆಹೋವನ ರೆಕ್ಕೆ ಕೆಳಗೆ ಆಶ್ರಯ ಪಡಿಯೋಕೆ ಬಂದಿರೋದ್ರಿಂದ ಆತನು ನಿನಗೆ ದೊಡ್ಡ ಬಹುಮಾನ ಕೊಡ್ತಾನೆ”+ ಅಂದ. 13 ಅದಕ್ಕೆ ಅವಳು “ನನ್ನ ಒಡೆಯ, ನಿನ್ನ ದಯೆ ನನ್ನ ಮೇಲೆ ಯಾವಾಗ್ಲೂ ಇರ್ಲಿ. ಯಾಕಂದ್ರೆ ನಾನು ನಿನ್ನ ಆಳುಗಳಲ್ಲಿ ಒಬ್ಬಳಲ್ಲ, ಆದ್ರೂ ನನ್ನ ಮನಸ್ಸಿಗೆ ನೆಮ್ಮದಿ, ಭರವಸೆ ಕೊಡೋ ಮಾತುಗಳನ್ನ ಹೇಳ್ದೆ” ಅಂದಳು.
14 ಊಟದ ಸಮಯದಲ್ಲಿ ಬೋವಜ ರೂತ್ಗೆ “ಇಲ್ಲಿ ಬಾ, ರೊಟ್ಟಿ ತಗೋ. ಹುಳಿರಸದಲ್ಲಿ* ಅದ್ದಿ ತಿನ್ನು” ಅಂದ. ಆಗ ಅವಳು ಕೊಯ್ಲುಗಾರರ ಜೊತೆ ಕೂತಳು. ಆಮೇಲೆ ಅವರು ಸ್ವಲ್ಪ ಸುಟ್ಟ ತೆನೆಗಳನ್ನ ಕೂಡ ಕೊಟ್ರು. ಹೊಟ್ಟೆ ತುಂಬ ತಿಂದ ಮೇಲೂ ಅವಳ ಹತ್ರ ಇನ್ನೂ ಉಳಿತು. 15 ಅವಳು ಮತ್ತೆ ತೆನೆ ಕೂಡಿಸೋಕೆ+ ಹೋದಾಗ ಕೆಲಸ ಮಾಡೋ ಗಂಡಸ್ರಿಗೆ ಬೋವಜ “ಕಟಾವು ಮಾಡಿದ ತೆನೆಗಳನ್ನೂ* ಅವಳು ತಗೊಳ್ಳಲಿ, ತೊಂದ್ರೆ ಕೊಡಬೇಡಿ.+ 16 ಕಟ್ಟುಗಳಿಂದಾನೂ ಸ್ವಲ್ಪ ತೆನೆ ತೆಗೆದು ಹಾಕಿ. ಅದನ್ನೂ ಕೂಡಿಸುವಾಗ ಅವಳನ್ನ ಬಯ್ಯಬೇಡಿ” ಅಂತ ಆಜ್ಞೆ ಕೊಟ್ಟ.
17 ಹಾಗಾಗಿ ರೂತ್ ಸಂಜೆ ತನಕ ತೆನೆ ಕೂಡಿಸಿದಳು.+ ಅದನ್ನೆಲ್ಲ ಬಡಿದಾಗ ಒಂದು ಏಫಾದಷ್ಟು* ಬಾರ್ಲಿ ಸಿಕ್ತು. 18 ಅದನ್ನ ತಗೊಂಡು ಊರೊಳಗೆ ಹೋದಳು. ಅವಳು ಕೂಡಿಸಿ ತಂದಿದ್ದನ್ನ ಅತ್ತೆ ನೋಡಿದಳು. ರೂತ್ ಉಳಿದಿದ್ದ+ ಸುಟ್ಟ ತೆನೆಯನ್ನ ಅತ್ತೆಗೆ ಕೊಟ್ಟಳು.
19 ಆಗ ಅತ್ತೆ “ಯಾರ ಹೊಲದಲ್ಲಿ ಇವತ್ತು ತೆನೆ ಕೂಡಿಸ್ದೆ? ನಿನಗೆ ದಯೆ ತೋರಿಸಿದವರನ್ನ ದೇವ್ರು ಆಶೀರ್ವದಿಸ್ಲಿ”+ ಅಂದಳು. ಅದಕ್ಕೆ ರೂತ್ “ಬೋವಜ ಅನ್ನೋ ವ್ಯಕ್ತಿಯ ಹೊಲದಲ್ಲಿ ತೆನೆ ಕೂಡಿಸ್ದೆ” ಅಂದಳು. 20 ಆಗ ನೊವೊಮಿ “ಯೆಹೋವ ಅವನನ್ನ ಆಶೀರ್ವದಿಸ್ತಾನೆ. ಬದುಕಿರೋ ಸತ್ತಿರೋ ಎಲ್ರಿಗೂ ದೇವರು ಶಾಶ್ವತ ಪ್ರೀತಿ ತೋರಿಸಿದ್ದಾನೆ.+ ಬೋವಜ ನಮ್ಮ ಸಂಬಂಧಿಕ, ನಮ್ಮನ್ನ ಬಿಡಿಸೋಕೆ ಹಕ್ಕು ಇರೋ*+ ಹತ್ರದ ಸಂಬಂಧಿಕರಲ್ಲಿ ಒಬ್ಬ”+ ಅಂದಳು. 21 ಆಗ ಮೋವಾಬಿನ ರೂತ್ “ಅವನು ನನಗೆ ‘ಕೊಯ್ಲಿನ ಕಾಲ ಮುಗಿಯೋ ತನಕ ನನ್ನ ಆಳುಗಳ ಜೊತೆನೇ ಇರು’ ಅಂತಾನೂ ಹೇಳಿದ್ದಾನೆ”+ ಅಂದಳು. 22 ಅದಕ್ಕೆ ನೊವೊಮಿ “ಮಗಳೇ ನೀನು ಬೇರೆಯವ್ರ ಹೊಲಕ್ಕೆ ಹೋಗಿ ಕಿರುಕುಳ ಅನುಭವಿಸೋದಕ್ಕಿಂತ ಅವನ ಹೊಲದಲ್ಲಿ ಕೆಲಸ ಮಾಡೋ ಹೆಂಗಸ್ರ ಜೊತೆ ಇರೋದೇ ಒಳ್ಳೇದು” ಅಂದಳು.
23 ಹಾಗಾಗಿ ರೂತ್ ಬಾರ್ಲಿ+ ಮತ್ತು ಗೋದಿ ಕೊಯ್ಲು ಮುಗಿಯೋ ತನಕ ಬೋವಜನ ಹೊಲದಲ್ಲಿ ಕೆಲಸ ಮಾಡೋ ಹೆಂಗಸ್ರ ಜೊತೆ ತೆನೆ ಕೂಡಿಸಿದಳು. ಅವಳು ಅತ್ತೆ ಜೊತೆನೇ ಇದ್ದಳು.+