ಥೆಸಲೋನಿಕದವರಿಗೆ ಬರೆದ ಮೊದಲನೇ ಪತ್ರ
1 ಈ ಪತ್ರ ಬರಿತಾ ಇರೋದು ಪೌಲ, ಸಿಲ್ವಾನ*+ ಮತ್ತು ತಿಮೊತಿ.+ ನಾವು ಈ ಪತ್ರವನ್ನ ತಂದೆಯಾದ ದೇವರ ಜೊತೆ ಮತ್ತು ಒಡೆಯ ಯೇಸು ಕ್ರಿಸ್ತನ ಜೊತೆ ಒಂದಾಗಿರೋ ಥೆಸಲೊನೀಕದ ಸಭೆಗೆ ಬರಿತಾ ಇದ್ದೀವಿ.
ದೇವರು ನಿಮಗೆ ಅಪಾರ ಕೃಪೆ ತೋರಿಸ್ಲಿ, ಶಾಂತಿ ಕೊಡ್ಲಿ.
2 ನಾವು ನಿಮಗೋಸ್ಕರ ಪ್ರಾರ್ಥನೆ ಮಾಡುವಾಗೆಲ್ಲ ದೇವರಿಗೆ ಧನ್ಯವಾದ ಹೇಳ್ತೀವಿ.+ 3 ನಂಬಿಕೆಯಿಂದ ನೀವು ಮಾಡೋ ಸೇವೆಯನ್ನ, ಪ್ರೀತಿಯಿಂದ ನೀವು ಪಡೋ ಶ್ರಮವನ್ನ ನಾವು ನಮ್ಮ ತಂದೆಯಾದ ದೇವರ ಮುಂದೆ ಯಾವತ್ತೂ ಮರೆತಿಲ್ಲ. ನಮ್ಮ ಪ್ರಭು ಯೇಸು ಕ್ರಿಸ್ತನ ಮೇಲೆ ನಿಮಗಿರೋ ನಿರೀಕ್ಷೆಯಿಂದ ನೀವು ಕಷ್ಟಗಳನ್ನ ಸಹಿಸ್ತಾ ಇರೋದನ್ನ ನೆನಪಲ್ಲಿ ಇಟ್ಟಿದ್ದೀವಿ.+ 4 ಸಹೋದರರೇ, ನಿಮ್ಮನ್ನ ದೇವರು ಪ್ರೀತಿಸ್ತಾನೆ, ಆತನೇ ನಿಮ್ಮನ್ನ ಆರಿಸ್ಕೊಂಡಿದ್ದಾನೆ ಅಂತ ನಮಗೆ ಗೊತ್ತು. 5 ಯಾಕಂದ್ರೆ ನಾವು ನಿಮಗೆ ಸಿಹಿಸುದ್ದಿಯನ್ನ ಬರೀ ಮಾತಿಂದ ಅಲ್ಲ, ಮನಸ್ಸಿಗೆ ಮುಟ್ಟೋ ಹಾಗೆ ಪವಿತ್ರಶಕ್ತಿಯಿಂದ, ಬಲವಾದ ನಂಬಿಕೆಯಿಂದ ಸಾರಿದ್ವಿ. ನಿಮ್ಮ ಒಳ್ಳೇದಕ್ಕಾಗಿ ನಿಮ್ಮ ಜೊತೆ ಹೇಗೆ ನಡ್ಕೊಂಡ್ವಿ ಅನ್ನೋದು ನಿಮಗೆ ಗೊತ್ತು. 6 ನೀವು ತುಂಬ ಕಷ್ಟದಲ್ಲಿದ್ರೂ+ ಪವಿತ್ರಶಕ್ತಿಯಿಂದ ಸಿಗೋ ಆನಂದದಿಂದ ದೇವರ ಮಾತನ್ನ ಒಪ್ಕೊಂಡ್ರಿ, ನಮ್ಮ ತರ+ ಮತ್ತು ಯೇಸು ತರ ನಡ್ಕೊಂಡ್ರಿ.+ 7 ಹೀಗೆ ಮಕೆದೋನ್ಯ ಮತ್ತು ಅಖಾಯದಲ್ಲಿ ಇರೋ ಕ್ರಿಸ್ತನ ಎಲ್ಲ ಶಿಷ್ಯರಿಗೆ ಮಾದರಿಗಳಾಗಿ ಇದ್ದೀರ.
8 ನಿಜ ಹೇಳಬೇಕಂದ್ರೆ, ನೀವು ಯೆಹೋವನ* ಮಾತನ್ನ ಮಕೆದೋನ್ಯ, ಅಖಾಯದಲ್ಲಿ ಮಾತ್ರ ಅಲ್ಲ ಎಲ್ಲ ಕಡೆನೂ ಸಾರಿದ್ದೀರ. ದೇವರ ಮೇಲೆ ನಿಮಗಿರೋ ನಂಬಿಕೆ ಬಗ್ಗೆ ಎಲ್ಲ ಕಡೆ ಇರೋ ಜನ ಕೇಳಿಸ್ಕೊಂಡಿದ್ದಾರೆ.+ ಹಾಗಾಗಿ ನಮಗೆ ಹೇಳೋಕೆ ಬೇರೆ ಏನೂ ಇಲ್ಲ. 9 ನಾವು ಮೊದಲ ಸಲ ನಿಮ್ಮನ್ನ ನೋಡಿದ್ರ ಬಗ್ಗೆ, ನೀವು ಮೂರ್ತಿಗಳನ್ನ ತೆಗೆದುಹಾಕಿ+ ಜೀವ ಇರೋ ಸತ್ಯ ದೇವರ ಸೇವೆ ಮಾಡೋಕೆ* ಆತನ ಕಡೆ ತಿರುಗಿದ್ರ ಬಗ್ಗೆ ಅವರು ಆಗಾಗ ಹೇಳ್ತಾ ಇರ್ತಾರೆ. 10 ಅಷ್ಟೇ ಅಲ್ಲ, ದೇವರು ಜೀವಂತವಾಗಿ ಎಬ್ಬಿಸಿದ ಆತನ ಮಗ ಯೇಸು ಸ್ವರ್ಗದಿಂದ ಬರೋದಕ್ಕೆ ನೀವು ಕಾಯ್ತಾ ಇರೋದನ್ನೂ+ ಅವರು ಹೇಳ್ತಾ ಇರ್ತಾರೆ. ಆತನೇ ನಮ್ಮನ್ನ ಮುಂದೆ ದೇವರ ಕೋಪದಿಂದ ತಪ್ಪಿಸಿ ರಕ್ಷಿಸ್ತಾನೆ.+