ಕೀರ್ತನೆ
ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಯೆದುತೂನ್+ ಶೈಲಿ.*
2 ನಾನು ಮೂಕನಾಗಿದ್ದೆ, ಏನೂ ಮಾತಾಡಲಿಲ್ಲ,+
ಒಳ್ಳೇದನ್ನ ಮಾತಾಡಕ್ಕೂ ನಾನು ಬಾಯನ್ನ ತೆಗೀಲಿಲ್ಲ,
ಆದ್ರೆ ನನ್ನ ನೋವು ನನ್ನ ಹೃದಯನ ಛಿದ್ರಛಿದ್ರಮಾಡ್ತು.*
3 ನನ್ನ ಹೃದಯ ಒಳಗೊಳಗೇ ಕುದೀತು.
ನಾನು ಆಳವಾಗಿ ಚಿಂತಿಸ್ತಾನೇ* ಇದ್ದೆ, ಬೆಂಕಿ ಉರೀತಾನೇ ಇತ್ತು.
ಕೊನೆಗೆ ನಾನು ಹೀಗೆ ಹೇಳಿದೆ
4 “ಯೆಹೋವನೇ ನನಗೆ ಹೇಳು, ನನ್ನ ಕೊನೆ ಯಾವಾಗ ಅಂತ,
ನನಗೆ ಇನ್ನೆಷ್ಟು ದಿನ ಉಳಿದಿದೆ ಅಂತ ತಿಳ್ಕೊಳ್ಳೋಕೆ ಸಹಾಯಮಾಡು,+
ಆಗ ನನ್ನ ಜೀವನ ಎಷ್ಟು ಚಿಕ್ಕದು ಅಂತ* ನನಗೆ ಗೊತ್ತಾಗುತ್ತೆ.
ಪ್ರತಿಯೊಬ್ಬನು ನೋಡೋಕೆ ಸುರಕ್ಷಿತವಾಗಿ ಕಂಡ್ರೂ ಅವನು ಬರೀ ಒಂದು ಉಸಿರಿಗೆ ಸಮ.+ (ಸೆಲಾ)
6 ನಿಜ, ಪ್ರತಿಯೊಬ್ಬ ಮನುಷ್ಯನು ಒಂದು ನೆರಳಿನ ತರ.
ಅವನು ಸುಮ್ಮಸುಮ್ಮನೆ ತಿರುಗಾಡ್ತಾನೆ.*
ಆಸ್ತಿಯನ್ನ ಗುಡ್ಡೆಹಾಕ್ತಾನೆ, ಆದ್ರೆ ಅದನ್ನ ಯಾರು ಅನುಭವಿಸುತ್ತಾರೆ ಅಂತ ಅವನಿಗೇ ಗೊತ್ತಿರಲ್ಲ.+
7 ಹಾಗಿರುವಾಗ ಯೆಹೋವನೇ, ನಾನು ಯಾವುದರ ಮೇಲೆ ನಿರೀಕ್ಷೆ ಇಡಲಿ?
ನೀನೇ ನನ್ನ ನಿರೀಕ್ಷೆ.
8 ನನ್ನನ್ನ ನನ್ನ ಎಲ್ಲ ಅಪರಾಧಗಳಿಂದ ಬಿಡಿಸು.+
ಮೂರ್ಖ ನನ್ನನ್ನ ಅಣಕಿಸದ ಹಾಗೆ ನೋಡ್ಕೊ.
10 ನೀನು ನನ್ನ ಮೇಲೆ ತಂದಿರೋ ಬಾಧೆಯನ್ನ ನನ್ನಿಂದ ತೆಗೆದುಹಾಕು.
ನಿನ್ನ ಹೊಡೆತದಿಂದ ನಾನು ತತ್ತರಿಸಿ ಹೋಗಿದ್ದೀನಿ.
11 ತಪ್ಪು ಮಾಡಿದವನಿಗೆ ಶಿಕ್ಷೆ ಕೊಟ್ಟು ನೀನು ತಿದ್ದುತ್ತೀಯ,+
ಹುಳ ಬಟ್ಟೆನ ತಿಂದುಹಾಕೋ ತರ ಅವನು ಇಷ್ಟಪಟ್ಟು ಕೂಡಿಸಿಟ್ಟಿರೋದನ್ನೆಲ್ಲ ನೀನು ನಾಶಮಾಡ್ತೀಯ.
ನಿಜವಾಗ್ಲೂ ಮನುಷ್ಯರೆಲ್ಲ ಒಂದು ಉಸಿರಿಗೆ ಸಮ.+ (ಸೆಲಾ)
12 ಯೆಹೋವನೇ, ನನ್ನ ಪ್ರಾರ್ಥನೆಯನ್ನ ಕೇಳು,
ಸಹಾಯಕ್ಕಾಗಿ ನಾನಿಡೋ ಮೊರೆನ ಆಲಿಸು.+
ನನ್ನ ಕಣ್ಣೀರನ್ನ ನೋಡಿನೂ ಸುಮ್ಮನಿರಬೇಡ.
13 ನಾನು ಸಾಯೋ ಮುಂಚೆ, ನಾನು ಇಲ್ಲದೇ ಹೋಗೋ ಮುಂಚೆ,
ನಿನ್ನ ಕೋಪದ ಕಣ್ಣನ್ನ ನನ್ನಿಂದ ತಿರುಗಿಸು.