ಕೀರ್ತನೆ
96 ಯೆಹೋವನಿಗೆ ಹೊಸ ಹಾಡನ್ನ ಹಾಡಿ!+
ಭೂಮಿಯಲ್ಲಿ ಇರೋ ಜನ್ರೇ ಯೆಹೋವನಿಗೆ ಗೀತೆಯನ್ನ ಹಾಡಿ!+
2 ಯೆಹೋವನಿಗೆ ಹಾಡಿ, ಆತನ ಹೆಸ್ರನ್ನ ಸ್ತುತಿಸಿ.
ಆತನ ರಕ್ಷಣೆಯ ಕೆಲಸಗಳ ಬಗ್ಗೆ ಪ್ರತಿದಿನ ಸಿಹಿಸುದ್ದಿ ಸಾರಿ!+
4 ಯೆಹೋವ ದೊಡ್ಡವನು, ಆತನು ಬೇರೆ ಎಲ್ರಿಗಿಂತ ಹೊಗಳಿಕೆಗೆ ಯೋಗ್ಯ.
ಬೇರೆಲ್ಲ ದೇವರುಗಳಿಗಿಂತ ಆತನು ವಿಸ್ಮಯ.
7 ಜನಾಂಗಗಳ ಜನ್ರೇ ಯೆಹೋವನಿಗೆ ಕೊಡಬೇಕಾಗಿ ಇರೋದನ್ನ ಕೊಡಿ,
ಯೆಹೋವನ ಮಹಿಮೆ ಮತ್ತು ಬಲಕ್ಕಾಗಿ ಆತನಿಗೆ ಸಲ್ಲಿಸಬೇಕಾಗಿ ಇರೋದನ್ನ ಸಲ್ಲಿಸಿ.+
9 ಪವಿತ್ರವಾದ ಬಟ್ಟೆಗಳನ್ನ ಹಾಕೊಂಡು ಯೆಹೋವನಿಗೆ ಬಗ್ಗಿ ನಮಸ್ಕಾರ ಮಾಡಿ.
ಭೂನಿವಾಸಿಗಳೇ, ಆತನ ಮುಂದೆ ಗಡಗಡ ಅಂತ ನಡುಗಿ!
10 “ಯೆಹೋವ ರಾಜನಾಗಿದ್ದಾನೆ” ಅಂತ ಎಲ್ಲ ಜನ್ರಿಗೆ ಸಾರಿಹೇಳಿ.+
ಆತನು ಭೂಮಿಯನ್ನ* ಅಲುಗಾಡದ ಹಾಗೆ ಸ್ಥಾಪಿಸಿದ್ದಾನೆ. ಅದನ್ನ ಕದಲಿಸೋಕೆ* ಆಗಲ್ಲ.
ಆತನು ಜನ್ರಿಗೆ ನ್ಯಾಯವಾಗಿ ತೀರ್ಪು ಮಾಡ್ತಾನೆ.+
11 ಗಗನ ಹರ್ಷಿಸಲಿ, ಭೂಮಿ ಆನಂದಿಸಲಿ,
ಸಮುದ್ರ ಮತ್ತು ಅದ್ರಲ್ಲಿರೋ ಎಲ್ಲವೂ ಜೈಕಾರ ಹಾಕಲಿ,+
12 ಬಯಲುಗಳು ಮತ್ತು ಅದ್ರಲ್ಲಿರೋ ಎಲ್ಲವೂ ಖುಷಿಪಡಲಿ.+