ಜ್ಞಾನೋಕ್ತಿ
29 ಎಷ್ಟೇ ತಿದ್ದಿದ್ರೂ ಹಠಮಾರಿತನ ಬಿಡದವನು+
ಹಠಾತ್ತನೆ ಮುರಿದು ಬೀಳ್ತಾನೆ, ಚೇತರಿಸ್ಕೊಳ್ಳೋಕೆ ಆಗದಷ್ಟರ ಮಟ್ಟಿಗೆ ಬಿದ್ದುಹೋಗ್ತಾನೆ.+
2 ತುಂಬ ನೀತಿವಂತರಿದ್ರೆ ಜನ ಖುಷಿ ಪಡ್ತಾರೆ,
ಕೆಟ್ಟವನು ಆಳುವಾಗ ಜನ ನರಳ್ತಾರೆ.+
3 ವಿವೇಕವನ್ನ ಪ್ರೀತಿಸೋ ವ್ಯಕ್ತಿ ತನ್ನ ಅಪ್ಪನ ಮನಸ್ಸನ್ನ ಸಂತೋಷ ಪಡಿಸ್ತಾನೆ,+
ವೇಶ್ಯೆಯರ ಸಹವಾಸ ಮಾಡೋನು ಆಸ್ತಿ ಹಾಳು ಮಾಡ್ಕೊಳ್ತಾನೆ.+
4 ರಾಜ ನ್ಯಾಯದಿಂದ ಆಳಿದ್ರೆ ಇಡೀ ದೇಶದಲ್ಲಿ ಶಾಂತಿ ಇರುತ್ತೆ,+
ಆದ್ರೆ ಲಂಚ ತಗೊಳ್ಳೋನು ನಾಶ ತರ್ತಾನೆ.
5 ಪಕ್ಕದ ಮನೆಯವನನ್ನ ಹೊಗಳಿ ಅಟ್ಟಕ್ಕೇರಿಸೋ ವ್ಯಕ್ತಿ
ಅವನ ಕಾಲ ಕೆಳಗೆ ಬಲೆ ಬೀಸ್ತಾನೆ.+
9 ವಿವೇಕಿ ಮೂರ್ಖನ ಜೊತೆ ಜಗಳಕ್ಕೆ ಇಳಿದ್ರೆ
ಮೂರ್ಖ ಕಿರ್ಚಾಡ್ತಾನೆ, ಗೇಲಿ ಮಾಡ್ತಾನೆ, ಆಗ ವಿವೇಕಿಯ ನೆಮ್ಮದಿ ಹಾಳಾಗುತ್ತೆ.+
12 ಅಧಿಕಾರಿ ಸುಳ್ಳುಗಳನ್ನ ನಂಬಿದ್ರೆ,
ಸೇವಕರೆಲ್ಲ ಕೆಟ್ಟವ್ರಾಗ್ತಾರೆ.+
13 ಬಡವನಲ್ಲೂ ದಬ್ಬಾಳಿಕೆ ಮಾಡುವವನಲ್ಲೂ ಒಂದು ವಿಷ್ಯ ಸಾಮಾನ್ಯ,
ಅವರಿಬ್ರ ಕಣ್ಣುಗಳಿಗೂ ಕಾಂತಿ ನೀಡಿದವನು ಯೆಹೋವನೇ.*
15 ಏಟು,* ತಿದ್ದುಪಾಟು ವಿವೇಕವನ್ನ ಕೊಡುತ್ತೆ,+
ಆದ್ರೆ ಹದ್ದುಬಸ್ತಲ್ಲಿ ಇಡದಿದ್ದ ಹುಡುಗ ತನ್ನ ಅಮ್ಮನನ್ನ ಅವಮಾನಕ್ಕೆ ಗುರಿಮಾಡ್ತಾನೆ.
16 ಕೆಟ್ಟವರು ಜಾಸ್ತಿ ಆದಾಗ ಅಪರಾಧಗಳೂ ಜಾಸ್ತಿ ಆಗುತ್ತೆ,
ಆದ್ರೆ ಅವರ ನಾಶವನ್ನ ನೀತಿವಂತರು ಕಣ್ಣಾರೆ ನೋಡ್ತಾರೆ.+
17 ನಿನ್ನ ಮಗನಿಗೆ ಶಿಸ್ತು ಕೊಡು, ಅವನು ನಿನಗೆ ಚೈತನ್ಯ ಕೊಡ್ತಾನೆ,
ನಿನಗೆ ತುಂಬ ಸಂತೋಷ ತರ್ತಾನೆ.+
19 ಮಾತುಗಳಿಂದ ಒಬ್ಬ ಸೇವಕನನ್ನ ತಿದ್ದೋಕೆ ಆಗಲ್ಲ,
ಯಾಕಂದ್ರೆ ವಿಷ್ಯಗಳು ಅರ್ಥವಾದ್ರೂ ಅವನು ಪಾಲಿಸಲ್ಲ.+
20 ದುಡುಕಿ ಮಾತಾಡೋನನ್ನ ನೋಡಿದ್ದೀಯಾ?+
ಅವನಿಗಿಂತ ಮೂರ್ಖನ ಮೇಲೆ ನಂಬಿಕೆ ಇಡೋದು ಒಳ್ಳೇದು.+
21 ಸೇವಕನನ್ನ ಚಿಕ್ಕಂದಿಂದ ತಲೆಮೇಲೆ ಕೂರಿಸಿಕೊಂಡ್ರೆ,
ಕೊನೆಗೆ ಅವನು ಕೃತಜ್ಞತೆ ತೋರಿಸಲ್ಲ.
24 ಕಳ್ಳನ ಜೊತೆಗಾರ ತನ್ನನ್ನ ತಾನೇ ದ್ವೇಷಿಸ್ಕೊಳ್ತಾನೆ.