ಯೆಶಾಯ
ನೀನು ನಾಶಮಾಡೋದನ್ನ ಮುಗಿಸಿದ ತಕ್ಷಣ ನಿನ್ನನ್ನ ನಾಶಮಾಡಲಾಗುತ್ತೆ.+
ನೀನು ಮೋಸಮಾಡೋದನ್ನ ಮುಗಿಸಿದ ತಕ್ಷಣ ನಿನಗೆ ಮೋಸವಾಗುತ್ತೆ.
ನಮ್ಮ ನಿರೀಕ್ಷೆ ನಿನ್ನಲ್ಲೇ.
3 ನಿನ್ನ ಗರ್ಜನೆಯನ್ನ ಕೇಳಿ ಜನಾಂಗಗಳ ಜನ್ರು ಓಡಿಹೋಗ್ತಾರೆ.
ನೀನು ಎದ್ರೆ ಜನಾಂಗಗಳು ಚೆಲ್ಲಾಪಿಲ್ಲಿ ಆಗುತ್ತೆ.+
4 ಹೊಟ್ಟೆಬಾಕ ಮಿಡತೆಗಳು ದೇಶದ ಮೇಲೆ ದಾಳಿಮಾಡೋ ತರ
ಮತ್ತೊಬ್ಬರು ಬಂದು ನಿನ್ನ ಕೊಳ್ಳೆ ಮೇಲೆ ಆಕ್ರಮಣಮಾಡ್ತಾರೆ.
ಮಿಡತೆಗಳ ಗುಂಪುಗಳ ತರ ಜನ್ರು ಅದ್ರ ಮೇಲೆ ಮುಗಿಬೀಳ್ತಾರೆ.
5 ಯೆಹೋವನನ್ನ ಮಹಿಮೆಗೆ ಏರಿಸಲಾಗುತ್ತೆ,
ಯಾಕಂದ್ರೆ ಆತನು ತುಂಬ ಎತ್ರದ ಸ್ಥಳದಲ್ಲಿ ನೆಲೆಸಿದ್ದಾನೆ.
ಆತನು ಚೀಯೋನನ್ನ ನ್ಯಾಯ ನೀತಿಯಿಂದ ತುಂಬಿಸ್ತಾನೆ.
6 ಆ ದಿನಗಳಲ್ಲಿ ಸ್ಥಿರತೆಯನ್ನ ಕೊಡುವವನು ಆತನೇ,
ರಕ್ಷಣೆಯನ್ನ,+ ವಿವೇಕವನ್ನ, ಜ್ಞಾನವನ್ನ, ಯೆಹೋವನ ಭಯವನ್ನ+ ಕೊಡುವವನು ಆತನೇ.
ಇದೇ ಆತನ* ನಿಧಿ.
7 ನೋಡಿ! ಅವ್ರ ಶೂರರು ಬೀದಿಗಳಲ್ಲಿ ಕಿರುಚಾಡ್ತಿದ್ದಾರೆ,
ಶಾಂತಿಯ ಸಂದೇಶವಾಹಕರು ಗೊಳೋ ಅಂತ ಅಳ್ತಿದ್ದಾರೆ.
8 ಹೆದ್ದಾರಿಗಳು ಬಿಕೋ ಅಂತಿವೆ,
ದಾರಿಗಳಲ್ಲಿ ಯಾರೂ ಪ್ರಯಾಣಿಸ್ತಿಲ್ಲ.
ಅವನು* ಒಪ್ಪಂದವನ್ನ ಮುರಿದಿದ್ದಾನೆ,
ಪಟ್ಟಣಗಳನ್ನ ತಿರಸ್ಕರಿಸಿದ್ದಾನೆ,
ಅವನ ದೃಷ್ಟಿಯಲ್ಲಿ ಯಾವ ಮನುಷ್ಯನಿಗೂ ಬೆಲೆ ಇಲ್ಲದಂತಾಗಿದೆ.+
ಲೆಬನೋನ್ ಅವಮಾನಕ್ಕೆ ಒಳಗಾಗಿದೆ,+ ಅದು ಕೊಳೆತು ಹೋಗಿದೆ.
ಶಾರೋನ್ ಬಯಲು ಪ್ರದೇಶವಾಗಿ ಬದಲಾಗಿದೆ,
ಬಾಷಾನ್ ಮತ್ತು ಕರ್ಮೆಲಿನ ಎಲೆಗಳು ಉದುರಿ ಹೋಗ್ತಿವೆ.+
10 ಯೆಹೋವ ಹೀಗನ್ನುತ್ತಿದ್ದಾನೆ “ಈಗ ನಾನು ಮೇಲೇಳ್ತಿನಿ,
ನನ್ನನ್ನೇ ನಾನು ಉನ್ನತಕ್ಕೇರಿಸ್ಕೊಳ್ತಿನಿ,+
ನನ್ನನ್ನೇ ನಾನು ಮಹಿಮೆಪಡಿಸ್ಕೊಳ್ತಿನಿ.
11 ನೀವು ಒಣಹುಲ್ಲನ್ನ ಗರ್ಭಧರಿಸಿ ಮೇವನ್ನ ಹೆರ್ತಿರ.
ನಿಮ್ಮ ಕೆಟ್ಟ ಆಲೋಚನೆಗಳೇ ನಿಮ್ಮನ್ನ ಬೆಂಕಿ ತರ ನುಂಗಿಹಾಕುತ್ತೆ.+
12 ಜನಾಂಗಗಳ ಜನ್ರು ಸುಟ್ಟ ಸುಣ್ಣದ ತರ ಆಗ್ತಾರೆ.
ಕಡಿದ ಮುಳ್ಳುಗಳನ್ನ ಸುಡೋ ತರ ಅವ್ರನ್ನ ಧಗಧಗನೇ ಉರಿಯೋ ಬೆಂಕಿಗೆ ಎಸೆಯಲಾಗುತ್ತೆ.+
13 ದೂರದಲ್ಲಿರುವವರೇ, ನಾನು ಏನು ಮಾಡ್ತೀನಿ ಅಂತ ಕೇಳಿಸ್ಕೊಳ್ಳಿ!
ಹತ್ರದಲ್ಲಿರುವವರೇ, ನನ್ನ ಬಲವನ್ನ ಗುರುತಿಸಿ!
‘ದಹಿಸೋ ಅಗ್ನಿ ಇರೋ ಸ್ಥಳದಲ್ಲಿ ಯಾರು ವಾಸಿಸ್ತಾರೆ?+
ಆರಿಸಲಾಗದ ಬೆಂಕಿ ಹತ್ರ ಯಾರು ನೆಲೆಸ್ತಾರೆ?’ ಅಂತಿದ್ದಾರೆ.
15 ಯಾವಾಗ್ಲೂ ನೀತಿಯಿಂದ ನಡೆಯುವವನು ಅಲ್ಲಿ ವಾಸಿಸ್ತಾನೆ.+
ನ್ಯಾಯವಾಗಿ ಮಾತಾಡುವವನು,+
ಅಪ್ರಾಮಾಣಿಕತೆಯನ್ನ ತ್ಯಜಿಸುವವನು, ಮೋಸದ ಲಾಭವನ್ನ ತಿರಸ್ಕರಿಸುವವನು,
ಲಂಚವನ್ನ ಮುಟ್ಟದಿರುವವನು, ತನ್ನ ಕೈಗಳನ್ನ ಅದ್ರ ಕಡೆ ಚಾಚೋಕೆ ನಿರಾಕರಿಸುವವನು,+
ರಕ್ತಪಾತದ ಬಗ್ಗೆ ಮಾತುಗಳನ್ನ ಕೇಳದ ಹಾಗೆ ತನ್ನ ಕಿವಿಗಳನ್ನ ಮುಚ್ಚಿಕೊಳ್ಳುವವನು,
ಕೆಟ್ಟದ್ದನ್ನ ನೋಡದ ಹಾಗೆ ತನ್ನ ಕಣ್ಣುಗಳನ್ನ ಮುಚ್ಚಿಕೊಳ್ಳುವವನು ಅಲ್ಲಿ ನೆಲೆಸ್ತಾನೆ.
16 ಅಂಥವನು ಎತ್ರ ಸ್ಥಳಗಳಲ್ಲಿ ವಾಸಿಸ್ತಾನೆ.
ಬಂಡೆಯ ಭದ್ರಕೋಟೆ ಅವನ ಸುರಕ್ಷಿತ ಆಶ್ರಯವಾಗಿರುತ್ತೆ.*
ಅವನಿಗೆ ಆಹಾರವನ್ನ ಒದಗಿಸಲಾಗುತ್ತೆ,
ಎಂದಿಗೂ ಅವನಿಗೆ ನೀರಿನ ಕೊರತೆ ಇರಲ್ಲ.”+
17 ನಿನ್ನ ಕಣ್ಣುಗಳು ಮಹಿಮಾನ್ವಿತ ರಾಜನನ್ನ ನೋಡ್ತವೆ,
ಅವು ತುಂಬ ದೂರದಿಂದ ದೇಶವನ್ನ ನೋಡ್ತವೆ.
18 ಭಯಂಕರವಾದ ಆ ಘಟನೆಯನ್ನ ನಿನ್ನ ಹೃದಯದಲ್ಲಿ ನೆನಪಿಸ್ಕೊಳ್ತಾ ನೀನು ಹೀಗೆ ಹೇಳ್ತೀಯ
“ಕಾರ್ಯದರ್ಶಿ ಎಲ್ಲಿದ್ದಾನೆ?
ತೆರಿಗೆ ಕೊಡ್ತಿದ್ದವನು ಎಲ್ಲಿ ಹೋದ?+
ಗೋಪುರಗಳನ್ನ ಲೆಕ್ಕ ಹಾಕ್ತಿದ್ದವನು ಎಲ್ಲಿ?”
19 ನೀನು ಇನ್ಮುಂದೆ ದುರಹಂಕಾರದ ಜನ್ರನ್ನ ನೋಡಲ್ಲ,
ಅವ್ರ ಅಸ್ಪಷ್ಟ* ಭಾಷೆಯನ್ನ ಗ್ರಹಿಸೋಕೆ ಸಾಧ್ಯವಾಗಲ್ಲ,
ಅವ್ರ ತೊದಲೋ ಮಾತುಗಳನ್ನ ಅರ್ಥಮಾಡ್ಕೊಳ್ಳೋಕೆ ಆಗಲ್ಲ.+
20 ಚೀಯೋನನ್ನ ನೋಡಿ! ನಮ್ಮ ಹಬ್ಬಗಳನ್ನ ಆಚರಿಸೋ ಪಟ್ಟಣವನ್ನ ನೋಡಿ!+
ಯೆರೂಸಲೇಮ್ ಪ್ರಶಾಂತವಾದ ನಿವಾಸ ಸ್ಥಳವಾಗುತ್ತೆ,
ಯಾವತ್ತಿಗೂ ಕದಲಿಸಲಾಗದ ಡೇರೆಯಾಗುತ್ತೆ,+ ಅದನ್ನ ನಿನ್ನ ಕಣ್ಣುಗಳು ನೋಡ್ತವೆ.
ಆ ಡೇರೆಯ ಗೂಟಗಳನ್ನ ಯಾವತ್ತಿಗೂ ಕಿತ್ತುಹಾಕಲಾಗಲ್ಲ,
ಅದ್ರ ಒಂದೇ ಒಂದು ಹಗ್ಗವನ್ನೂ ತುಂಡು ಮಾಡಲಾಗಲ್ಲ.
21 ನದಿಗಳು ಮತ್ತು ವಿಶಾಲವಾದ ಕಾಲುವೆಗಳು ಒಂದು ಸ್ಥಳವನ್ನ ಸಂರಕ್ಷಿಸೋ ತರ
ಘನ ಗಾಂಭೀರ್ಯವುಳ್ಳ ಯೆಹೋವ ಅಲ್ಲಿ ನಮ್ಮನ್ನ ಸಂರಕ್ಷಿಸ್ತಾನೆ.
ಯಾವುದೇ ಯುದ್ಧ ಹಡಗುಗಳು ಅಲ್ಲಿಗೆ ಹೋಗಲ್ಲ,
ಯಾವುದೇ ವೈಭವದ ಹಡಗುಗಳು ಅದನ್ನ ಹಾದು ಹೋಗಲ್ಲ.
23 ಶತ್ರುವಿನ ಹಡಗುಗಳ ಹಗ್ಗಗಳು ಸಡಿಲವಾಗ್ತವೆ,
ಕಂಬವನ್ನ ಸ್ಥಿರಪಡಿಸೋಕಾಗಲಿ, ಹಡಗಿನ ಪಟವನ್ನ ಎತ್ತಿ ಕಟ್ಟೋಕಾಗಲಿ ಆಗಲ್ಲ.
ಆ ಸಮಯದಲ್ಲಿ ಅಪಾರ ಕೊಳ್ಳೆಯನ್ನ ಹಂಚಿಕೊಳ್ಳಲಾಗುತ್ತೆ,
ಕುಂಟನೂ ಸಾಕಷ್ಟು ವಸ್ತುಗಳನ್ನ ತಗೊಂಡು ಹೋಗ್ತಾನೆ.+
24 ದೇಶದಲ್ಲಿ ಒಬ್ಬನೂ “ನನಗೆ ಹುಷಾರಿಲ್ಲ” ಅಂತ ಹೇಳಲ್ಲ.+
ಯಾಕಂದ್ರೆ ದೇಶದಲ್ಲಿ ವಾಸಿಸೋ ಜನ್ರ ತಪ್ಪುಗಳನ್ನ ಕ್ಷಮಿಸಲಾಗುತ್ತೆ.+