ಕೀರ್ತನೆ
ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಈ ಗೀತೆ ಗಿತ್ತೀತ್* ರಾಗದಲ್ಲಿದೆ.
8 ಯೆಹೋವನೇ, ನಮ್ಮ ಒಡೆಯನೇ, ಇಡೀ ಭೂಮಿಯಲ್ಲೇ ನಿನ್ನ ಹೆಸ್ರು ತುಂಬ ಶ್ರೇಷ್ಠ.
ನಿನ್ನ ವೈಭವ ಆಕಾಶಕ್ಕಿಂತ ಎತ್ತರ!+
2 ಶತ್ರುಗಳ ಮತ್ತು ಸೇಡು ತೀರಿಸುವವರ ಬಾಯಿಗೆ ಬೀಗ ಹಾಕೋಕೆ,
ನೀನು ಚಿಕ್ಕಮಕ್ಕಳ ಮತ್ತು ಕೂಸುಗಳ ಬಾಯಿಂದ+ ನಿನ್ನ ಶಕ್ತಿಯನ್ನ ತೋರಿಸಿದ್ದೀಯ.
ನೀನು ರಚಿಸಿರೋ ಚಂದ್ರ ಮತ್ತು ನಕ್ಷತ್ರಗಳನ್ನ ನೋಡಿ,+
4 ನಾನು ಹೀಗೆ ಯೋಚಿಸಿದೆ,
‘ಇವತ್ತು ಇದ್ದು ನಾಳೆ ಸಾಯೋ ಮನುಷ್ಯನನ್ನ ನೀನು ಯಾಕೆ ನೆನಪಿಸ್ಕೊಳ್ತೀಯ?
ಅವನಿಗೆ ಏನು ಯೋಗ್ಯತೆ ಇದೆ ಅಂತ ನೀನು ಕಾಳಜಿ ತೋರಿಸ್ತೀಯ?+
5 ನೀನು ಅವನನ್ನ ದೇವದೂತರಿಗಿಂತ* ಒಂಚೂರು ಕಮ್ಮಿಯಾಗಿ ಮಾಡಿದ್ದೀಯ ಅಷ್ಟೇ,
ನೀನು ಅವನಿಗೆ ಗೌರವ ಮತ್ತು ವೈಭವವನ್ನ ಕಿರೀಟವಾಗಿ ಇಟ್ಟಿದ್ದೀಯ.
6 ನಿನ್ನ ಸೃಷ್ಟಿಯ ಮೇಲೆ ಅವನಿಗೆ ಅಧಿಕಾರ ಕೊಟ್ಟೆ,+
ಎಲ್ಲವನ್ನ ಅವನ ಕಾಲಡಿಯಲ್ಲಿ ಇಟ್ಟೆ.
7 ಎಲ್ಲ ಆಡುಕುರಿಗಳ ಮೇಲೆ, ದನಎತ್ತುಗಳ ಮೇಲೆ
8 ಆಕಾಶದ ಪಕ್ಷಿಗಳ ಮೇಲೆ ಮತ್ತು ಸಮುದ್ರದ ಮೀನುಗಳ ಮೇಲೆ
ಅದರಲ್ಲಿ ಈಜುವ ಎಲ್ಲದರ ಮೇಲೆ ಅವನಿಗೆ ಅಧಿಕಾರ ಕೊಟ್ಟೆ.
9 ಯೆಹೋವನೇ, ನಮ್ಮ ಒಡೆಯನೇ, ಇಡೀ ಭೂಮಿಯಲ್ಲೇ ನಿನ್ನ ಹೆಸ್ರಿಗೆ ತುಂಬ ಗೌರವ ಇದೆ.