ಕೀರ್ತನೆ
ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಈ ಗೀತೆಯನ್ನ ತಂತಿವಾದ್ಯಗಳ ಜೊತೆ ಹಾಡಬೇಕು.
4 ನೀತಿವಂತನಾಗಿರೋ ನನ್ನ ದೇವರೇ,+ ನಾನು ಕರೆದಾಗ ನನಗೆ ಉತ್ತರ ಕೊಡು.
ನಾನು ಕಷ್ಟದಲ್ಲಿ ಇರೋವಾಗ ತಪ್ಪಿಸಿಕೊಳ್ಳೋಕೆ ದಾರಿ ತೋರಿಸು.*
ನನಗೆ ದಯೆ ತೋರಿಸು, ನನ್ನ ಪ್ರಾರ್ಥನೆ ಕೇಳು.
2 ಜನರೇ, ಎಲ್ಲಿ ತನಕ ನೀವು ನನಗೆ ಗೌರವ ಕೊಡೋ ಬದಲು ಅವಮಾನ ಮಾಡ್ತಾ ಇರ್ತಿರಾ?
ಎಲ್ಲಿ ತನಕ ಪ್ರಯೋಜನಕ್ಕೆ ಬರದೆ ಇರೋದನ್ನ ಪ್ರೀತಿಸ್ತಾ, ಸುಳ್ಳನ್ನ ಹುಡುಕ್ತಾ ಇರ್ತಿರಾ? (ಸೆಲಾ)
3 ನಿಮಗೆ ಗೊತ್ತಿರಲಿ, ನಿಷ್ಠಾವಂತರನ್ನ ಯೆಹೋವ ವಿಶೇಷವಾಗಿ ನೋಡ್ಕೊಳ್ತಾನೆ.*
ನಾನು ಕರೆದಾಗ ಯೆಹೋವ ಕೇಳಿಸ್ಕೊಳ್ತಾನೆ.
ನೀವು ಹೇಳಬೇಕು ಅಂತಿರೋದನ್ನ ಹಾಸಿಗೆ ಮೇಲೆ ನಿಮ್ಮ ಮನಸ್ಸಲ್ಲೇ ಹೇಳ್ಕೊಂಡು ನೆಮ್ಮದಿಯಿಂದ ಮಲ್ಕೊಳ್ಳಿ. (ಸೆಲಾ)
5 ದೇವರಿಗೆ ಏನೇ ಕೊಟ್ಟರೂ ಒಳ್ಳೇ ಮನಸ್ಸಿಂದ ಕೊಡಿ.
ಯೆಹೋವನ ಮೇಲೆ ಭರವಸೆ ಇಡಿ.+
6 ಎಷ್ಟೋ ಜನ, “ಒಳ್ಳೇ ದಿನ ಯಾರಿಂದ ತರಕ್ಕಾಗುತ್ತೆ?” ಅಂತಾರೆ.
ಯೆಹೋವನೇ, ನಿನ್ನ ಮುಖದ ಕಾಂತಿ ನಮ್ಮ ಮೇಲೆ ಹೊಳೆಯಲಿ.+
7 ಒಳ್ಳೇ ಬೆಳೆ ಮತ್ತು ದ್ರಾಕ್ಷಾಮದ್ಯ ಸಿಕ್ಕಾಗ ಸಿಗೋ ಖುಷಿಗಿಂತ,
ಎಷ್ಟೋ ಜಾಸ್ತಿ ಖುಷಿನ ನೀನು ನನ್ನ ಮನಸ್ಸಲ್ಲಿ ತುಂಬಿಸಿದ್ದೀಯ.