ಕೀರ್ತನೆ
ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ, ಯೆದುತೂನ್ ಶೈಲಿ.*
62 ನಾನು ಮೌನವಾಗಿದ್ದು ದೇವರಿಗಾಗಿ ಕಾಯ್ತೀನಿ.
ಆತನಿಂದಾನೇ ನನಗೆ ರಕ್ಷಣೆ ಸಿಗುತ್ತೆ.+
3 ನೀವು ದ್ವೇಷಿಸೋ ಒಬ್ಬ ಮನುಷ್ಯನನ್ನ ಕೊಲ್ಲೋಕೆ ಎಲ್ಲಿ ತನಕ ಪ್ರಯತ್ನ ಮಾಡ್ತಾ ಇರ್ತಿರಾ?+
ವಾಲಿರೋ ಗೋಡೆ ತರ, ಇನ್ನೇನು ಕುಸಿದು ಬೀಳೋ ಕಲ್ಲಿನ ಗೋಡೆ ತರ ನೀವೆಲ್ಲ ಅಪಾಯಕಾರಿ.
4 ಅವನನ್ನ ಮೇಲಿಂದ ಕೆಳಗೆ ಬೀಳಿಸೋಕೆ ಅವರು ಒಟ್ಟಾಗಿ ಸೇರಿ ಯೋಚಿಸ್ತಿದ್ದಾರೆ,
ಸುಳ್ಳು ಹೇಳೋದರಲ್ಲೇ ಅವ್ರಿಗೆ ಸಂತೋಷ.
ಬಾಯಿಂದ ಆಶೀರ್ವಾದ ಮಾಡಿದ್ರೂ ಒಳಗೆ ಶಾಪ ಹಾಕ್ತಾ ಇರ್ತಾರೆ.+ (ಸೆಲಾ)
5 ನಾನು ಮೌನವಾಗಿದ್ದು ದೇವರಿಗಾಗಿ ಕಾಯ್ತೀನಿ.+
ಯಾಕಂದ್ರೆ ಆತನೇ ನನ್ನ ನಿರೀಕ್ಷೆಗೆ ಆಧಾರ.+
6 ಆತನು ನನ್ನ ಬಂಡೆ, ನನ್ನ ರಕ್ಷಣೆ, ನನ್ನ ಸುರಕ್ಷಿತ ಆಶ್ರಯ,
ನಾನು ಯಾವತ್ತೂ ಕದಲಲ್ಲ.+
7 ನನ್ನ ರಕ್ಷಣೆ ಮತ್ತು ನನ್ನ ಗೌರವಕ್ಕೆ ದೇವರೇ ಆಧಾರ.
ದೇವರೇ ನನ್ನ ಬಲವಾದ ಬಂಡೆ, ನನ್ನ ಆಶ್ರಯ.+
8 ಜನ್ರೇ, ಯಾವಾಗ್ಲೂ ಆತನ ಮೇಲೆ ಭರವಸೆ ಇಡಿ.
ಆತನ ಮುಂದೆ ನಿಮ್ಮ ಮನಸ್ಸನ್ನ ತೋಡ್ಕೊಳ್ಳಿ.+
ದೇವರೇ ನಮಗೆ ಆಶ್ರಯ.+ (ಸೆಲಾ)
9 ಮನುಷ್ಯ ಬರೀ ಉಸಿರಷ್ಟೇ,
ಅವರು ಮೋಸಗಾರರು.+
ಅವ್ರನ್ನೆಲ್ಲ ಒಂದು ತಕ್ಕಡಿಗೆ ಹಾಕಿ ತೂಗಿದ್ರೆ, ಅವ್ರ ಭಾರ ಒಂದು ಉಸಿರಿಗಿಂತ ಕಮ್ಮಿನೇ.+
10 ಅನ್ಯಾಯದ ಸುಲಿಗೆ ಮೇಲೆ ಭರವಸೆ ಇಡಬೇಡಿ,
ಕಳ್ಳತನದ ಮೇಲೆ ನಿರೀಕ್ಷೆ ಇಡಬೇಡಿ.
ನಿಮ್ಮ ಸಿರಿಸಂಪತ್ತು ಜಾಸ್ತಿ ಇದ್ರೆ, ನಿಮ್ಮ ಹೃದಯನ ಅದ್ರ ಮೇಲಿಡಬೇಡಿ.+
11 ಒಂದು ಸಲ ಅಲ್ಲ ಎರಡು ಸಲ ದೇವರು ಹೀಗೆ ಹೇಳೋದನ್ನ ನಾನು ಕೇಳಿಸ್ಕೊಂಡಿದ್ದೀನಿ
ಬಲ ದೇವರಿಗೆ ಸೇರಿದ್ದು.+