ಆಮೋಸ
8 ವಿಶ್ವದ ರಾಜ ಯೆಹೋವ ನನಗೆ ಒಂದು ದರ್ಶನ ತೋರಿಸಿದನು. ಆ ದರ್ಶನದಲ್ಲಿ ನನಗೆ ಒಂದು ಬುಟ್ಟಿ ಕಾಣಿಸ್ತು, ಅದ್ರಲ್ಲಿ ಬೇಸಿಗೆ ಕಾಲದ ಹಣ್ಣುಗಳಿದ್ದವು.* 2 ಆತನು ನನಗೆ “ಆಮೋಸ, ನಿನಗೆ ಏನು ಕಾಣಿಸ್ತಿದೆ?” ಅಂತ ಕೇಳಿದನು. ಅದಕ್ಕೆ ನಾನು “ಒಂದು ಬುಟ್ಟಿಯಲ್ಲಿ ಬೇಸಿಗೆ ಕಾಲದ ಹಣ್ಣುಗಳಿವೆ” ಅಂದೆ. ಆಗ ಯೆಹೋವ ಹೀಗಂದನು: “ನನ್ನ ಜನ್ರಾದ ಇಸ್ರಾಯೇಲ್ಯರಿಗೆ ಕಡೆಗಾಲ ಬಂದಿದೆ. ನಾನು ಇನ್ನು ಅವ್ರನ್ನ ಕ್ಷಮಿಸೋದೇ ಇಲ್ಲ.+ 3 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಆ ದಿನದಲ್ಲಿ ದೇವಾಲಯದಿಂದ ಗೀತೆಗಳ ಬದಲಿಗೆ ಗೋಳಾಟ ಕೇಳಿಬರುತ್ತೆ.+ ಎಲ್ಲ ಕಡೆಗಳಲ್ಲೂ ಶವಗಳು ಬಿದ್ದಿರುತ್ತೆ.+ ಹಾಗಾಗಿ ಎಲ್ಲೆಲ್ಲೂ ಮೌನ ಆವರಿಸಿರುತ್ತೆ!’
4 ಬಡವ್ರನ್ನ ತುಳಿಯುವವ್ರೇ,
ದೇಶದಲ್ಲಿರೋ ಸೌಮ್ಯಭಾವದ ಜನ್ರನ್ನ ನಾಶ ಮಾಡುವವ್ರೇ ಕೇಳಿ,+
5 ‘ಅಮಾವಾಸ್ಯೆಯ ಹಬ್ಬ ಯಾವಾಗ ಮುಗಿಯುತ್ತೋ,+ ನಾವು ಹೋಗಿ ಧಾನ್ಯ ಮಾರಬೇಕು,
ಸಬ್ಬತ್ ಯಾವಾಗ ಮುಗಿಯುತ್ತೋ,+ ನಾವು ಧಾನ್ಯ ಮಾರಾಟಕ್ಕೆ ಹೋಗಬೇಕು,
ಆಗ ನಾವು ಅಳತೆಯನ್ನ ಚಿಕ್ಕದು ಮಾಡಿ ಬೆಲೆಯನ್ನ ಹೆಚ್ಚು ಮಾಡಬಹುದು,
ಜನ್ರನ್ನ ಮೋಸ ಮಾಡೋಕೆ ಕಳ್ಳ ತಕ್ಕಡಿ ಉಪಯೋಗಿಸಬಹುದು’+ ಅಂತ ಹೇಳುವವ್ರೇ ಕೇಳಿ,
6 ‘ಬೆಳ್ಳಿಯನ್ನ ಕೊಟ್ಟು ಗತಿ ಇಲ್ಲದವನನ್ನ ಖರೀದಿಸೋಣ,
ಒಂದು ಜೋಡಿ ಚಪ್ಪಲಿ ಕೊಟ್ಟು ಬಡವನನ್ನ ಕೊಂಡ್ಕೊಳ್ಳೋಣ,+
ಬಿಸಾಡಬೇಕಾದ ಧಾನ್ಯವನ್ನ ಜನ್ರಿಗೆ ಮಾರಿಬಿಡೋಣ’ ಅಂತ ಹೇಳುವವ್ರೇ, ಕೇಳಿ.
7 ಯಾಕೋಬನ ಮಹಿಮೆಯಾಗಿರೋ ಯೆಹೋವ+ ತನ್ನ ಮೇಲೆ ಆಣೆಯಿಟ್ಟು ಹೇಳೋದು ಏನಂದ್ರೆ
‘ನಾನು ಅವ್ರ ಕೆಟ್ಟ ಕೆಲಸಗಳನ್ನ ಯಾವತ್ತೂ ಮರೆಯಲ್ಲ.+
ಇಡೀ ದೇಶ ನೈಲ್ ನದಿ ತರ ಉಕ್ಕೇರುತ್ತೆ,
ಈಜಿಪ್ಟಿನ ನೈಲ್ ನದಿ ಪ್ರವಾಹ ಬಂದಾಗ ಹೊಯ್ದಾಡೋ ತರ ಆ ದೇಶ ಹೊಯ್ದಾಡುತ್ತೆ.’+
9 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ
‘ಆ ದಿನದಲ್ಲಿ ಮಟಮಟ ಮಧ್ಯಾಹ್ನದಲ್ಲೇ ಸೂರ್ಯ ಮುಳುಗೋ ತರ ನಾನು ಮಾಡ್ತೀನಿ,
ಪ್ರಕಾಶಮಾನವಾದ ದಿನದಂದು ದೇಶದಲ್ಲಿ ಕತ್ತಲಾಗೋ ತರ ಮಾಡ್ತೀನಿ.+
10 ನಿಮ್ಮ ಹಬ್ಬಗಳನ್ನೆಲ್ಲ ಶೋಕ ದಿನಗಳನ್ನಾಗಿ ಮಾಡ್ತೀನಿ,+
ನಿಮ್ಮ ಗೀತೆಗಳನ್ನೆಲ್ಲ ಶೋಕಗೀತೆಗಳನ್ನಾಗಿ ಮಾಡ್ತೀನಿ.
ನಾನು ಎಲ್ಲರ ಸೊಂಟಕ್ಕೆ ಗೋಣಿ ಸುತ್ತುತ್ತೀನಿ, ಎಲ್ಲರ ತಲೆ ಬೋಳಿಸ್ತೀನಿ,
ಇರೋ ಒಬ್ಬನೇ ಮಗ ಸತ್ತಾಗ ಆಗೋ ದುಃಖದಂಥ ದುಃಖವನ್ನ ನಿಮಗೆ ತರ್ತಿನಿ,
ಆ ದಿನದ ಕೊನೇಲಿ ನೀವು ಕಡುವೇದನೆ ಅನುಭವಿಸ್ತೀರ.’
11 ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ
‘ನೋಡಿ! ನಾನು ದೇಶದಲ್ಲಿ ಬರಗಾಲ ತರೋ ದಿನಗಳು ಬರ್ತಿವೆ,
ಅದು ಆಹಾರದ ಬರ ಅಲ್ಲ, ನೀರಿನ ಬರ ಅಲ್ಲ,
ಯೆಹೋವನ ಮಾತುಗಳ ಬರನೇ.+
12 ಅವರು ಸಮುದ್ರದಿಂದ ಸಮುದ್ರಕ್ಕೆ,
ಉತ್ತರದಿಂದ ಪೂರ್ವಕ್ಕೆ ಬಳಲಿ ತೂರಾಡ್ತಾ ಹೋಗ್ತಾರೆ.
ಯೆಹೋವನ ಮಾತುಗಳಿಗಾಗಿ ಹುಡುಕ್ತಾ ಅಲಿತಾರೆ, ಆದ್ರೆ ಅದು ಅವ್ರಿಗೆ ಸಿಗಲ್ಲ.
13 ಆ ದಿನದಲ್ಲಿ ಸುಂದರ ಕನ್ಯೆಯರು, ಯುವಕರು
ಬಾಯಾರಿಕೆಯಿಂದ ಮೂರ್ಛೆ ಹೋಗ್ತಾರೆ.