ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ ಕೋರಹನ+ ಮಕ್ಕಳ ಗೀತೆ. ಅಲಾಮೋತ್ ಶೈಲಿಯಲ್ಲಿ* ರಚಿಸಿದ ಗೀತೆ.
2 ಹಾಗಾಗಿ ಭೂಮಿ ಬದಲಾದ್ರೂ
ಬೆಟ್ಟಗಳು ಉರುಳಿ ಸಮುದ್ರದ ಆಳಕ್ಕೆ ಬಿದ್ರೂ ನಾವು ಹೆದ್ರಲ್ಲ,+
3 ಸಮುದ್ರದ ನೀರು ಪ್ರವಾಹದ ತರ ನೊರೆ ಕಾರಿದ್ರೂ+
ಸಮುದ್ರ ಅಲ್ಲೋಲಕಲ್ಲೋಲವಾಗಿ ಬೆಟ್ಟಗಳು ಅಲ್ಲಾಡಿದ್ರೂ ನಾವು ಭಯಪಡಲ್ಲ. (ಸೆಲಾ)
5 ಆ ಪಟ್ಟಣದಲ್ಲಿ ದೇವರಿದ್ದಾನೆ,+ ಹಾಗಾಗಿ ಅದನ್ನ ಉರುಳಿಸೋಕೆ ಆಗಲ್ಲ.
ಬೆಳಕು ಹರಿಯೋವಾಗ್ಲೇ ದೇವರು ಅದ್ರ ಸಹಾಯಕ್ಕಾಗಿ ಬರ್ತಾನೆ.+
6 ದೇಶಗಳು ತತ್ತರಿಸಿದ್ವು, ರಾಜ್ಯಗಳು ಉರುಳಿಹೋದ್ವು,
ದೇವರು ತನ್ನ ಸ್ವರ ಎತ್ತಿದಾಗ ಭೂಮಿ ಕರಗಿಹೋಯ್ತು.+
8 ಬಂದು ಯೆಹೋವನ ಕೆಲಸಗಳನ್ನ ನೋಡಿ,
ಆತನು ಭೂಮಿಯಲ್ಲಿರೋ ವಿಸ್ಮಯಕರ ವಿಷ್ಯಗಳನ್ನ ಹೇಗೆ ಮಾಡಿದ್ದಾನೆ ಅಂತ ನೋಡಿ.
9 ಆತನು ಭೂಮಿಯಲ್ಲಿ ಎಲ್ಲ ಕಡೆ ಯುದ್ಧಗಳನ್ನ ನಿಲ್ಲಿಸಿಬಿಡ್ತಾನೆ.+
ಬಾಣಗಳನ್ನ ಮುರಿದು, ಈಟಿಗಳನ್ನ ನುಚ್ಚುನೂರು ಮಾಡ್ತಾನೆ,
ಯುದ್ಧ ರಥಗಳನ್ನ* ಬೆಂಕಿಯಲ್ಲಿ ಸುಟ್ಟುಹಾಕ್ತಾನೆ.
10 ಆತನು ಹೀಗೆ ಹೇಳಿದ “ಸೋಲನ್ನ ಒಪ್ಕೊಳ್ಳಿ, ನಾನೇ ದೇವರು ಅಂತ ತಿಳ್ಕೊಳ್ಳಿ.