ಚೆಫನ್ಯ
2 ದೇವರ ಆಜ್ಞೆ ಜಾರಿಗೆ ಬರೋ ಮುಂಚೆ,
ಹೊಟ್ಟಿನ ತರ ಆ ದಿನ ಹಾರಿಹೋಗೋ ಮುಂಚೆ,
ಯೆಹೋವನ ಕೋಪಾಗ್ನಿ ನಿಮ್ಮ ಮೇಲೆ ಬರೋ ಮುಂಚೆ,+
ಯೆಹೋವನ ಕೋಪದ ದಿನ ನಿಮ್ಮ ಮೇಲೆ ಬರೋ ಮುಂಚೆ,
3 ಆತನ ನೀತಿಯ ತೀರ್ಪುಗಳನ್ನ ಪಾಲಿಸೋ ಜನ್ರೇ,
ಭೂಮಿ ಮೇಲಿರೋ ಎಲ್ಲ ದೀನರೇ ಯೆಹೋವನನ್ನ ಹುಡುಕಿ,+
ನೀತಿಯನ್ನ ಹುಡುಕಿ, ದೀನತೆಯನ್ನ ಹುಡುಕಿ.
ಹಾಗೆ ಮಾಡಿದ್ರೆ ಯೆಹೋವನ ಕೋಪದ ದಿನದಲ್ಲಿ ಒಂದುವೇಳೆ ಪಾರಾಗಬಹುದು.+
4 ಯಾಕಂದ್ರೆ ಗಾಜಾ ಪಟ್ಟಣ ಖಾಲಿಖಾಲಿ ಹೊಡಿಯುತ್ತೆ,
ಅಷ್ಕೆಲೋನ್ ಹಾಳಾಗಿ ಹೋಗುತ್ತೆ.+
5 “ಕರಾವಳಿಯಲ್ಲಿ ವಾಸ ಮಾಡೋ ಕೆರೇತ್ಯ ಜನಾಂಗದವ್ರೇ ನಿಮ್ಮ ಗತಿಯನ್ನ ಏನಂತ ಹೇಳೋದು!+
ಯೆಹೋವ ನಿಮ್ಮನ್ನ ಖಂಡಿಸಿದ್ದಾನೆ.
ಫಿಲಿಷ್ಟಿಯರ ದೇಶವಾಗಿರೋ ಕಾನಾನೇ, ನಿನ್ನನ್ನ ನಾಶಮಾಡ್ತೀನಿ,
ಹಾಗಾಗಿ ನಿನ್ನಲ್ಲಿ ಒಬ್ಬನೂ ಉಳಿಯಲ್ಲ.
6 ಕರಾವಳಿ ಹುಲ್ಲುಗಾವಲಾಗುತ್ತೆ,
ಅಲ್ಲಿ ಕುರುಬರಿಗೆ ಬಾವಿಗಳಿರುತ್ತೆ, ಕುರಿಗಳಿಗೆ ಕಲ್ಲಿನ ದೊಡ್ಡಿಗಳಿರುತ್ತೆ.
7 ಆ ಪ್ರದೇಶ ಯೆಹೂದ ಮನೆತನದಲ್ಲಿ ಉಳಿದಿರೋ ಜನ್ರ ಪಾಲಾಗುತ್ತೆ,+
ಅವ್ರಿಗೆ ಅಲ್ಲಿ ಊಟ ಸಿಗುತ್ತೆ.
ಸಂಜೆ ಅಷ್ಕೆಲೋನಿನ ಮನೆಗಳಲ್ಲಿ ಮಲಗ್ತಾರೆ,
ಯಾಕಂದ್ರೆ ಅವರ ದೇವರಾದ ಯೆಹೋವ ಅವ್ರ ಕಡೆ ತನ್ನ ಗಮನ ಹರಿಸಿದ್ದಾನೆ.*
ಆತನು ಅವ್ರ ಜನ್ರನ್ನ ಜೈಲಿಂದ ವಾಪಸ್ ಕರ್ಕೊಂಡು ಬರ್ತಾನೆ.”+
8 “ಮೋವಾಬ್ಯರ ಚುಚ್ಚೋ ಮಾತುಗಳು,+ ಅಮ್ಮೋನಿಯರು ಅಣಕಿಸಿ ಹೇಳಿದ ಮಾತುಗಳು+ ನನ್ನ ಕಿವಿಗೆ ಬಿದ್ವು,
ಅವರು ನನ್ನ ಜನ್ರನ್ನ ಕೆಣಕಿದ್ರು, ನನ್ನ ಜನ್ರ ಪ್ರದೇಶಗಳನ್ನ ಕಿತ್ಕೊಳ್ತೀವಿ ಅಂತ ಜಂಬದಿಂದ ದಬಾಯಿಸಿದ್ರು.”+
9 ಹಾಗಾಗಿ ಇಸ್ರಾಯೇಲಿನ ದೇವರೂ ಸೈನ್ಯಗಳ ದೇವರೂ ಆದ ಯೆಹೋವ ಹೀಗೆ ಹೇಳ್ತಿದ್ದಾನೆ:
ಅವ್ರ ಪ್ರದೇಶಗಳು ಮುಳ್ಳುಗಿಡಗಳಿಂದ ಉಪ್ಪಿನ ತಗ್ಗಿಂದ ತುಂಬ್ಕೊಂಡು ಶಾಶ್ವತವಾಗಿ ಹಾಳಾಗುತ್ತೆ.+
ನನ್ನ ಜನ್ರಲ್ಲಿ ಉಳಿದವರು ಅವ್ರನ್ನ ಕೊಳ್ಳೆ ಹೊಡಿತಾರೆ,
ನನ್ನ ಜನಾಂಗದಲ್ಲಿ ಉಳಿದವರು ಅವ್ರನ್ನ ಓಡಿಸಿಬಿಡ್ತಾರೆ.
10 ಅವ್ರ ಜಂಬಕ್ಕೆ ಸಿಗೋ ಪ್ರತಿಫಲ ಇದೇ,+
ಯಾಕಂದ್ರೆ ಅವರು ಸೈನ್ಯಗಳ ದೇವರಾದ ಯೆಹೋವನ ಜನ್ರನ್ನ ಕೆಣಕಿ ತಮ್ಮ ಬಗ್ಗೆ ಕೊಚ್ಕೊಂಡ್ರು.
11 ಯೆಹೋವ ಅವ್ರಲ್ಲಿ ಭಯವಿಸ್ಮಯ* ಹುಟ್ಟಿಸ್ತಾನೆ,
ಯಾಕಂದ್ರೆ ಭೂಮಿ ಮೇಲಿರೋ ಎಲ್ಲ ದೇವರುಗಳನ್ನ ಆತನು ನಾಶಮಾಡ್ತಾನೆ,*
ರಾಷ್ಟ್ರಗಳ ದ್ವೀಪಗಳೆಲ್ಲ ಆತನಿಗೆ ಬಗ್ಗಿ ನಮಸ್ಕಾರ ಮಾಡುತ್ತೆ,+
ತಮ್ಮತಮ್ಮ ಸ್ಥಾನಗಳಿಂದಾನೇ ಬಗ್ಗಿ ನಮಸ್ಕಾರ ಮಾಡುತ್ತೆ.*
12 ಇಥಿಯೋಪ್ಯದವ್ರೇ, ನೀವೂ ನನ್ನ ಕತ್ತಿಯಿಂದ ಸಾಯ್ತೀರ.+
13 ಆತನು ತನ್ನ ಕೈಯನ್ನ ಉತ್ತರದ ಕಡೆ ಚಾಚಿ ಅಶ್ಶೂರ್ ದೇಶವನ್ನ ನಾಶಮಾಡ್ತಾನೆ.
ಆತನು ನಿನೆವೆಯನ್ನ ನಿರ್ಜನ ಪ್ರದೇಶವಾಗಿ ಮಾಡ್ತಾನೆ.+ ಅದನ್ನ ಮರುಭೂಮಿ ತರ ಒಣಗಿಸಿಬಿಡ್ತಾನೆ.
14 ದನಕುರಿಗಳು, ಎಲ್ಲ ಕಾಡುಪ್ರಾಣಿಗಳು ಅಲ್ಲಿ ಮಲಗಿಕೊಳ್ಳುತ್ತೆ.
ಬಿದ್ದುಹೋಗಿರೋ ಅದ್ರ ಕಂಬಗಳ ಮಧ್ಯ ಬಕಪಕ್ಷಿಗಳು,* ಮುಳ್ಳುಹಂದಿಗಳು ರಾತ್ರಿ ಕಳಿಯುತ್ತೆ.
ಕಿಟಕಿಯಿಂದ ಗೋಳಾಟದ ಶಬ್ದ ಕೇಳಿಸುತ್ತೆ.
ಹೊಸ್ತಿಲ ಹತ್ರ ಅವಶೇಷಗಳು ಬಿದ್ದಿರುತ್ತೆ,
ಯಾಕಂದ್ರೆ ಆತನು ದೇವದಾರು ಹಲಗೆಯ ಹೊದಿಕೆಗಳನ್ನ ಕಿತ್ತು ಎಸಿತಾನೆ.
15 ‘ನಾನೇ ಎಲ್ಲ. ನನ್ನನ್ನ ಬಿಟ್ರೆ ಬೇರೆ ಯಾರೂ ಇಲ್ಲ’ ಅಂತ ಮನಸ್ಸಲ್ಲೇ ಹೇಳ್ತಾ
ಸುರಕ್ಷಿತವಾಗಿದ್ದ ಗರ್ವಿಷ್ಠ ಪಟ್ಟಣ ಇದೇ.
ಈಗ ಅದ್ರ ಪರಿಸ್ಥಿತಿ ಭಯಂಕರ!
ಅದು ಕಾಡು ಪ್ರಾಣಿಗಳು ಮಲಗೋ ಜಾಗ ಆಗಿಬಿಟ್ಟಿದೆ!
ಅದನ್ನ ಹಾದು ಹೋಗುವವ್ರೆಲ್ಲ ಅದನ್ನ ನೋಡಿ ಸೀಟಿ ಹೊಡಿತಾರೆ, ಅದ್ರ ಕಡೆ ಬೆರಳು ತೋರಿಸಿ ತಮಾಷೆ ಮಾಡ್ತಾರೆ.”+