ದಾವೀದನ ಕೀರ್ತನೆ
26 ಯೆಹೋವನೇ, ನನಗೆ ನ್ಯಾಯ ಕೊಡಿಸು. ಯಾಕಂದ್ರೆ ನಾನು ನಿಯತ್ತಿಂದ ನಡ್ಕೊಂಡಿದ್ದೀನಿ.+
ನಾನು ಯೆಹೋವನ ಮೇಲೆ ಇಟ್ಟಿರೋ ಭರವಸೆ ಚಂಚಲ ಅಲ್ಲ.+
2 ಯೆಹೋವನೇ, ನನ್ನನ್ನ ಪರಿಶೋಧಿಸು, ಪರೀಕ್ಷಿಸು.
ನನ್ನ ಮನದಾಳದ ಯೋಚನೆಗಳನ್ನ ಮತ್ತು ನನ್ನ ಹೃದಯವನ್ನ ಶುದ್ಧಮಾಡು.+
3 ಯಾಕಂದ್ರೆ ನಿನ್ನ ಶಾಶ್ವತ ಪ್ರೀತಿ ಯಾವಾಗ್ಲೂ ನನ್ನ ಮುಂದಿದೆ,
ನಾನು ನಿನ್ನ ಸತ್ಯದಲ್ಲೇ ನಡಿತಿದ್ದೀನಿ.+
4 ಮೋಸಗಾರರ ಸಹವಾಸ ಮಾಡಲ್ಲ,+
ತಮ್ಮ ನಿಜ ಸ್ವರೂಪವನ್ನ ಮುಚ್ಚಿಡೋರಿಂದ ನಾನು ದೂರ ಇರ್ತಿನಿ.
5 ಕೆಟ್ಟವರ ಸಂಘ ನನಗೆ ಅಸಹ್ಯ,+
ಕೆಡುಕರ ಸಹವಾಸ ನನಗೆ ಬೇಕಾಗಿಲ್ಲ.+
6 ಯೆಹೋವನೇ, ನಾನು ನನ್ನ ಕೈಗಳನ್ನ ತೊಳ್ಕೊಂಡು ನಾನು ನಿರ್ದೋಷಿ ಅಂತ ಸಾಬೀತು ಮಾಡ್ತೀನಿ.
ನಿನ್ನ ಯಜ್ಞವೇದಿ ಸುತ್ತ ತಿರುಗ್ತೀನಿ.
7 ನಿನಗೆ ಗಟ್ಟಿಯಾಗಿ ಧನ್ಯವಾದ ಹೇಳೋಕೆ,+
ನಿನ್ನ ಎಲ್ಲ ಅದ್ಭುತಗಳ ಬಗ್ಗೆ ಪ್ರಕಟಿಸೋಕೆ ನಾನು ಹಾಗೆ ಮಾಡ್ತೀನಿ.
8 ಯೆಹೋವನೇ ನೀನು ವಾಸಿಸೋ ಆಲಯ ನನಗಿಷ್ಟ,+
ಆ ಜಾಗದಲ್ಲಿ ನಿನ್ನ ಮಹಿಮೆ ಇರುತ್ತೆ.+
9 ಪಾಪಿಗಳ ಜೊತೆ ನನ್ನನ್ನೂ ಗುಡಿಸಿ ಬಿಡಬೇಡ,+
ದೌರ್ಜನ್ಯ ಮಾಡೋರ ಪ್ರಾಣಗಳ ಜೊತೆ ನನ್ನ ಪ್ರಾಣವನ್ನೂ ತೆಗಿಬೇಡ.
10 ಅವ್ರ ಕೈಗಳು ನಾಚಿಕೆಗೆಟ್ಟ ಕೆಲಸಗಳನ್ನ ಮಾಡುತ್ತೆ,
ಅವ್ರ ಬಲಗೈ ಲಂಚದಿಂದ ತುಂಬಿತುಳುಕ್ತಿದೆ.
11 ಆದ್ರೆ ನಾನು ನಿಯತ್ತನ್ನ ಕಾಪಾಡ್ಕೊಂಡಿದ್ದೀನಿ,
ನನ್ನನ್ನ ರಕ್ಷಿಸು, ನನಗೆ ಕೃಪೆ ತೋರಿಸು.
12 ನಾನು ಸುರಕ್ಷಿತವಾಗಿರೋ ಜಾಗದಲ್ಲಿ ನಿಂತಿದ್ದೀನಿ,+
ಮಹಾ ಸಭೆಯಲ್ಲಿ ನಾನು ಯೆಹೋವನನ್ನ ಹೊಗಳ್ತೀನಿ.+