ಯೆಶಾಯ
31 ಸಹಾಯಕ್ಕಾಗಿ ಈಜಿಪ್ಟಿನ ಮೊರೆ ಹೋಗುವವರ ಗತಿಯನ್ನ ಏನು ಹೇಳಲಿ!+
ಅವರು ಕುದುರೆಗಳನ್ನ ನೆಚ್ಚಿಕೊಂಡಿದ್ದಾರೆ,+
ಯುದ್ಧ ರಥಗಳು ತುಂಬ ಇವೆ ಅಂತ,
ಯುದ್ಧಕುದುರೆಗಳು* ಬಲಿಷ್ಠವಾಗಿವೆ ಅಂತ ಅವುಗಳ ಮೇಲೆ ಭರವಸೆ ಇಟ್ಟಿದ್ದಾರೆ.
ಆದ್ರೆ ಅವರು ಇಸ್ರಾಯೇಲ್ಯರ ಪವಿತ್ರ ದೇವರ ಕಡೆ ನೋಡಲ್ಲ,
ಯೆಹೋವನ ಹತ್ರ ವಾಪಸ್ ಬರಲ್ಲ.*
2 ಆದ್ರೆ ಆತನು ಸಹ ಬುದ್ಧಿವಂತನು, ಆತನು ವಿಪತ್ತನ್ನ ತಂದೇ ತರ್ತಾನೆ,
ತನ್ನ ಮಾತನ್ನ ವಾಪಸ್ ತಗೊಳ್ಳಲ್ಲ.
ಆತನು ಕೆಟ್ಟವರ ಮನೆ ವಿರುದ್ಧ,
ತಪ್ಪುಮಾಡುವವರಿಗೆ ಸಹಾಯ ಮಾಡುವವರ ವಿರುದ್ಧ ಎದ್ದೇಳ್ತಾನೆ.+
ಶಿಕ್ಷೆ ಕೊಡೋಕೆ ಯೆಹೋವ ತನ್ನ ಕೈ ಚಾಚಿದಾಗ,
ಸಹಾಯ ಮಾಡೋಕೆ ಬರೋರು ಎಡವಿ ಬೀಳ್ತಾರೆ,
ಸಹಾಯ ಪಡಿಯೋರೂ ಬಿದ್ದುಹೋಗ್ತಾರೆ,
ಅವರಿಬ್ರೂ ಒಂದೇ ಸಮಯದಲ್ಲಿ ನಾಶವಾಗಿ ಹೋಗ್ತಾರೆ.
4 ಯಾಕಂದ್ರೆ ಯೆಹೋವ ನನಗೆ ಹೀಗೆ ಹೇಳಿದ್ದಾನೆ
“ಸಿಂಹ, ಬಲಿಷ್ಠ ಎಳೇ ಸಿಂಹ ತನ್ನ ಬೇಟೆಗಾಗಿ ಗರ್ಜಿಸೋ ತರ,
ಅದನ್ನ ಓಡಿಸಿಬಿಡೋಕೆ ಕುರುಬರನ್ನೆಲ್ಲ ಕರೆದಾಗ, ಅವ್ರ ಧ್ವನಿಗೆ ಭಯಪಡದೆ
ಆ ಕೋಲಾಹಲಕ್ಕೆ ಹೆದರದೆ ಅದು ಗುರ್ರನ್ನೋ ತರ,
ಸೈನ್ಯಗಳ ದೇವರಾದ ಯೆಹೋವ ಚೀಯೋನಿನ ಬೆಟ್ಟಕ್ಕಾಗಿ ಮತ್ತು ಅದ್ರ ಪರ್ವತಕ್ಕಾಗಿ
ಯುದ್ಧ ಮಾಡೋಕೆ ಸ್ವರ್ಗದಿಂದ ಕೆಳಗಿಳಿದು ಬರ್ತಾನೆ.
5 ಹಾರಾಡೋ ಪಕ್ಷಿ ತನ್ನ ಮರಿಗಳನ್ನ ಕಾಪಾಡೋ ತರ ಸೈನ್ಯಗಳ ದೇವರಾದ ಯೆಹೋವ ವೇಗವಾಗಿ ಬಂದು ಯೆರೂಸಲೇಮನ್ನ ಕಾಪಾಡ್ತಾನೆ.+
ಆತನು ಅದನ್ನ ಕಾಪಾಡಿ ರಕ್ಷಿಸ್ತಾನೆ.
ಅದನ್ನ ಜೋಪಾನ ಮಾಡಿ ಸಂರಕ್ಷಿಸ್ತಾನೆ.”
6 “ಇಸ್ರಾಯೇಲಿನ ಜನ್ರೇ, ನೀವು ನಾಚಿಕೆಬಿಟ್ಟು ಯಾರ ಮೇಲೆ ದಂಗೆ ಎದ್ರೋ ಆತನ ಹತ್ರ ವಾಪಸ್ ಬನ್ನಿ.+ 7 ಯಾಕಂದ್ರೆ ಆ ದಿನ ಪ್ರತಿಯೊಬ್ಬನು ಬೆಳ್ಳಿಯಿಂದ ಮಾಡಿದ ತನ್ನ ಕೆಲಸಕ್ಕೆ ಬಾರದ ದೇವರುಗಳನ್ನ, ಬಂಗಾರದಿಂದ ಮಾಡಿದ ಬೆಲೆಯಿಲ್ಲದ ತನ್ನ ದೇವರುಗಳನ್ನ ತಿರಸ್ಕರಿಸ್ತಾನೆ. ಅವುಗಳನ್ನ ನೀವು ನಿಮ್ಮ ಕೈಯಾರೆ ಮಾಡಿ ಪಾಪ ಮಾಡಿದ್ರಿ.
8 ಅಶ್ಶೂರ್ಯರು ಕತ್ತಿಯಿಂದ ಸಾಯ್ತಾರೆ. ಆದ್ರೆ ಮನುಷ್ಯನ ಕತ್ತಿಯಿಂದಲ್ಲ,
ಮನುಷ್ಯರದ್ದಲ್ಲದ ಕತ್ತಿ ಅವ್ರನ್ನ ನುಂಗಿಹಾಕುತ್ತೆ.+
ಕತ್ತಿಯಿಂದಾಗಿ ಅವರು ಓಡಿ ಹೋಗ್ತಾರೆ,
ಅವ್ರ ಯುವಕರನ್ನ ಒತ್ತಾಯದಿಂದ ಗುಲಾಮರನ್ನಾಗಿ ಮಾಡ್ಕೊಳ್ಳಲಾಗುತ್ತೆ.
9 ವಿಪರೀತ ಭಯದಿಂದಾಗಿ ಅವ್ರ ಕಡಿದಾದ ಬಂಡೆ ನಾಶವಾಗಿ ಹೋಗುತ್ತೆ,
ಸೂಚನಾಕಂಬ ನೋಡಿ ಅವ್ರ ಅಧಿಕಾರಿಗಳು ಹೆದರಿ ನಡುಗ್ತಾರೆ” ಅಂತ ಯೆಹೋವ ಹೇಳ್ತಿದ್ದಾನೆ.
ಆತನ ಜ್ಯೋತಿ* ಚೀಯೋನಲ್ಲಿದೆ, ಆತನ ಕುಲುಮೆ ಯೆರೂಸಲೇಮಲ್ಲಿದೆ.