ಕೀರ್ತನೆ
ಮೋಸಗಾರನ, ಅನೀತಿವಂತನ ಕೈಯಿಂದ ನನ್ನನ್ನ ಬಿಡಿಸು.
2 ಯಾಕಂದ್ರೆ ನೀನು ನನ್ನ ದೇವರು, ನನ್ನ ಭದ್ರವಾದ ಕೋಟೆ.+
ನೀನು ಯಾಕೆ ನನ್ನನ್ನ ತಳ್ಳಿಬಿಟ್ಟಿದ್ದೀಯಾ?
ನನ್ನ ಶತ್ರುವಿನ ದಬ್ಬಾಳಿಕೆಯಿಂದ ನಾನು ಯಾಕೆ ದುಃಖದಿಂದ ತಿರುಗಾಡಬೇಕು?+
3 ನಿನ್ನ ಬೆಳಕನ್ನ, ನಿನ್ನ ಸತ್ಯವನ್ನ ನನಗೆ ಕೊಡು.+
ಅವು ನನ್ನನ್ನ ನಿನ್ನ ಪವಿತ್ರ ಬೆಟ್ಟಕ್ಕೆ, ನಿನ್ನ ಭವ್ಯ ಡೇರೆಗೆ+ ನಡಿಸಲಿ.+
4 ಆಗ ನಾನು ದೇವರ ಯಜ್ಞವೇದಿ ಹತ್ರ ಬರ್ತಿನಿ,+
ನನಗೆ ತುಂಬ ಖುಷಿ ಕೊಡೋ ದೇವರ ಹತ್ರ ಬರ್ತಿನಿ.
ದೇವರೇ, ನನ್ನ ದೇವರೇ, ತಂತಿವಾದ್ಯ ಬಾರಿಸ್ತಾ+ ನಾನು ನಿನ್ನನ್ನ ಹೊಗಳ್ತೀನಿ.
5 ನನ್ನ ಮನವೇ, ಯಾಕಿಷ್ಟು ಬೇಜಾರಾಗಿ ಇದ್ದೀಯಾ?
ನಿನ್ನೊಳಗೆ ಯಾಕೆ ಇಂಥ ಬಿರುಗಾಳಿ ಎದ್ದಿದೆ?