ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ, ಕೋರಹನ+ ಮಕ್ಕಳ ಮಧುರ ಗೀತೆ.
49 ದೇಶಗಳ ಜನ್ರೇ, ನೀವೆಲ್ಲ ಇದನ್ನ ಕೇಳಿಸ್ಕೊಳ್ಳಿ.
ಭೂಮಿಯ ನಿವಾಸಿಗಳೇ, ನೀವೆಲ್ಲ ಇದಕ್ಕೆ ಗಮನಕೊಡಿ.
2 ಚಿಕ್ಕವರಾಗಿರಲಿ, ದೊಡ್ಡವರಾಗಿರಲಿ
ಶ್ರೀಮಂತರಾಗಿರಲಿ, ಬಡವರಾಗಿರಲಿ ಎಲ್ರೂ ಗಮನಕೊಟ್ಟು ಕೇಳಿ.
4 ನಾನು ನಾಣ್ಣುಡಿಗೆ ಗಮನಕೊಡ್ತೀನಿ,
ತಂತಿವಾದ್ಯವನ್ನ ನುಡಿಸುವಾಗ ನನ್ನ ಒಗಟನ್ನ ವಿವರಿಸ್ತೀನಿ.
5 ಸಂಕಷ್ಟದ ಸಮ್ಯದಲ್ಲಿ ನಾನು ಯಾಕೆ ಹೆದರಬೇಕು?+
ಜನ್ರು ಕೆಟ್ಟ ಕೆಲಸಗಳಿಂದ* ನನ್ನನ್ನ ಮುಗಿಸಿಬಿಡಬೇಕು ಅಂತ ನನ್ನನ್ನ ಸುತ್ಕೊಂಡಾಗ ನಾನು ಯಾಕೆ ಭಯಪಡಬೇಕು?
6 ಯಾರು ತಮ್ಮ ಆಸ್ತಿಪಾಸ್ತಿಯಲ್ಲಿ ಭರವಸೆಯಿಡ್ತಾರೋ,+
ಯಾರು ತಮ್ಮ ಶ್ರೀಮಂತಿಕೆ ಬಗ್ಗೆ ಕೊಚ್ಚಿಕೊಳ್ತಾರೋ,+
7 ಅವ್ರಲ್ಲಿ ಯಾರಿಗೂ ತಮ್ಮ ಸಹೋದರನನ್ನ ಬಿಡಿಸೋಕೆ ಆಗೋದೇ ಇಲ್ಲ ಅಥವಾ
ದೇವ್ರಿಗೆ ಬಿಡುಗಡೆ ಬೆಲೆ ಕೊಟ್ಟು ಅವನನ್ನ ಬಿಡಿಸೋಕೆ ಆಗಲ್ಲ,+
8 (ತಮ್ಮ ಜೀವಕ್ಕಾಗಿ ಅವರು ಕೊಡಬೇಕಾಗಿರೋ ಬಿಡುಗಡೆ ಬೆಲೆ ತುಂಬ ಅಮೂಲ್ಯ. ಹಾಗಾಗಿ ಅವರು ಅದನ್ನ ಯಾವತ್ತೂ ಕೊಡಕ್ಕಾಗಲ್ಲ)
9 ಅವ್ರ ಸಹೋದರ ಸಮಾಧಿಯನ್ನ* ಸೇರದೆ ಇರೋ ಹಾಗೆ ನೋಡ್ಕೊಳ್ಳೋಕೆ, ಅವನು ಶಾಶ್ವತವಾಗಿ ಜೀವಿಸೋ ಹಾಗೆ ಮಾಡೋಕೆ ಅವ್ರ ಕೈಯಲ್ಲಿ ಆಗಲ್ಲ.+
10 ಮೂರ್ಖರು ಮತ್ತು ಬುದ್ಧಿ ಇಲ್ಲದವರು ನಾಶ ಆಗೋ ತರ,
ಬುದ್ಧಿ ಇರೋ ಜನ್ರೂ ನಾಶ ಆಗೋದನ್ನ ಅವರು ನೋಡ್ತಾರೆ.+
ಅವ್ರ ಸಿರಿಸಂಪತ್ತನ್ನ ಇನ್ನೊಬ್ಬರಿಗೆ ಬಿಟ್ಟು ಹೋಗಲೇ ಬೇಕಾಗುತ್ತೆ.+
11 ಅವ್ರ ಮನೆಗಳು ಶಾಶ್ವತವಾಗಿ ಉಳಿಬೇಕು ಅನ್ನೋದು ಅವ್ರ ಮನದಾಳದ ಆಸೆ,
ಅವ್ರ ಡೇರೆಗಳು ತಲತಲಾಂತರಕ್ಕೂ ಇರಬೇಕು ಅನ್ನೋದು ಅವ್ರ ಹೃದಯದಾಳದ ಬಯಕೆ.
ಅವರು ತಮ್ಮ ಆಸ್ತಿಗೆ ತಮ್ಮ ಹೆಸ್ರನ್ನೇ ಇಟ್ಟಿದ್ದಾರೆ.
12 ಆದ್ರೆ ಮನುಷ್ಯನಿಗೆ ಎಷ್ಟೇ ಗೌರವ ಇದ್ರೂ, ಅವನು ಶಾಶ್ವತವಾಗಿ ಬದುಕಲ್ಲ.+
ನಾಶವಾಗಿ ಹೋಗೋ ಪ್ರಾಣಿಗಳಿಗಿಂತ ಅವನೇನೂ ದೊಡ್ಡವನಲ್ಲ.+
13 ಮೂರ್ಖರಿಗೂ ಅವ್ರ ಹಿಂದೆ ಹೋಗೋರಿಗೂ
ಅವ್ರ ಪೊಳ್ಳು ಮಾತುಗಳಲ್ಲಿ ಖುಷಿಪಡೋರಿಗೂ ಇದೇ ಗತಿ ಆಗುತ್ತೆ.+ (ಸೆಲಾ)
14 ಕುರಿಗಳನ್ನ ಕಡಿಯೋಕೆ ತಗೊಂಡು ಹೋಗೋ ತರ,
ಅವ್ರನ್ನ ಸಮಾಧಿಗೆ* ಒಪ್ಪಿಸಲಾಗುತ್ತೆ.
ಸಾವು ಅವ್ರನ್ನ ಕಾಯುತ್ತೆ.
ಬೆಳಗ್ಗೆ ನೀತಿವಂತರು ಅವ್ರ ಮೇಲೆ ಆಳ್ವಿಕೆ ಮಾಡ್ತಾರೆ.+
15 ಆದ್ರೆ ದೇವರು ನನ್ನನ್ನ ಸಮಾಧಿಯ* ಕೈಯಿಂದ* ಬಿಡಿಸ್ತಾನೆ,+
ಯಾಕಂದ್ರೆ ಆತನು ಅಲ್ಲಿಂದ ನನ್ನನ್ನ ಮೇಲಕ್ಕೆ ಎಳ್ಕೊಳ್ತಾನೆ. (ಸೆಲಾ)
16 ಒಬ್ಬ ಮನುಷ್ಯ ಶ್ರೀಮಂತನಾದ್ರೆ ಹೆದರಬೇಡ,
ಅವನ ಮನೆಯ ವೈಭವ ಹೆಚ್ಚಾದ್ರೆ ಭಯಪಡಬೇಡ,
17 ಯಾಕಂದ್ರೆ ಅವನು ಸತ್ತಾಗ ಅವನ ಜೊತೆ ಏನೂ ತಗೊಂಡು ಹೋಗಕ್ಕಾಗಲ್ಲ,+
ಅವನ ವೈಭವ ಅವನ ಜೊತೆ ಹೋಗಲ್ಲ.+
18 ಯಾಕಂದ್ರೆ, ಅವನು ಸಾಯೋ ತನಕ ಅವನನ್ನ ಅವನೇ ಹೊಗಳ್ಕೊಂಡ.+
(ಯಾರಾದ್ರೂ ಏಳಿಗೆ ಆದಾಗ ಜನ ಹೊಗಳ್ತಾರೆ.)+
19 ಆದ್ರೆ ಕೊನೆಗೆ, ಅವನೂ ಪೂರ್ವಜರ ತರ ಸತ್ತು ಹೋಗ್ತಾನೆ.
ಅವನು ಮತ್ತು ಅವನ ಪೂರ್ವಜರು ಇನ್ಯಾವತ್ತೂ ಬೆಳಕನ್ನ ನೋಡೋದಿಲ್ಲ.
20 ಆದ್ರೆ ಈ ವಿಷ್ಯವನ್ನ ಅರ್ಥಮಾಡ್ಕೊಳ್ಳದ ವ್ಯಕ್ತಿ ಎಷ್ಟೇ ಗೌರವ ಗಳಿಸಿದ್ರೂ,+
ನಾಶವಾಗಿ ಹೋಗೋ ಪ್ರಾಣಿಗಿಂತ ಅವನೇನೂ ದೊಡ್ಡವನಲ್ಲ.