ಕೀರ್ತನೆ
ಮೂರನೇ ಪುಸ್ತಕ
(ಕೀರ್ತನೆ 73-89)
ಆಸಾಫನ ಮಧುರ ಗೀತೆ.+
73 ಶುದ್ಧ ಮನಸ್ಸಿರೋ ಇಸ್ರಾಯೇಲ್ಯರಿಗೆ ದೇವರು ನಿಜವಾಗ್ಲೂ ಒಳ್ಳೇದನ್ನೇ ಮಾಡ್ತಾನೆ.+
ಸಾವಿನಲ್ಲೂ ಅವ್ರಿಗೆ ನೋವು ಇಲ್ಲ.+
7 ಅವ್ರ ಸಮೃದ್ಧಿಯಿಂದ* ಅವ್ರ ಕಣ್ಣು ಉಬ್ಬಿಕೊಂಡಿದೆ,
ಅವರು ಮನಸ್ಸಲ್ಲಿ ನೆನಸಿದ್ದಕ್ಕಿಂತ ಹೆಚ್ಚು ಯಶಸ್ಸನ್ನ ಪಡ್ಕೊಂಡಿದ್ದಾರೆ.
8 ಅವರು ಬೇರೆಯವ್ರನ್ನ ಕೀಳಾಗಿ ನೋಡ್ತಾ, ಕೆಟ್ಟಕೆಟ್ಟ ಮಾತು ಆಡ್ತಾರೆ,+
ಜನ್ರನ್ನ ಹೆದರಿಸಿ ಬೆದರಿಸಿ ಜಂಬದಿಂದ ಅವ್ರ ಮೇಲೆ ದಬ್ಬಾಳಿಕೆ ಮಾಡ್ತಾರೆ.+
9 ಅವರು ಕೊಚ್ಚಿಕೊಳ್ಳೋ ಮಾತುಗಳು ಆಕಾಶ ಮುಟ್ಟುತ್ತೆ,
ಅವರು ಇಷ್ಟಬಂದ ಹಾಗೆ ಮಾತಾಡ್ತಾ ಭೂಮಿಯಲ್ಲೆಲ್ಲ ತಿರುಗ್ತಾರೆ.
10 ಹಾಗಾಗಿ ದೇವ್ರ ಜನ್ರು ಅವ್ರ ಕಡೆ ವಾಲ್ತಾರೆ,
ಉಕ್ಕಿ ಹರೀತಿರೋ ಅವ್ರ ನೀರನ್ನ ಕುಡಿತಾರೆ.
11 “ದೇವರಿಗೆ ಇದೆಲ್ಲಾ ಹೇಗೆ ಗೊತ್ತಾಗುತ್ತೆ?+
ಸರ್ವೋನ್ನತನಿಗೆ ನಿಜವಾಗ್ಲೂ ಇದ್ರ ಬಗ್ಗೆ ಗೊತ್ತಾ?” ಅಂತ ಅವರು ಕೇಳ್ತಾರೆ.
12 ಹೌದು, ಈ ಕೆಟ್ಟವರಿಗೆ ಜೀವನ ಯಾವಾಗ್ಲೂ ಆರಾಮಾಗಿ ಇರುತ್ತೆ.+
ಅವ್ರ ಆಸ್ತಿ ಜಾಸ್ತಿ ಆಗ್ತಾನೇ ಇರುತ್ತೆ.+
13 ನಾನು ನನ್ನ ಹೃದಯನ ಶುದ್ಧವಾಗಿ ಇಟ್ಕೊಂಡು,
ನಾನು ನನ್ನನ್ನೇ ನಿರಪರಾಧಿ ಅಂತ ಸಾಬೀತು ಮಾಡಿದ್ದು ಎಲ್ಲ ವ್ಯರ್ಥ ಆಯ್ತು.+
15 ಆದ್ರೆ ಈ ವಿಷ್ಯಗಳನ್ನ ನಾನು ಹೇಳ್ಕೊಂಡಿದ್ರೆ,
ನಾನು ನಿನ್ನ ಜನ್ರಿಗೆ ದ್ರೋಹಮಾಡಿದ ಹಾಗೆ ಆಗ್ತಿತ್ತು.
16 ನಾನದನ್ನ ಅರ್ಥಮಾಡಿಕೊಳ್ಳೋಕೆ ಪ್ರಯತ್ನಿಸಿದಾಗ,
ಅದ್ರಿಂದ ನನಗೆ ನೋವಾಗ್ತಿತ್ತು.
17 ದೇವರ ಆರಾಧನಾ ಸ್ಥಳಕ್ಕೆ ಹೋಗಿ
ಕೆಟ್ಟವರ ಭವಿಷ್ಯದ ಬಗ್ಗೆ ಯೋಚಿಸಿದ ಮೇಲೆನೇ ನನಗೆ ಆ ನೋವು ಕಮ್ಮಿ ಆಯ್ತು.
18 ನೀನು ಖಂಡಿತ ಅವ್ರನ್ನ ಜಾರಿ ಬೀಳೋ ದಾರಿಯಲ್ಲಿ ನಿಲ್ಲಿಸ್ತೀಯ.+
ಹಾಗಾಗಿ ಅವರು ಬಿದ್ದು ನಾಶ ಆಗ್ತಾರೆ.+
19 ಎಷ್ಟು ಬೇಗ ಅವರು ಹಾಳಾಗಿ ಹೋದ್ರು!+
ಇದ್ದಕ್ಕಿದ್ದ ಹಾಗೆ ವಿಪತ್ತು ಬಂದು ಅವರು ಭಯಂಕರ ಅಂತ್ಯ ಕಂಡ್ರು!
20 ಯೆಹೋವನೇ, ಒಬ್ಬ ವ್ಯಕ್ತಿ ನಿದ್ದೆಯಿಂದ ಎದ್ದಾಗ ಕನಸನ್ನ ಮರಿಯೋ ತರ,
ನೀನು ಎದ್ದಾಗ, ಅವ್ರನ್ನ ಮರೆತುಬಿಡ್ತೀಯ.
22 ನಾನು ಮೂರ್ಖನಾಗಿದ್ದೆ, ನನಗೆ ತಿಳುವಳಿಕೆ ಇರಲಿಲ್ಲ,
ಬುದ್ಧಿಯಿಲ್ಲದ ಮೃಗದ ತರ ಇದ್ದೆ.
25 ಸ್ವರ್ಗದಲ್ಲಿ ನಿನ್ನನ್ನ ಬಿಟ್ರೆ ನನಗೆ ಬೇರೆ ಯಾರಿದ್ದಾರೆ?
ನೀನು ನನ್ನ ಜೊತೆ ಇದ್ರೆ ಭೂಮಿ ಮೇಲಿರೋ ಯಾರೂ ನನಗೆ ಬೇಕಾಗಿಲ್ಲ.+
26 ನನ್ನ ದೇಹ, ನನ್ನ ಮನಸ್ಸು ಸುಸ್ತಾಗಿ ಹೋದ್ರೂ,
ದೇವರು ನನ್ನ ಹೃದಯವನ್ನ ಕಾಪಾಡ್ತಾನೆ, ಆತನೇ ನನ್ನ ಬಂಡೆ.
ಯಾವಾಗ್ಲೂ ಆತನೇ ನನ್ನ ಪಾಲು.+
27 ನಿನ್ನಿಂದ ದೂರ ಇರೋರು ನಿಜವಾಗ್ಲೂ ನಾಶವಾಗಿ ಹೋಗ್ತಾರೆ.
ನಂಬಿಕೆದ್ರೋಹ ಮಾಡಿ* ನಿನ್ನನ್ನ ಬಿಟ್ಟು ಹೋಗೋರ ಮೇಲೆ ನೀನು ಅಂತ್ಯ ತರ್ತಿಯ.*+
28 ಆದ್ರೆ ನನ್ನ ಪ್ರಕಾರ, ದೇವರಿಗೆ ಹತ್ತಿರ ಆಗೋದೇ ಒಳ್ಳೇದು.+
ವಿಶ್ವದ ರಾಜ ಯೆಹೋವನ ಕೈಕೆಲಸಗಳನ್ನೆಲ್ಲ ಹೇಳೋಕೆ ಆತನನ್ನ ಆಶ್ರಯ ಮಾಡ್ಕೊಂಡಿದ್ದೀನಿ.+