ಮೀಕ
ನ್ಯಾಯ ಅಂದ್ರೆ ಏನಂತ ನಿಮಗೆ ಗೊತ್ತಿರಬೇಕಲ್ವಾ?
2 ಆದ್ರೆ ನೀವು ಒಳ್ಳೇದನ್ನ ದ್ವೇಷಿಸಿ,+ ಕೆಟ್ಟದ್ದನ್ನ ಪ್ರೀತಿಸ್ತೀರ,+
ನನ್ನ ಜನ್ರ ಚರ್ಮ ಸುಲಿದು, ಅವ್ರ ಮೂಳೆಗಳಿಂದ ಮಾಂಸವನ್ನ ಕಿತ್ತುಬಿಡ್ತೀರ.+
3 ಅಷ್ಟೇ ಅಲ್ಲ ನೀವು ನನ್ನ ಜನ್ರ ಮಾಂಸ ತಿಂತೀರ,+
ಅವ್ರ ಚರ್ಮ ಸುಲಿತೀರ,
ಅಡುಗೆ ಪಾತ್ರೆಯಲ್ಲಿ* ಬೇಯಿಸೋ ಮಾಂಸ ಮತ್ತು ಮೂಳೆಗಳ ತರ
ನೀವು ಅವ್ರ ಮೂಳೆಗಳನ್ನ ಮುರಿದು ಪುಡಿಪುಡಿ ಮಾಡ್ತೀರ.+
4 ಆಗ ಅವರು ಸಹಾಯಕ್ಕಾಗಿ ಯೆಹೋವನಿಗೆ ಪ್ರಾರ್ಥನೆ ಮಾಡ್ತಾರೆ,
ಆದ್ರೆ ಆತನು ಅವ್ರಿಗೆ ಉತ್ತರ ಕೊಡಲ್ಲ.
5 ಪ್ರವಾದಿಗಳು ನನ್ನ ಜನ್ರನ್ನ ದಾರಿ ತಪ್ಪಿಸ್ತಿದ್ದಾರೆ,+
ತಿನ್ನೋಕೆ ಕೊಡುವವ್ರಿಗೆ,*+ ‘ಶಾಂತಿಯಿರಲಿ’ ಅಂತ ಅವರು ಹೇಳ್ತಾರೆ,+
ತಮಗೆ ತಿನ್ನೋಕೆ ಕೊಡದವ್ರ ಮೇಲೆ ಯುದ್ಧಕ್ಕೆ ಹೋಗ್ತಾರೆ,
ಈ ಪ್ರವಾದಿಗಳ ವಿಷ್ಯದಲ್ಲಿ ಯೆಹೋವ ಹೇಳೋದು ಏನಂದ್ರೆ:
6 ‘ನಿಮ್ಮ ಮೇಲೆ ಕತ್ತಲೆ ಕವಿಯುತ್ತೆ,+ ಆಗ ನಿಮಗೆ ದರ್ಶನ ನೋಡೋಕೆ ಆಗಲ್ಲ,+
ನೀವಿರುವಲ್ಲಿ ಕತ್ತಲೆ ಮಾತ್ರ ಇರುತ್ತೆ, ಆಗ ನಿಮಗೆ ಕಣಿಹೇಳೋಕೆ ಆಗಲ್ಲ.
ಪ್ರವಾದಿಗಳ ಬಾಳಲ್ಲಿ ಸೂರ್ಯ ಮುಳುಗ್ತಾನೆ,
ಅವ್ರಿಗೆ ಹಗಲು ಇರುಳಾಗುತ್ತೆ.+
ಅವ್ರಿಗೆ ದೇವರಿಂದ ಏನೂ ಉತ್ತರ ಸಿಗದ ಕಾರಣ,
ಅವ್ರೆಲ್ಲ ತಮ್ಮ ಮೀಸೆಯನ್ನ* ಮುಚ್ಕೊಳ್ತಾರೆ.’”
8 ಯಾಕೋಬನಿಗೆ ಅವನ ದಂಗೆ ಬಗ್ಗೆ, ಇಸ್ರಾಯೇಲಿಗೆ ಅವನ ಪಾಪದ ಬಗ್ಗೆ ಹೇಳೋಕೆ
ನನ್ನಲ್ಲಿ ಯೆಹೋವನ ಪವಿತ್ರಶಕ್ತಿ ಬಲ, ಧೈರ್ಯ ತುಂಬಿದೆ,
ನ್ಯಾಯವಾಗಿ ನಡಿಯೋಕೆ ಅದು ನನಗೆ ಸಹಾಯ ಮಾಡಿದೆ.
9 ಯಾಕೋಬನ ವಂಶದ ಮುಖ್ಯಸ್ಥರೇ,
ಇಸ್ರಾಯೇಲ್ ಜನ್ರ ಅಧಿಪತಿಗಳೇ, ದಯವಿಟ್ಟು ಇದನ್ನ ಕೇಳಿ,+
ನೀವು ನ್ಯಾಯವನ್ನ ಹೇಸ್ತೀರ, ನೆಟ್ಟಗಿರೋದನ್ನೆಲ್ಲ ಸೊಟ್ಟಗೆ ಮಾಡ್ತೀರ,+
10 ನೀವು ಚೀಯೋನನ್ನ ರಕ್ತಪಾತದಿಂದ, ಯೆರೂಸಲೇಮನ್ನ ಅನೀತಿಯಿಂದ ಕಟ್ತೀರ.+
ನಮ್ಮ ಮೇಲೆ ಯಾವ ನಾಶ ಬರಲ್ಲ”+ ಅಂತಾರೆ.