ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.
2 ನೀನು ಅವನ ಮನಸ್ಸಲ್ಲಿರೋ ಬಯಕೆಯನ್ನ ನಿಜ ಮಾಡ್ತೀಯ,+
ಅವನ ತುಟಿಗಳ ಕೋರಿಕೆಯನ್ನ ನೆರವೇರಿಸ್ತೀಯ. (ಸೆಲಾ)
4 ಅವನು ನಿನ್ನ ಹತ್ರ ಜೀವ ಕೇಳಿಕೊಂಡ, ನೀನು ಅದನ್ನ ಅವನಿಗೆ ಕೊಟ್ಟೆ,+
ಅವನಿಗೆ ದೀರ್ಘ ಆಯುಷ್ಯವನ್ನ, ಶಾಶ್ವತ ಜೀವವನ್ನ ಕೊಟ್ಟೆ.
5 ಅವನನ್ನ ಬಿಡಿಸೋಕೆ ನೀನು ಮಾಡೋ ಕೆಲಸಗಳು ಅವನಿಗೆ ಗೌರವ ತರುತ್ತೆ,+
ಘನತೆ, ವೈಭವವನ್ನ ನೀನು ಅವನಿಗೆ ಕೊಡ್ತೀಯ.
7 ಯಾಕಂದ್ರೆ ರಾಜ ಯೆಹೋವನಲ್ಲಿ ಭರವಸೆ ಇಟ್ಟಿದ್ದಾನೆ.+
ಸರ್ವೋನ್ನತನ ಶಾಶ್ವತ ಪ್ರೀತಿಯಿಂದಾಗಿ ಅವನು ಯಾವತ್ತೂ ಕದಲಲ್ಲ.+
8 ನಿನ್ನ ಶತ್ರುಗಳನ್ನೆಲ್ಲ ನಿನ್ನ ಕೈ ಹುಡುಕುತ್ತೆ,
ನಿನ್ನನ್ನ ದ್ವೇಷಿಸೋರನ್ನ ನಿನ್ನ ಬಲಗೈ ಶೋಧಿಸುತ್ತೆ.
9 ನೀನು ಬರೋವಾಗ ಅವರು ಉರಿಯೋ ಕುಲುಮೆಯಲ್ಲಿ ನಾಶವಾಗೋ ವಸ್ತುಗಳ ತರ ನಾಶವಾಗ್ತಾರೆ.
ಯೆಹೋವ ತನ್ನ ಕೋಪದಿಂದ ಅವರನ್ನ ನುಂಗಿಬಿಡ್ತಾನೆ. ಬೆಂಕಿ ಅವರನ್ನ ಸುಟ್ಟುಬಿಡುತ್ತೆ.+
10 ಅವರ ವಂಶದವರನ್ನ* ನೀನು ಭೂಮಿಯಿಂದ ಅಳಿಸಿಹಾಕ್ತೀಯ.
ಅವರ ಸಂತತಿಯನ್ನ ಮನುಷ್ಯರ ಮಧ್ಯದಿಂದ ತೆಗೆದುಹಾಕ್ತೀಯ.
11 ಯಾಕಂದ್ರೆ ಅವರು ನಿನಗೆ ಕೆಟ್ಟದ್ದನ್ನ ಮಾಡೋಕೆ ಬಯಸಿದ್ರು,+
ನಿನ್ನ ವಿರುದ್ಧ ಸಂಚು ಮಾಡಿದ್ರು. ಆದ್ರೆ ಅವು ನಡೀಲಿಲ್ಲ.+
13 ಯೆಹೋವನೇ, ದಯವಿಟ್ಟು ನಿನ್ನ ಬಲ ತೋರಿಸು.
ನಿನ್ನ ಶಕ್ತಿ ಬಗ್ಗೆ ನಾವು ಹಾಡಿ ಹೊಗಳ್ತೀವಿ.*