ಇಬ್ರಿಯರಿಗೆ ಬರೆದ ಪತ್ರ
1 ಹಿಂದಿನ ಕಾಲದಲ್ಲಿ ದೇವರು ನಮ್ಮ ಪೂರ್ವಜರ ಜೊತೆ ಪ್ರವಾದಿಗಳ ಮೂಲಕ ಎಷ್ಟೋ ಸಲ ಬೇರೆ ಬೇರೆ ತರ ಮಾತಾಡಿದನು.+ 2 ಈ ಕೊನೆ ದಿನಗಳಲ್ಲಿ ತನ್ನ ಮಗನ ಮೂಲಕ ನಮ್ಮ ಜೊತೆ ಮಾತಾಡಿದ್ದಾನೆ.+ ಮಗನನ್ನ ದೇವರು ಎಲ್ಲದ್ದಕ್ಕೂ ವಾರಸುದಾರನಾಗಿ ಮಾಡಿದನು,+ ಆತನ ಮೂಲಕ ಭೂಮಿ ಆಕಾಶದಲ್ಲಿ ಇರೋದನ್ನೆಲ್ಲ* ಮಾಡಿದನು.+ 3 ಆತನು ದೇವರ ಮಹಿಮೆಯ ಪ್ರತಿಬಿಂಬ.+ ಆತನ ಗುಣಗಳೆಲ್ಲ ಆತನ ತಂದೆ ತರಾನೇ.+ ಆತನು ತನ್ನ ಮಾತಿಂದಾನೇ ಎಲ್ಲವನ್ನ ಪೋಷಿಸ್ತಾನೆ. ಆತನು ನಮ್ಮ ಪಾಪಗಳನ್ನ ತೊಳೆದು ಶುದ್ಧ ಮಾಡಿದ್ಮೇಲೆ+ ಸ್ವರ್ಗದಲ್ಲಿರೋ ಮಹಾನ್ ದೇವರ ಬಲಗಡೆ ಕೂತ್ಕೊಂಡನು.+ 4 ಆತನು ದೇವದೂತರಿಗಿಂತ ಎಷ್ಟೋ ಶ್ರೇಷ್ಠ+ ಹೆಸ್ರನ್ನ ಪಡಿದಿರೋದ್ರಿಂದ ಅವ್ರಿಗಿಂತ ಆತನೇ ಶ್ರೇಷ್ಠ.+
5 ಉದಾಹರಣೆಗೆ, ದೇವದೂತರಲ್ಲಿ ಯಾರಿಗಾದ್ರೂ ದೇವರು “ನೀನು ನನ್ನ ಮಗ, ಇವತ್ತಿಂದ ನಾನು ನಿನ್ನ ಅಪ್ಪ”+ ಅಂತಾಗಲಿ “ನಾನು ಅವನಿಗೆ ಅಪ್ಪ ಆಗ್ತೀನಿ ಮತ್ತು ಅವನು ನನಗೆ ಮಗ ಆಗ್ತಾನೆ” ಅಂತಾಗಲಿ ಯಾವತ್ತಾದ್ರೂ ಹೇಳಿದ್ನಾ?+ 6 ಇಲ್ಲ. ಆದ್ರೆ ಆತನು ತನ್ನ ಜ್ಯೇಷ್ಠಪುತ್ರನನ್ನ+ ಮತ್ತೆ ಈ ಭೂಮಿಗೆ ಕಳಿಸುವಾಗ “ದೇವದೂತರೆಲ್ಲ ಆತನ ಮುಂದೆ ಅಡ್ಡಬೀಳಲಿ”* ಅಂತ ಹೇಳ್ತಾನೆ.
7 ಅಷ್ಟೇ ಅಲ್ಲ ದೇವರು ದೇವದೂತರ ಬಗ್ಗೆ “ಆತನು ತನ್ನ ದೂತರನ್ನ ಬಲಿಷ್ಠರಾಗಿ,* ತನ್ನ ಸೇವಕರನ್ನ*+ ಉರಿಯೋ ಬೆಂಕಿಯಾಗಿ ಮಾಡ್ತಾನೆ”+ ಅಂತ ಹೇಳ್ತಾನೆ. 8 ಆದ್ರೆ ಮಗನ ಬಗ್ಗೆ “ಸದಾಕಾಲಕ್ಕೂ ದೇವರೇ ನಿನ್ನ ಸಿಂಹಾಸನ,*+ ನ್ಯಾಯನೇ ನಿನ್ನ ರಾಜದಂಡ. 9 ನೀನು ಒಳ್ಳೇದನ್ನ ಪ್ರೀತಿಸಿದೆ, ಕೆಟ್ಟದನ್ನ ದ್ವೇಷಿಸಿದೆ. ಹಾಗಾಗಿ ನಿನ್ನ ದೇವರು ಬೇರೆಲ್ಲ ರಾಜರಿಗಿಂತ ಹೆಚ್ಚಾಗಿ ನಿನ್ನನ್ನ ಸಂತೋಷ ಅನ್ನೋ ಎಣ್ಣೆಯಿಂದ+ ಅಭಿಷೇಕಿಸಿದನು”+ ಅಂತ ಹೇಳ್ತಾನೆ. 10 “ದೇವರೇ, ನೀನು ಮೊದಲು ಭೂಮಿಗೆ ಅಡಿಪಾಯ ಹಾಕಿದೆ, ಆಕಾಶವನ್ನ ನಿನ್ನ ಕೈಯಿಂದ ಮಾಡಿದೆ. 11 ಆಕಾಶ ಭೂಮಿ ನಾಶವಾಗುತ್ತೆ, ಆದ್ರೆ ನೀನು ಯಾವಾಗ್ಲೂ ಇರ್ತಿಯ. ಅವು ಬಟ್ಟೆ ತರ ಹಳೇದಾಗುತ್ತೆ. 12 ನೀನು ಅವನ್ನ ಉದ್ದ ಬಟ್ಟೆ ತರ ಮಡಚ್ತೀಯ, ಬಟ್ಟೆ ಬದಲಾಯಿಸೋ ತರ ಅವನ್ನ ಬದಲಾಯಿಸ್ತೀಯ. ಆದ್ರೆ ನೀನು ಬದಲಾಗಲ್ಲ, ನಿನ್ನ ಆಯಸ್ಸು ಮುಗಿಯೋದೇ ಇಲ್ಲ.”+
13 ದೇವರು ದೇವದೂತರಲ್ಲಿ ಯಾರಿಗಾದ್ರೂ “ನಾನು ನಿನ್ನ ಶತ್ರುಗಳನ್ನ ನಿನ್ನ ಪಾದಪೀಠವಾಗಿ ಮಾಡೋ ತನಕ ನೀನು ನನ್ನ ಬಲಗಡೆ ಕೂತ್ಕೊ” ಅಂತ ಯಾವತ್ತಾದ್ರೂ ಹೇಳಿದ್ನಾ?+ 14 ಎಲ್ಲ ದೇವದೂತರು ಪವಿತ್ರ ಸೇವೆ ಮಾಡ್ತಾರಲ್ವಾ?+ ರಕ್ಷಣೆ ಪಡಿಯುವವ್ರ ಸೇವೆ ಮಾಡೋಕೆ ದೇವರು ಆ ದೇವದೂತರನ್ನೇ ಕಳಿಸ್ತಾನಲ್ವಾ?