ಯೆರೆಮೀಯ
10 ಇಸ್ರಾಯೇಲ್ ಜನ್ರೇ, ನಿಮ್ಮ ವಿರುದ್ಧವಾಗಿ ಯೆಹೋವ ಹೇಳೋ ಮಾತುಗಳನ್ನ ಕೇಳಿಸ್ಕೊಳ್ಳಿ. 2 ಯೆಹೋವ ಹೀಗೆ ಹೇಳ್ತಾನೆ
“ನೀವು ಬೇರೆ ದೇಶದ ಪದ್ಧತಿಗಳನ್ನ ಕಲಿಬೇಡಿ,+
ಅವರು ಆಕಾಶದ ಅದ್ಭುತಗಳನ್ನ ನೋಡಿ ಭಯಪಡ್ತಾರೆ,
ಆದ್ರೆ ನೀವು ಅವುಗಳನ್ನ ನೋಡಿ ಭಯಪಡಬೇಡಿ.+
3 ಯಾಕಂದ್ರೆ ಬೇರೆ ದೇಶದ ಪದ್ಧತಿಗಳು ಮೋಸಕರ,
ನಿಪುಣ ಕೆಲಸಗಾರ ಕಾಡಲ್ಲಿರೋ ಒಂದು ಮರ ಕಡಿದು
ಅದನ್ನ ಕೆತ್ತಿ ಒಂದು ಮೂರ್ತಿ ಮಾಡ್ತಾನೆ.+
4 ಅದನ್ನ ಅವರು ಚಿನ್ನಬೆಳ್ಳಿಯಿಂದ ಅಲಂಕರಿಸ್ತಾರೆ,+
ಅದು ಬಿದ್ದುಹೋಗದ ಹಾಗೆ ಸುತ್ತಿಗೆಯಿಂದ ಮೊಳೆಗಳನ್ನ ಹೊಡೆದು ನಿಲ್ಲಿಸ್ತಾರೆ.+
5 ಸೌತೆ ಗದ್ದೆಯಲ್ಲಿರೋ ಬೆದರುಬೊಂಬೆ ಹೇಗೆ ಮಾತಾಡಲ್ವೋ ಹಾಗೆ ಮೂರ್ತಿಗಳು ಮಾತಾಡಲ್ಲ,+
ಅವುಗಳನ್ನ ಎತ್ಕೊಂಡು ಹೋಗಬೇಕು, ಯಾಕಂದ್ರೆ ಅವುಗಳಿಗೆ ನಡಿಯೋಕೆ ಆಗಲ್ಲ.+
ಅವುಗಳಿಗೆ ಹೆದರಬೇಡಿ, ಯಾಕಂದ್ರೆ ಹಾನಿಮಾಡೋಕೆ ಅವುಗಳಿಗೆ ಆಗಲ್ಲ,
ಒಳ್ಳೇದನ್ನ ಮಾಡೋಕೂ ಆಗಲ್ಲ.”+
7 ದೇಶಗಳ ಅರಸನೇ,+ ನಿನಗೆ ಭಯಪಡದವರು ಯಾರಾದ್ರೂ ಇದ್ದಾರಾ? ನಿನಗೆ ಭಯಪಟ್ರೆ ಒಳ್ಳೇದು.
ಯಾಕಂದ್ರೆ ಬೇರೆ ದೇಶಗಳಲ್ಲಿರೋ ಎಲ್ಲ ವಿವೇಕಿಗಳಲ್ಲಿ, ಅವ್ರ ಎಲ್ಲ ಸಾಮ್ರಾಜ್ಯಗಳಲ್ಲಿ
ನಿನ್ನ ಹಾಗೆ ಒಬ್ರೂ ಇಲ್ಲ.+
8 ಅವ್ರೆಲ್ರೂ ವಿವೇಚನೆ ಇಲ್ಲದವರು, ಮೂರ್ಖರು.+
ಮರದ ಮೂರ್ತಿಯಿಂದ ಸಿಗೋ ನಿರ್ದೇಶನದಿಂದ ಏನೂ ಪ್ರಯೋಜನ ಇಲ್ಲ.+
9 ತಾರ್ಷೀಷಿಂದ+ ಬೆಳ್ಳಿ ತಗಡುಗಳನ್ನ,
ಊಫಜ್ನಿಂದ ಚಿನ್ನವನ್ನ ತರಿಸ್ಕೊಳ್ತಾರೆ.
ಅದನ್ನೆಲ್ಲ ಕರಕುಶಲ ಕೆಲಸಗಾರರು, ಲೋಹದ ಕೆಲಸಗಾರರು ಮರದ ತುಂಡಿಗೆ ಹೊದಿಸ್ತಾರೆ,
ಅದಕ್ಕೆ ನೀಲಿ ದಾರದ, ನೇರಳೆ ಬಣ್ಣದ ಬಟ್ಟೆ ತೊಡಿಸ್ತಾರೆ,
ಆ ಮೂರ್ತಿಗಳೆಲ್ಲ ನಿಪುಣ ಕೆಲಸಗಾರರ ಕೈಕೆಲಸ.
10 ಆದ್ರೆ ಯೆಹೋವನೇ ನಿಜವಾದ ದೇವರು,
ಆತನು ಜೀವ ಇರೋ ದೇವರು,+ ಸದಾಕಾಲಕ್ಕೂ ರಾಜ,+
ಆತನ ಕೋಪಕ್ಕೆ ಭೂಮಿ ನಡುಗುತ್ತೆ,+
ಆತನ ಖಂಡನೆಯನ್ನ ತಾಳ್ಕೊಳ್ಳೋಕೆ ಯಾವ ದೇಶದ ಜನ್ರಿಗೂ ಆಗಲ್ಲ.
11 * ನೀವು ಅವ್ರಿಗೆ “ಭೂಮಿ, ಆಕಾಶವನ್ನ ಸೃಷ್ಟಿ ಮಾಡದ ದೇವರುಗಳು
ಭೂಮಿ ಮೇಲಿಂದ ಆಕಾಶದ ಕೆಳಗಿಂದ ನಾಶ ಆಗಿ ಹೋಗುತ್ತೆ”+ ಅಂತ ಹೇಳಬೇಕು.
12 ನಿಜವಾದ ದೇವರು ಭೂಮಿಯನ್ನ ತನ್ನ ಶಕ್ತಿಯಿಂದ ಸೃಷ್ಟಿ ಮಾಡಿದನು,
ತನ್ನ ವಿವೇಕದಿಂದ ಭೂಗೋಳಕ್ಕೆ* ಗಟ್ಟಿಯಾದ ಅಡಿಪಾಯ ಹಾಕಿದನು,+
ತಿಳುವಳಿಕೆಯಿಂದ ಆಕಾಶವನ್ನ ಹರಡಿದನು.+
13 ಆತನ ಧ್ವನಿಗೆ ಆಕಾಶದಲ್ಲಿರೋ ನೀರು ಅಲ್ಲೋಲ ಕಲ್ಲೋಲ ಆಗುತ್ತೆ,+
ಮಳೆಗಾಗಿ ಮಿಂಚನ್ನ* ಮಾಡ್ತಾನೆ.
ತನ್ನ ಭಂಡಾರಗಳಿಂದ ಗಾಳಿಯನ್ನ ತರ್ತಾನೆ.+
14 ಎಲ್ಲ ಮನುಷ್ಯರೂ ವಿವೇಚನೆ ಇಲ್ಲದೆ, ಬುದ್ಧಿ ಇಲ್ಲದೆ ನಡ್ಕೊಳ್ತಿದ್ದಾರೆ.
ಕೆತ್ತಿದ ಮೂರ್ತಿಗಳನ್ನ ಮಾಡಿದ್ದಕ್ಕೆ ಲೋಹದ ಕೆಲಸಗಾರರಲ್ಲಿ ಪ್ರತಿಯೊಬ್ಬ ಅವಮಾನ ಅನುಭವಿಸಬೇಕಾಗುತ್ತೆ,+
ಯಾಕಂದ್ರೆ ಅವರು ಅಚ್ಚಲ್ಲಿ ಮಾಡಿದ ಲೋಹದ ಮೂರ್ತಿಗಳೆಲ್ಲ ಬರೀ ಮೋಸ,
15 ಆ ಮೂರ್ತಿಗಳಿಂದ ಯಾವ ಪ್ರಯೋಜನನೂ ಇಲ್ಲ, ಅವುಗಳನ್ನ ಮಾಡೋದು ಹಾಸ್ಯಾಸ್ಪದ.+
ಅವುಗಳಿಗೆ ಶಿಕ್ಷೆ ವಿಧಿಸೋ ದಿನ ಬಂದಾಗ ಅವು ನಾಶವಾಗಿ ಹೋಗುತ್ತೆ.
16 ಆದ್ರೆ ಯಾಕೋಬನ ಪಾಲು ಆಗಿರುವಾತನು ಆ ಮೂರ್ತಿಗಳ ತರ ಅಲ್ಲ,
ಯಾಕಂದ್ರೆ ಪ್ರತಿಯೊಂದನ್ನ ಸೃಷ್ಟಿ ಮಾಡಿದವನು ಆತನೇ,
ಇಸ್ರಾಯೇಲ್ ಆತನ ಕೋಲು, ಆ ಕೋಲು ಆತನ ಆಸ್ತಿ.+
ಸೈನ್ಯಗಳ ದೇವರಾದ ಯೆಹೋವ ಅನ್ನೋದೇ ಆತನ ಹೆಸ್ರು.+
17 ಮುತ್ತಿಗೆಯಿಂದಾಗಿ ಕಷ್ಟಕ್ಕೆ ಒಳಗಾಗಿರೋ ಸ್ತ್ರೀಯೇ,
ನೆಲದ ಮೇಲೆ ಬಿದ್ದಿರೋ ನಿನ್ನ ವಸ್ತುಗಳನ್ನ ಮೂಟೆ ಕಟ್ಕೊ.
18 ಯಾಕಂದ್ರೆ ಯೆಹೋವ ಹೀಗೆ ಹೇಳ್ತಾನೆ
“ಈ ಸಾರಿ ನಾನು ಈ ದೇಶದ ಜನ್ರನ್ನ ಹೊರಗೆ ಎಸೆದುಬಿಡ್ತೀನಿ,+
ಅವರು ಕಷ್ಟ ಪಡೋ ತರ ಮಾಡ್ತೀನಿ.”
“ಇದು ನನಗೆ ಬಂದಿರೋ ಕಾಯಿಲೆ, ಇದನ್ನ ನಾನು ಸಹಿಸ್ಕೊಳ್ಳಲೇ ಬೇಕು.
20 ನನ್ನ ಡೇರೆ ನಾಶ ಆಗಿದೆ, ನನ್ನ ಡೇರೆಯ ಹಗ್ಗಗಳು ಕಿತ್ತುಹೋಗಿವೆ.+
ನನ್ನ ಮಕ್ಕಳು ನನ್ನನ್ನ ಬಿಟ್ಟುಹೋಗಿದ್ದಾರೆ, ಯಾರೂ ನನ್ನ ಜೊತೆ ಇಲ್ಲ.+
ನನ್ನ ಡೇರೆಯನ್ನ ಹರಡಿ ಎತ್ತಿನಿಲ್ಲಿಸೋಕೆ ಇಲ್ಲಿ ಯಾರೂ ಇಲ್ಲ.
22 ಕೇಳಿಸ್ಕೊಳ್ಳಿ! ಒಂದು ಸುದ್ದಿ ಬಂದಿದೆ! ಒಂದು ಸೈನ್ಯ ಬರ್ತಿದೆ,
ಉತ್ತರದೇಶದಿಂದ ಒಂದು ದೊಡ್ಡ ಕಂಪನ ಕೇಳ್ತಿದೆ,+
ಅದು ಯೆಹೂದದ ಪಟ್ಟಣಗಳನ್ನ ನಾಶ ಮಾಡಿ ಗುಳ್ಳೆನರಿಗಳು ವಾಸಿಸೋ ಸ್ಥಳವಾಗಿ ಮಾಡಿಬಿಡುತ್ತೆ.+
23 ಯೆಹೋವನೇ, ನನಗೆ ಒಂದು ವಿಷ್ಯ ಚೆನ್ನಾಗಿ ಗೊತ್ತು, ಏನಂದ್ರೆ ಮನುಷ್ಯನಿಗೆ ಯಾವ ದಾರಿಯಲ್ಲಿ ಹೋಗಬೇಕು ಅಂತ ತಿಳ್ಕೊಳ್ಳೋ ಸಾಮರ್ಥ್ಯ ಇಲ್ಲ.
ಎಲ್ಲಿ ಹೆಜ್ಜೆ ಇಡಬೇಕು ಅಂತ ತನಗೆ ದಾರಿ ತೋರಿಸ್ಕೊಳ್ಳೋ ಅಧಿಕಾರ ಸಹ ಮನುಷ್ಯನಿಗಿಲ್ಲ.+
24 ಯೆಹೋವನೇ, ನಿನ್ನ ನ್ಯಾಯಕ್ಕೆ ತಕ್ಕ ಹಾಗೆ ನನ್ನನ್ನ ತಿದ್ದು,
ಆದ್ರೆ ಕೋಪದಿಂದಲ್ಲ,+ ಯಾಕಂದ್ರೆ ಕೋಪದಿಂದ ತಿದ್ದಿದ್ರೆ ನಾನು ನಾಶ ಆಗಿಬಿಡ್ತೀನಿ.+
25 ನಿನ್ನನ್ನ ಅಸಡ್ಡೆ ಮಾಡಿದ ಜನ್ರ ಮೇಲೆ,
ನಿನ್ನ ಹೆಸ್ರಲ್ಲಿ ಬೇಡ್ಕೊಳ್ಳೋ ಕುಲಗಳ ಮೇಲೆ ನಿನ್ನ ಕೋಪ ಸುರಿ.+