ಕೀರ್ತನೆ
ಧನ್ಯವಾದದ ಮಧುರ ಗೀತೆ.
100 ಇಡೀ ಭೂಮಿಯ ಜನ್ರೇ, ಯೆಹೋವನಿಗೆ ಜೈಕಾರ ಹಾಕಿ.+
2 ಸಂತೋಷದಿಂದ ಯೆಹೋವನ ಸೇವೆ ಮಾಡಿ.+
ಸಂತೋಷದಿಂದ ಜೈಕಾರ ಹಾಕ್ತಾ ಆತನ ಸನ್ನಿಧಿಗೆ ಬನ್ನಿ.
3 ಯೆಹೋವನೇ ದೇವರು ಅಂತ ತಿಳ್ಕೊಳ್ಳಿ.*+
ನಮ್ಮನ್ನ ಸೃಷ್ಟಿಸಿದ್ದು ಆತನೇ, ನಾವು ಆತನಿಗೆ ಸೇರಿದವರು.+
ನಾವು ಆತನ ಜನ್ರು, ಆತನು ಪರಿಪಾಲಿಸೋ ಜನ್ರು.+
ಆತನಿಗೆ ಧನ್ಯವಾದ ಹೇಳಿ, ಆತನ ಹೆಸ್ರನ್ನ ಕೊಂಡಾಡಿ.+
ಆತನ ಪ್ರೀತಿ ಶಾಶ್ವತ,
ಆತನ ನಂಬಿಗಸ್ತಿಕೆ ನಿರಂತರ.+