ಯೆಶಾಯ
1 ಉಜ್ಜೀಯ,+ ಯೋತಾಮ,+ ಆಹಾಜ+ ಮತ್ತು ಹಿಜ್ಕೀಯ+ ಅನ್ನೋ ಯೆಹೂದದ ರಾಜರ+ ಕಾಲದಲ್ಲಿ ಆಮೋಚನ ಮಗ ಯೆಶಾಯ*+ ಯೆಹೂದ ಮತ್ತು ಯೆರೂಸಲೇಮಿಗೆ ಏನಾಗುತ್ತೆ ಅಂತ ಒಂದು ದರ್ಶನವನ್ನ ಕಂಡ. ಅದೇನಂದ್ರೆ:
3 ಹೋರಿಗೆ ತನ್ನ ಯಜಮಾನನ ಬಗ್ಗೆ ಚೆನ್ನಾಗಿ ಗೊತ್ತಿರುತ್ತೆ,
ಕತ್ತೆಗೆ ತನ್ನ ಒಡೆಯ ತನಗೆ ಎಲ್ಲಿ ಮೇವು ಹಾಕ್ತಾನೆ ಅಂತ ಗೊತ್ತಿರುತ್ತೆ.
4 ಪಾಪಿಷ್ಠ ಜನಾಂಗವೇ, ನಿನ್ನ ಗತಿ ಏನು ಹೇಳಲಿ!+
ಪಾಪದ ಭಾರ ಹೊತ್ತಿರೋ ಜನ್ರೇ,
ಕೆಟ್ಟವರ ಸಂತತಿಯೇ, ಭ್ರಷ್ಟ ಮಕ್ಕಳೇ, ನಿಮ್ಮ ಗತಿ ಏನು ಹೇಳಲಿ!
ನೀವು ಯೆಹೋವನನ್ನ ತೊರೆದುಬಿಟ್ರಿ,+
ಇಸ್ರಾಯೇಲ್ಯರ ಪವಿತ್ರ ದೇವ್ರನ್ನ ಅಗೌರವಿಸಿದ್ರಿ.
ನೀವು ಆತನಿಗೆ ಬೆನ್ನು ಹಾಕಿದ್ರಿ.
5 ನಿಮ್ಮನ್ನ ಹೊಡಿಯೋಕೆ ನಿಮ್ಮ ದೇಹದಲ್ಲಿ ಯಾವ ಸ್ಥಳ ತಾನೇ ಉಳಿದಿದೆ?
ಯಾಕೆ ನೀವು ದಂಗೆ ಏಳ್ತೀರಾ?+
ನಿಮ್ಮ ತಲೆ ತುಂಬ ಗಾಯಗಳೇ,
ನಿಮ್ಮ ಹೃದಯ ತುಂಬ ರೋಗ ತುಂಬಿದೆ.+
6 ಅಡಿಯಿಂದ ಮುಡಿ ತನಕ ಆರೋಗ್ಯವಾಗಿರೋ ಒಂದು ಸ್ಥಳನೂ ಇಲ್ಲ.
ಎಲ್ಲ ಕಡೆ ಗಾಯ, ಏಟು, ಕೀವುಗಟ್ಟಿದ ಹುಣ್ಣುಗಳು.
ಅವುಗಳ ಕೀವನ್ನ ತೆಗೆದಿಲ್ಲ,* ಅವುಗಳನ್ನ ಕಟ್ಟಿಲ್ಲ, ಎಣ್ಣೆ ಸವರಿ ಮೃದು ಮಾಡಿಲ್ಲ.+
7 ನಿಮ್ಮ ದೇಶ ಹಾಳುಬಿದ್ದಿದೆ,
ನಿಮ್ಮ ಪಟ್ಟಣಗಳು ಬೆಂಕಿಯಿಂದ ಸುಟ್ಟೋಗಿವೆ.
ವಿದೇಶಿಯರು ನಿಮ್ಮ ಕಣ್ಮುಂದೆನೇ ನಿಮ್ಮ ದೇಶನ ನುಂಗಿಹಾಕಿದ್ದಾರೆ.+
ಶತ್ರುಗಳ ದಾಳಿ ಆದ ಮೇಲೆ ಹಾಳುಬೀಳೋ ದೇಶದ ತರ ಅದು ನಿರ್ಜನವಾಗಿದೆ.+
8 ದ್ರಾಕ್ಷಿತೋಟದಲ್ಲಿರೋ ಚಪ್ಪರದ ತರ,
ಸೌತೆ ಹೊಲದಲ್ಲಿರೋ ಗುಡಿಸಲಿನ ತರ,
ಮುತ್ತಿಗೆ ಹಾಕಲಾಗಿರೋ ಪಟ್ಟಣದ ತರ ಚೀಯೋನ್ ಪಟ್ಟಣನ ಬಿಟ್ಟು ಬಿಡಲಾಗಿದೆ.+
9 ಸೈನ್ಯಗಳ ದೇವರಾದ ಯೆಹೋವ ನಮ್ಮಲ್ಲಿ ಸ್ವಲ್ಪ ಜನ್ರನ್ನಾದ್ರೂ ಉಳಿಸದೆ ಹೋಗಿದ್ರೆ,
ನಾವು ಸೊದೋಮಿನ ತರ ಆಗ್ತಿದ್ವಿ,
ಗೊಮೋರಕ್ಕೆ ಆದ ಗತಿನೇ ನಮಗೂ ಆಗ್ತಿತ್ತು.+
10 ಸೊದೋಮನ್ನ ಆಳುವವರೇ,*+ ಯೆಹೋವನ ಮಾತು ಕೇಳಿ.
ಗೊಮೋರದ ಜನ್ರೇ,+ ನಮ್ಮ ದೇವರ ನಿಯಮ ಪುಸ್ತಕಕ್ಕೆ* ಗಮನಕೊಡಿ.
11 ಯೆಹೋವ ಹೀಗೆ ಹೇಳ್ತಿದ್ದಾನೆ “ನೀವು ಕೊಡೋ ತುಂಬ ಬಲಿಗಳಿಂದ ನನಗೇನು ಲಾಭ?+
13 ಪ್ರಯೋಜನಕ್ಕೆ ಬಾರದ ಧಾನ್ಯ ಅರ್ಪಣೆ ತರೋದನ್ನ ನಿಲ್ಲಿಸಿ.
ನಿಮ್ಮ ಧೂಪ ನನಗೆ ಅಸಹ್ಯ.+
ನೀವು ಅಮಾವಾಸ್ಯೆಯನ್ನ,+ ಸಬ್ಬತ್ತನ್ನ ಆಚರಿಸ್ತೀರ,+ ಸಮ್ಮೇಳನಗಳಿಗೆ ಸೇರಿಬರ್ತಿರ.+
ಆಕಡೆ ಅದೂ ಮಾಡ್ತೀರ ಈಕಡೆ ಮಂತ್ರತಂತ್ರಗಳನ್ನೂ+ ಮಾಡ್ತೀರ. ಅದನ್ನ ನನ್ನಿಂದ ಸಹಿಸೋಕಾಗಲ್ಲ.
14 ನಾನು ನಿಮ್ಮ ಅಮಾವಾಸ್ಯೆಗಳನ್ನ ಮತ್ತು ಹಬ್ಬಗಳನ್ನ ದ್ವೇಷಿಸ್ತೀನಿ.
ಅವು ನನಗೆ ಹೊರೆ.
ಅವುಗಳನ್ನ ಸಹಿಸಿ ಸಹಿಸಿ ಸಾಕಾಗಿದೆ.
ಯಾಕಂದ್ರೆ ನಿಮ್ಮ ಕೈ ರಕ್ತದಿಂದ ತುಂಬಿದೆ.+
16 ನೀವು ನಿಮ್ಮನ್ನ ತೊಳ್ಕೊಂಡು ಶುದ್ಧಮಾಡ್ಕೊಳ್ಳಿ,+
ನನ್ನ ಕಣ್ಮುಂದಿಂದ ನಿಮ್ಮ ಕೆಟ್ಟ ಕೆಲಸಗಳನ್ನ ದೂರತಳ್ಳಿ,
ಕೆಟ್ಟದ್ದು ಮಾಡೋದನ್ನ ನಿಲ್ಲಿಸಿ.+
17 ಒಳ್ಳೇ ಕೆಲಸ ಮಾಡೋದನ್ನ ಕಲಿರಿ, ನ್ಯಾಯದಿಂದ ನಡಿರಿ,+
ದಬ್ಬಾಳಿಕೆ ಮಾಡೋರನ್ನ ತಿದ್ದಿ ಸರಿಮಾಡಿ,
ತಂದೆಯಿಲ್ಲದ ಮಗುವಿನ* ಹಕ್ಕುಗಳಿಗಾಗಿ ಹೋರಾಡಿ,
ವಿಧವೆ ಪರವಾಗಿ ವಾದಿಸಿ.”+
18 ಯೆಹೋವ ಹೀಗೆ ಹೇಳ್ತಿದ್ದಾನೆ: “ಬನ್ನಿ, ನಾವೀಗ ನಮ್ಮ ಮಧ್ಯ ಇರೋ ವಿಷ್ಯಗಳನ್ನ ಇತ್ಯರ್ಥ ಮಾಡ್ಕೊಳ್ಳೋಣ,+
ನಿಮ್ಮ ಪಾಪಗಳು ಕಡುಗೆಂಪಾಗಿದ್ರೂ
ಅವನ್ನ ಹಿಮದ ತರ ಬೆಳ್ಳಗೆ ಮಾಡ್ತೀನಿ.+
ತುಂಬ ಕೆಂಪಗೆ ಇರೋ ಬಟ್ಟೆ ತರ ಇದ್ರೂ
ಉಣ್ಣೆ ತರ ಬೆಳ್ಳಗೆ ಮಾಡ್ತೀನಿ.
ಯಾಕಂದ್ರೆ ಈ ಮಾತು ಯೆಹೋವನ ಬಾಯಿಂದ ಬಂದಿದ್ದು.”
21 ನಂಬಿಗಸ್ತಿಕೆಯಿಂದ ಇದ್ದ ಪಟ್ಟಣ+ ಹೇಗೆ ವೇಶ್ಯೆ ತರ ಆಯ್ತಂತ ನೋಡಿ!+
23 ನಿನ್ನ ಅಧಿಕಾರಿಗಳು ಹಠಮಾರಿಗಳಾಗಿದ್ದಾರೆ, ಅವರು ಕಳ್ಳರ ಜೊತೆ ಕೈಜೊಡಿಸಿದ್ದಾರೆ.+
ಅವ್ರಲ್ಲಿ ಪ್ರತಿಯೊಬ್ಬರು ಲಂಚನ ಪ್ರೀತಿಸ್ತಾರೆ, ಉಡುಗೊರೆಗಳನ್ನ ಎದುರುನೋಡ್ತಾರೆ.+
ತಂದೆಯಿಲ್ಲದ ಮಕ್ಕಳಿಗೆ ಅವರು ನ್ಯಾಯ ಕೊಡಿಸಲ್ಲ,
ವಿಧವೆಯರ ಮೊಕದ್ದಮೆ ಅವ್ರಿಗೆ ತಲುಪೋದೇ ಇಲ್ಲ.+
24 ಹಾಗಾಗಿ ನಿಜವಾದ ಒಡೆಯನೂ ಸೈನ್ಯಗಳ ದೇವರೂ ಆದ ಯೆಹೋವ,
ಇಸ್ರಾಯೇಲ್ಯರ ಬಲಿಷ್ಠ ದೇವರು ಹೀಗೆ ಘೋಷಿಸ್ತಿದ್ದಾನೆ “ನಾನು ನನ್ನ ಶತ್ರುಗಳನ್ನ ಅಳಿಸಿಹಾಕ್ತೀನಿ,
ನನ್ನ ಶತ್ರುಗಳ ವಿರುದ್ಧ ಸೇಡು ತೀರಿಸ್ತೀನಿ.+
25 ನನ್ನ ಕೈಯನ್ನ ನಿನ್ನ ವಿರುದ್ಧ ಎತ್ತುತೀನಿ,
ಸಾಬೂನಿನಿಂದ ತೊಳೆಯೋ ತರ ನಿನ್ನ ಕಲ್ಮಶವನ್ನೆಲ್ಲ ತೊಳೆದುಬಿಡ್ತೀನಿ,
ನಿನ್ನ ಕೊಳೆಯನ್ನ ತೆಗೆದುಬಿಡ್ತೀನಿ.+
ಇದಾದ ಮೇಲೆ ನಿನ್ನನ್ನ ನೀತಿಯ ಪಟ್ಟಣ ಮತ್ತು ನಂಬಿಗಸ್ತ ಪಟ್ಟಣ ಅಂತ ಕರೀತಾರೆ.+
ಅವನು ಮತ್ತು ಅವನ ಕೆಲಸಗಳು ಒಟ್ಟಿಗೆ ಸುಟ್ಟು ಹೋಗುತ್ತೆ,
ಅದನ್ನ ಆರಿಸೋಕೆ ಯಾರೂ ಇರಲ್ಲ.”