ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.
2 ಪ್ರತಿದಿನ ಅವುಗಳ ಬಾಯಿಂದ ಆತನನ್ನ ಹೊಗಳೋ ಮಾತುಗಳು ಉಕ್ಕಿಹರಿಯುತ್ತೆ,
ಪ್ರತಿರಾತ್ರಿ ಅವು ಜ್ಞಾನವನ್ನ ತೋರಿಸುತ್ತೆ.
3 ಮಾತಿಲ್ಲ, ಪದಗಳಿಲ್ಲ,
ಅವುಗಳ ಧ್ವನಿನೂ ಕೇಳಿಸಲ್ಲ.
ಆತನು ಆಕಾಶದಲ್ಲಿ ಸೂರ್ಯನಿಗಾಗಿ ಡೇರೆ ಹಾಕಿದ್ದಾನೆ,
5 ಸೂರ್ಯ ತನ್ನ ಕೋಣೆಯಿಂದ ಹೊರಗೆ ಬರೋ ಮದುಮಗನ ತರ ಇದ್ದಾನೆ.
ತನ್ನ ದಾರಿಯಲ್ಲಿ ಬೀಗುತ್ತಾ ಓಡೋ ವೀರ ಸೈನಿಕನ ತರ ಇದ್ದಾನೆ.
ಅವನ ಶಾಖ ತಲುಪದ ಸ್ಥಳ ಒಂದೂ ಇಲ್ಲ.
7 ಯೆಹೋವನ ನಿಯಮ ಪುಸ್ತಕದಲ್ಲಿ ಕುಂದುಕೊರತೆ ಇಲ್ಲ,+ ಅದು ನವಚೈತನ್ಯ ಕೊಡುತ್ತೆ.+
ಯೆಹೋವನ ಎಚ್ಚರಿಕೆಗಳಲ್ಲಿ ಭರವಸೆ ಇಡಬಹುದು.+ ಅವು ಅನುಭವ ಇಲ್ಲದವನನ್ನೂ ವಿವೇಕಿಯಾಗಿ ಮಾಡುತ್ತೆ.+
8 ಯೆಹೋವನಿಂದ ಬರೋ ಅಪ್ಪಣೆಗಳು ನ್ಯಾಯವಾಗಿವೆ, ಅವು ಹೃದಯಕ್ಕೆ ಖುಷಿ ಕೊಡುತ್ತೆ.+
ಯೆಹೋವನ ಆಜ್ಞೆಗಳು ಶುದ್ಧ, ಅವು ಕಣ್ಣಿಗೆ ಹೊಳಪು ನೀಡುತ್ತೆ.+
9 ಯೆಹೋವನ ಭಯ+ ಪವಿತ್ರ. ಅದು ಯಾವಾಗ್ಲೂ ಇರುತ್ತೆ.
ಯೆಹೋವನ ತೀರ್ಪುಗಳು ಸತ್ಯ, ಅವೆಲ್ಲ ನ್ಯಾಯವಾಗಿರುತ್ತೆ.+
10 ಅವುಗಳ ಮುಂದೆ ಚಿನ್ನ ಏನೇನೂ ಅಲ್ಲ,
ಅಪ್ಪಟ* ಚಿನ್ನಕ್ಕಿಂತ ಅವು ಮಿಗಿಲು,+
ಅವು ಜೇನುಗೂಡಿನಿಂದ ತೊಟ್ಟಿಕ್ಕೋ ಜೇನಿಗಿಂತ ಸಿಹಿ.+
12 ತಮ್ಮ ಸ್ವಂತ ತಪ್ಪನ್ನ ಯಾರು ಅರ್ಥಮಾಡ್ಕೊಳ್ತಾರೆ?+
ಗೊತ್ತಿಲ್ಲದೆ ನಾನು ಮಾಡೋ ಪಾಪಗಳನ್ನ ಕ್ಷಮಿಸಿ ನನಗೆ ನಿರ್ದೋಷಿ ಅಂತ ತೀರ್ಪು ಕೊಡು.