ಯೆಶಾಯ
16 ದೇಶ ಆಳುವವನಿಗೆ ಒಂದು ಟಗರನ್ನ ಕಳಿಸು,
ಅದನ್ನ ಸೆಲದಿಂದ ಕಾಡಿನ ಮೂಲಕ
ಚೀಯೋನ್ ಪಟ್ಟಣದ ಬೆಟ್ಟಕ್ಕೆ ತಲುಪಿಸು.
3 “ಸಲಹೆ ಕೊಡು, ಮಾಡಿರೋ ನಿರ್ಣಯನ ಜಾರಿಗೆ ತಗೊಂಡು ಬಾ.
ಮಟಮಟ ಮಧ್ಯಾಹ್ನದಲ್ಲಿ ನೆರಳು ಕೊಟ್ಟು ಸಂರಕ್ಷಿಸು.
ಆ ನೆರಳು ರಾತ್ರಿಯ ಕತ್ತಲಷ್ಟು ಗಾಢವಾಗಿರಲಿ.
ಚೆದರಿ ಹೋಗಿರೋ ಜನ್ರನ್ನ ಬಚ್ಚಿಡು, ಓಡಿ ಹೋಗ್ತಿರೋರನ್ನ ಶತ್ರುಗಳ ಕೈಗೆ ಒಪ್ಪಿಸಬೇಡ.
4 ಮೋವಾಬೇ, ಚೆದರಿಹೋಗಿರೋ ನನ್ನ ಜನ್ರಿಗೆ ನಿನ್ನಲ್ಲಿ ಆಶ್ರಯ ಕೊಡು.
ನಾಶ ಮಾಡುವವನಿಂದ ತಪ್ಪಿಸ್ಕೊಳ್ಳೋಕೆ ಅವ್ರಿಗೆ ಬಚ್ಚಿಟ್ಕೊಳ್ಳೋ ಒಂದು ಸ್ಥಳವಾಗು.+
ದಬ್ಬಾಳಿಕೆ ಮಾಡುವವನು ಅಂತ್ಯ ಕಾಣ್ತಾನೆ,
ನಾಶನಕ್ಕೆ ಒಂದು ಕೊನೆ ಬರುತ್ತೆ,
ಬೇರೆಯವ್ರನ್ನ ಕೆಳಗೆ ಹಾಕಿ ತುಳಿದು ಹಾಕುವವರು ಭೂಮಿಯಿಂದ ಅಳಿದು ಹೋಗ್ತಾರೆ.
5 ಆಗ ಒಂದು ಸಿಂಹಾಸನವನ್ನ ದೃಢವಾಗಿ ಸ್ಥಾಪಿಸಲಾಗುತ್ತೆ. ಅದ್ರ ಆಧಾರ ಶಾಶ್ವತ ಪ್ರೀತಿಯಾಗಿರುತ್ತೆ.
ದಾವೀದನ ಡೇರೆಯಲ್ಲಿ ಆ ಸಿಂಹಾಸನದ ಮೇಲೆ ಕೂತ್ಕೊಳ್ಳುವವನು ನಂಬಿಗಸ್ತನಾಗಿ ಇರ್ತಾನೆ,+
ಅವನು ನಿಷ್ಪಕ್ಷಪಾತದಿಂದ ನ್ಯಾಯ ತೀರಿಸ್ತಾನೆ, ನೀತಿಯನ್ನ ಜಾರಿಗೊಳಿಸೋಕೆ ತಡಮಾಡಲ್ಲ.”+
6 ಮೋವಾಬಿನ ಅಹಂಕಾರದ ಬಗ್ಗೆ ನಾವು ಕೇಳಿಸ್ಕೊಂಡಿದ್ದೀವಿ. ಅದಕ್ಕೆ ತುಂಬ ಸೊಕ್ಕು.+
ಅದ್ರ ಗರ್ವ, ಪೊಗರು ಮತ್ತು ಕೋಪದ ಬಗ್ಗೆ ನಾವು ಕೇಳಿಸ್ಕೊಂಡಿದ್ದೀವಿ.+
ಆದ್ರೆ ಅದ್ರ ದೊಡ್ಡದೊಡ್ಡ ಮಾತುಗಳು ಯಾವತ್ತಿಗೂ ನಿಜವಾಗಲ್ಲ.
ಏಟು ತಿಂದಿರೋ ಜನ ಕೀರ್-ಹರೆಷೆತಿನ ಒಣದ್ರಾಕ್ಷಿ ಬಿಲ್ಲೆಗಳನ್ನ ನೆನಪಿಸ್ಕೊಂಡು ಗೋಳಾಡ್ತಾರೆ.+
8 ಹೆಷ್ಬೋನಿನ+ ಮೆಟ್ಟಿಲುಪಾತಿಗಳು* ಒಣಗಿಹೋಗಿವೆ,
ಸಿಬ್ಮದ+ ದ್ರಾಕ್ಷಿಬಳ್ಳಿಗಳು ಬಾಡಿಹೋಗಿವೆ,
ದೇಶವನ್ನ ಆಳುವವರು ಅದ್ರ ಕೆಂಪುಕೆಂಪಾದ ರೆಂಬೆಗಳನ್ನ ತುಳಿದಿದ್ದಾರೆ,
ಅವು ಯಜ್ಜೇರ್+ ತನಕ ತಲುಪಿವೆ,
ಕಾಡಿನ ತನಕ ಚಾಚಿವೆ.
ಅದ್ರ ಚಿಗುರುಗಳು ಸಮುದ್ರದ ತನಕ ಹರಡಿವೆ.
9 ಹಾಗಾಗಿ ನಾನು ಯಜ್ಜೇರಿನ ಬಗ್ಗೆ ಗೋಳಾಡಿದ ಹಾಗೆ ಸಿಬ್ಮದ ದ್ರಾಕ್ಷಿಬಳ್ಳಿ ಬಗ್ಗೆನೂ ಗೋಳಾಡ್ತೀನಿ.
ಹೆಷ್ಬೋನೇ, ಎಲೆಯಾಲೇ,+ ನನ್ನ ಕಣ್ಣೀರಿಂದ ನಾನು ನಿಮ್ಮನ್ನ ತೋಯಿಸ್ತೀನಿ,
ಯಾಕಂದ್ರೆ ನಿನ್ನ ಬೇಸಿಗೆಯ ಫಲದ ಸದ್ದು, ನಿನ್ನ ಬೆಳೆಯ ಕೊಯ್ಲಿನ ಸದ್ದು ನಿಂತುಹೋಗಿದೆ.*
10 ಹಣ್ಣುಗಳ ತೋಟದಿಂದ ಸಂತೋಷವನ್ನ, ಆನಂದವನ್ನ ಕಿತ್ತುಕೊಳ್ಳಲಾಗಿದೆ,
ದ್ರಾಕ್ಷಿತೋಟದಲ್ಲಿ ಯಾರೂ ಹಾಡು ಹಾಡ್ತಿಲ್ಲ, ಸಂತೋಷದ ಧ್ವನಿ ಕೇಳಿಸ್ತಿಲ್ಲ.+
ದ್ರಾಕ್ಷಾಮದ್ಯಕ್ಕಾಗಿ ತೊಟ್ಟಿಯಲ್ಲಿ ದ್ರಾಕ್ಷಿ ತುಳಿತಿಲ್ಲ,
ಯಾಕಂದ್ರೆ ನಾನು ಅವ್ರ ಹರ್ಷಧ್ವನಿಯನ್ನ ನಿಲ್ಲಿಸಿಬಿಟ್ಟಿದ್ದೀನಿ.+
11 ತಂತಿವಾದ್ಯದ ತಂತಿಗಳು ಮಿಡಿಯೋ ತರ,
ಮೋವಾಬಿಗಾಗಿ ನನ್ನ ಮನಸ್ಸು ಮರುಗ್ತಿದೆ,+
ಕೀರ್-ಹರೆಷೆತಿಗಾಗಿ ನಾನು ಒಳಗೊಳಗೇ ಕೊರಗ್ತಿದ್ದೀನಿ.+
12 ಮೋವಾಬ್ ಎತ್ರ ಸ್ಥಳಕ್ಕೆ ಹೋಗಿ ಸುಸ್ತಾದ್ರೂ ಆರಾಧನಾ ಸ್ಥಳಕ್ಕೆ ಪ್ರಾರ್ಥಿಸೋಕೆ ಹೋದ್ರೂ ಅದು ಏನೂ ಸಾಧಿಸಲ್ಲ.+
13 ಮೋವಾಬಿನ ಬಗ್ಗೆ ಈ ಸಂದೇಶವನ್ನ ಯೆಹೋವ ಈಗಾಗಲೇ ಕೊಟ್ಟಿದ್ದನು. 14 ಈಗ ಯೆಹೋವ ಹೀಗೆ ಹೇಳ್ತಿದ್ದಾನೆ “ಕೂಲಿ ಕೆಲಸಗಾರನ ವರ್ಷಗಳ ಹಾಗೆ* ಸರಿಯಾಗಿ ಮೂರು ವರ್ಷಗಳೊಳಗೆ, ಮೋವಾಬ್ ತನ್ನ ಮಹಿಮೆ ಕಳ್ಕೊಂಡು ಅವಮಾನಕ್ಕೆ ಗುರಿಯಾಗುತ್ತೆ. ಅಲ್ಲಿ ಎಲ್ಲ ರೀತಿಯ ಗಲಭೆ ಇರುತ್ತೆ. ತುಂಬ ಕಮ್ಮಿ ಮಂದಿ ಅದ್ರಲ್ಲಿ ಉಳ್ಕೊಳ್ತಾರೆ, ಅವರು ಬಲಹೀನರಾಗಿ ಇರ್ತಾರೆ.”+