ಯೋಹಾನ ಬರೆದ ಮೊದಲನೇ ಪತ್ರ
2 ನನ್ನ ಪ್ರೀತಿಯ ಮಕ್ಕಳೇ, ನೀವು ಪಾಪ ಮಾಡಬಾರದು ಅಂತ ಈ ವಿಷ್ಯಗಳ ಬಗ್ಗೆ ನಿಮಗೆ ಬರಿತಾ ಇದ್ದೀನಿ. ಆದ್ರೆ ಯಾರಾದ್ರೂ ಪಾಪ ಮಾಡೋದಾದ್ರೆ ಅವ್ರಿಗೆ ಸಹಾಯ ಮಾಡೋಕೆ+ ತಂದೆ ಹತ್ರ ನೀತಿವಂತನಾಗಿರೋ ಯೇಸು ಕ್ರಿಸ್ತ ಇದ್ದಾನೆ.+ 2 ನಾವು ಮತ್ತೆ ದೇವರ ಜೊತೆ ಶಾಂತಿ ಸಂಬಂಧದಲ್ಲಿ ಇರಬೇಕಂತ ಆತನು ತನ್ನನ್ನೇ ಅರ್ಪಿಸಿದ್ದಾನೆ.*+ ಆತನು ನಮ್ಮ ಪಾಪಗಳಿಗೆ+ ಮಾತ್ರ ಅಲ್ಲ ಇಡೀ ಲೋಕದ ಜನ್ರ ಪಾಪಗಳಿಗೂ ಸೇರಿ ಅದನ್ನ ಕೊಟ್ಟಿದ್ದಾನೆ.+ 3 ನಾವು ಆತನ ಆಜ್ಞೆಗಳನ್ನ ಪಾಲಿಸ್ತಾ ಇದ್ರೆ ಆತನನ್ನ ತಿಳ್ಕೊಂಡಿದ್ದೀವಿ ಅಂತ ಎಲ್ರಿಗೂ ಗೊತ್ತಾಗುತ್ತೆ. 4 “ನಾನು ದೇವರ ಬಗ್ಗೆ ತಿಳ್ಕೊಂಡಿದ್ದೀನಿ” ಅಂತ ಹೇಳಿ ಆತನ ಆಜ್ಞೆಗಳನ್ನ ಪಾಲಿಸದೆ ಇರುವವನು ಸುಳ್ಳುಬುರುಕ. ಅವನ ಹೃದಯದಲ್ಲಿ ಸತ್ಯಾನೇ ಇಲ್ಲ. 5 ಆದ್ರೆ ಯಾರು ಆತನ ಮಾತಿನ ಪ್ರಕಾರ ನಡಿತಾರೋ ಅವ್ರಿಗೆ ದೇವರ ಮೇಲೆ ಪ್ರೀತಿ ಇರುತ್ತೆ.+ ಅದು ಎಲ್ರಿಗೂ ಗೊತ್ತಾಗುತ್ತೆ. ಇದ್ರಿಂದ ನಾವು ದೇವರ ಜೊತೆ ನಡೀತಾ ಇದ್ದೀವಿ ಅಂತ ಗೊತ್ತಾಗುತ್ತೆ.+ 6 ನಾನು ದೇವರ ಜೊತೆ ನಡೀತಾ ಇದ್ದೀನಿ ಅಂತ ಹೇಳೋ ವ್ಯಕ್ತಿಗೆ ಯೇಸು ತರಾನೇ ನಡಿಯೋ ಜವಾಬ್ದಾರಿ ಇದೆ.+
7 ಪ್ರೀತಿಯ ಸಹೋದರ ಸಹೋದರಿಯರೇ, ನಾನು ನಿಮಗೆ ಬರಿತಾ ಇರೋದು ಒಂದು ಹೊಸ ಆಜ್ಞೆ ಅಲ್ಲ, ಇದು ಮೊದಲಿಂದಾನೇ ಇತ್ತು.+ ಇದು ಹಳೇ ಆಜ್ಞೆನೇ. ಈ ಹಳೇ ಆಜ್ಞೆ ನೀವು ಕೇಳಿಸ್ಕೊಂಡಿರೋ ಮಾತೇ. 8 ಯೇಸು ಮತ್ತು ನೀವು ಪಾಲಿಸಿದ ಆ ಆಜ್ಞೆಯನ್ನೇ ಮತ್ತೆ ಹೊಸ ಆಜ್ಞೆ ತರ ಬರಿತಾ ಇದ್ದೀನಿ. ಯಾಕಂದ್ರೆ ಕತ್ತಲೆ ಕಳೆದು ನಿಜವಾದ ಬೆಳಕು ಈಗಾಗ್ಲೇ ಪ್ರಕಾಶಿಸ್ತಿದೆ.+
9 ತಾನು ಬೆಳಕಲ್ಲಿ ಇದ್ದೀನಿ ಅಂತ ಹೇಳಿ ತನ್ನ ಸಹೋದರನ ಮೇಲೆ ದ್ವೇಷ ಇಟ್ಕೊಂಡ್ರೆ+ ಅವನು ಇನ್ನೂ ಕತ್ತಲೆಯಲ್ಲೇ ಇದ್ದಾನೆ.+ 10 ತನ್ನ ಸಹೋದರನನ್ನ ಪ್ರೀತಿಸೋ ವ್ಯಕ್ತಿ ಬೆಳಕಲ್ಲೇ ಇರ್ತಾನೆ.+ ಯಾವ ಕಾರಣಕ್ಕೂ ಎಡವಿ ಬೀಳಲ್ಲ. 11 ಆದ್ರೆ ತನ್ನ ಸಹೋದರನ ಮೇಲೆ ದ್ವೇಷ ಇಟ್ಕೊಂಡಿರೋ ವ್ಯಕ್ತಿ ಕತ್ತಲಲ್ಲೇ ಇದ್ದಾನೆ ಮತ್ತು ಕತ್ತಲಲ್ಲೇ ನಡಿತಾನೆ.+ ಅವನು ಎಲ್ಲಿಗೆ ಹೋಗ್ತಾ ಇದ್ದಾನೆ ಅಂತ ಅವನಿಗೇ ಗೊತ್ತಿಲ್ಲ.+ ಯಾಕಂದ್ರೆ ಅವನ ಮುಖ ಕತ್ತಲೆಯಿಂದ ತುಂಬ್ಕೊಂಡಿದೆ.
12 ಪ್ರೀತಿಯ ಮಕ್ಕಳೇ, ಆತನ ಹೆಸ್ರಿನ ಮೂಲಕ ನಿಮ್ಮ ಪಾಪಗಳಿಗೆ ಕ್ಷಮೆ ಸಿಕ್ಕಿದೆ.+ 13 ಅಪ್ಪಂದಿರೇ, ಮೊದಲಿಂದಾನೇ ಇದ್ದವನ ಬಗ್ಗೆ ನಿಮಗೆ ಗೊತ್ತಿರೋದ್ರಿಂದ ನಾನು ನಿಮಗೆ ಇದನ್ನ ಬರಿತಾ ಇದ್ದೀನಿ. ಪ್ರೀತಿಯ ಯುವಜನ್ರೇ, ನೀವು ಸೈತಾನನ ಮೇಲೆ ಯುದ್ಧ ಮಾಡಿ ಗೆದ್ದಿದ್ದೀರ.+ ಅದಕ್ಕೆ ನಾನು ನಿಮಗೆ ಇದನ್ನ ಬರಿತಾ ಇದ್ದೀನಿ. ಚಿಕ್ಕ ಮಕ್ಕಳೇ, ನೀವು ನಮ್ಮ ತಂದೆಯಾಗಿರೋ ದೇವರ ಬಗ್ಗೆ ತಿಳ್ಕೊಂಡಿದ್ದೀರ.+ ಅದಕ್ಕೆ ನಿಮಗೆ ಈ ಪತ್ರ ಬರಿತಾ ಇದ್ದೀನಿ. 14 ಅಪ್ಪಂದಿರೇ, ಮೊದಲಿಂದಾನೇ ಇದ್ದವನ ಬಗ್ಗೆ ನೀವು ತಿಳ್ಕೊಂಡಿದ್ದೀರ. ಅದಕ್ಕೆ ನಾನು ನಿಮಗೆ ಬರಿತಾ ಇದ್ದೀನಿ. ಯುವಜನ್ರೇ, ನಿಮಗೆ ಶಕ್ತಿ ಇರೋದ್ರಿಂದ,+ ದೇವರ ಮಾತಿನ ಮೇಲೆ ನಂಬಿಕೆ ಇರೋದ್ರಿಂದ+ ನೀವು ಸೈತಾನನ ಮೇಲೆ ಯುದ್ಧ ಮಾಡಿ ಗೆದ್ದಿದ್ದೀರ.+ ಅದಕ್ಕೆ ನಾನು ನಿಮಗೆ ಇದನ್ನ ಬರಿತಾ ಇದ್ದೀನಿ.
15 ಲೋಕವನ್ನ, ಲೋಕದಲ್ಲಿರೋ ವಸ್ತುಗಳನ್ನ ಪ್ರೀತಿಸಬೇಡಿ.+ ಯಾರಾದ್ರೂ ಲೋಕವನ್ನ ಪ್ರೀತಿಸೋದಾದ್ರೆ ತಂದೆ ಮೇಲೆ ಅವನಿಗೆ ಪ್ರೀತಿ ಇಲ್ಲ ಅಂತರ್ಥ.+ 16 ಯಾಕಂದ್ರೆ ಒಬ್ಬ ವ್ಯಕ್ತಿ ತನಗೆ ಬೇಕಾದ ಕೆಟ್ಟ ವಿಷ್ಯಗಳ ಮೇಲೆ ಆಸೆಪಡೋದು ಸಹಜ.+ ಅವನ ಹತ್ರ ಇರೋ ವಸ್ತುಗಳನ್ನ ಬೇರೆಯವ್ರಿಗೆ ತೋರಿಸಿ ಜಂಬ ಕೊಚ್ಕೊಳ್ಳೋದು ಈ ಲೋಕದ ಜನ್ರ ಬುದ್ಧಿ. ಆದ್ರೆ ಈ ತರ ಯೋಚ್ನೆ ಮಾಡೋದನ್ನ ನಮ್ಮ ತಂದೆ ಕಲಿಸ್ಕೊಟ್ಟಿಲ್ಲ. ಇದೆಲ್ಲ ಲೋಕದ ಜನ್ರ ಚಿಂತೆ. 17 ಅಷ್ಟೇ ಅಲ್ಲ, ಲೋಕ ಮತ್ತು ಅದ್ರ ಆಸೆ ನಾಶ ಆಗುತ್ತೆ.+ ಆದ್ರೆ ದೇವರ ಇಷ್ಟವನ್ನ ಮಾಡೋ ವ್ಯಕ್ತಿ ಯಾವಾಗ್ಲೂ ಇರ್ತಾನೆ.+
18 ಚಿಕ್ಕ ಮಕ್ಕಳೇ, ಸಮಯ ತುಂಬ ಕಮ್ಮಿ ಇದೆ. ಕ್ರಿಸ್ತನ ಶತ್ರು ಬರ್ತಾ ಇದ್ದಾನೆ.+ ಈಗ್ಲೇ ತುಂಬ ಶತ್ರುಗಳು ಬಂದುಬಿಟ್ಟಿದ್ದಾರೆ.+ ಅದಕ್ಕೆ ನಮಗೆ ಉಳಿದಿರೋ ಸಮಯ ತುಂಬ ಕಮ್ಮಿ ಅಂತ ಗೊತ್ತಾಗುತ್ತೆ. 19 ಅವರು ನಮ್ಮ ಜೊತೆನೇ ಇದ್ದವರು. ಆದ್ರೆ ನಮ್ಮವರಲ್ಲ.+ ಅವರು ನಮ್ಮವರು ಆಗಿದ್ರೆ ನಮ್ಮ ಜೊತೆನೇ ಇರ್ತಿದ್ರು. ಆದ್ರೆ ಅವರು ಯಾರೂ ನಮ್ಮವ್ರಲ್ಲ ಅಂತ ತೋರಿಸಿ ಕೊಡೋಕೆ ನಮ್ಮನ್ನ ಬಿಟ್ಟು ಹೋದ್ರು.+ 20 ದೇವರು ನಿಮ್ಮನ್ನ ಅಭಿಷೇಕ ಮಾಡಿ ಆರಿಸ್ಕೊಂಡಿದ್ದಾನೆ.+ ನಿಮಗೆಲ್ಲ ಜ್ಞಾನ ಇದೆ. 21 ನಿಮಗೆ ಸತ್ಯ ಏನಂತ ಗೊತ್ತಿಲ್ಲ ಅಂತಲ್ಲ,+ ಬದಲಿಗೆ ನಿಮಗೆ ಅದು ಗೊತ್ತು ಮತ್ತು ಸತ್ಯದಿಂದ ಯಾವತ್ತೂ ಸುಳ್ಳು ಬರಲ್ಲ ಅಂತ ನಾನು ಇದನ್ನ ಬರಿತಾ ಇದ್ದೀನಿ.+
22 ಯೇಸುನೇ ಕ್ರಿಸ್ತ ಅನ್ನೋದನ್ನ ಒಪ್ಕೊಳ್ಳದೆ ಇರುವವನು ಬಿಟ್ರೆ ಇನ್ಯಾರು ಸುಳ್ಳು ಹೇಳ್ತಾರೆ?+ ತಂದೆಯನ್ನೂ ಮಗನನ್ನೂ ಒಪ್ಕೊಳ್ಳದೇ ಇರುವವನೇ ಕ್ರಿಸ್ತನ ಶತ್ರು.+ 23 ಮಗನನ್ನ ಒಪ್ಕೊಳ್ಳದೇ ಇರುವವನಿಗೆ ತಂದೆ ಆಶೀರ್ವಾದ ಸಿಗಲ್ಲ.+ ಆದ್ರೆ ಮಗನನ್ನ ಒಪ್ಕೊಳ್ಳುವವ್ರಿಗೆ+ ದೇವರ ಆಶೀರ್ವಾದ ಸಿಗುತ್ತೆ.+ 24 ಮೊದಲಿಂದಾನೂ ನೀವು ಕೇಳಿಸ್ಕೊಂಡಿರೋ ವಿಷ್ಯಗಳನ್ನ ಯಾವತ್ತೂ ಮರಿಬೇಡಿ.+ ಹಾಗೆ ಮಾಡೋದಾದ್ರೆ ನೀವು ತಂದೆಯನ್ನ, ಮಗನನ್ನ ಒಪ್ಕೊಳ್ತೀರ. 25 ಅಷ್ಟೇ ಅಲ್ಲ, ದೇವರು ನಮಗೆ ನಿತ್ಯಜೀವ+ ಕೊಡ್ತೀನಿ ಅಂತ ಆತನೇ ಮಾತು ಕೊಟ್ಟಿದ್ದಾನೆ.
26 ನಿಮ್ಮನ್ನ ದಾರಿತಪ್ಪಿಸೋಕೆ ಜನ್ರು ಪ್ರಯತ್ನಿಸ್ತಾರೆ. ಆದ್ರೆ ನೀವು ಹುಷಾರಾಗಿ ಇರಬೇಕಂತ ಈ ವಿಷ್ಯಗಳನ್ನ ಬರಿತಾ ಇದ್ದೀನಿ. 27 ಆದ್ರೆ ನಿಮ್ಮ ವಿಷ್ಯಕ್ಕೆ ಬಂದ್ರೆ, ದೇವರು ನಿಮಗೆ ಪವಿತ್ರಶಕ್ತಿ ಕೊಟ್ಟು ನಿಮ್ಮನ್ನ ಅಭಿಷೇಕ ಮಾಡಿರೋದ್ರಿಂದ+ ಆ ಶಕ್ತಿ ನಿಮ್ಮಲ್ಲಿ ಇರುತ್ತೆ. ಅದಕ್ಕೇ ನಿಮಗೆ ಕಲಿಸಿಕೊಡೋಕೆ ಯಾರ ಅವಶ್ಯಕತೆನೂ ಇಲ್ಲ. ಆದ್ರೆ ದೇವರು ಆ ಪವಿತ್ರಶಕ್ತಿನ ಬಳಸಿ ನಿಮಗೆ ಎಲ್ಲ ವಿಷ್ಯಗಳನ್ನ ಹೇಳ್ತಾನೆ.+ ಅದೆಲ್ಲ ಸತ್ಯ. ಅದ್ರಲ್ಲಿ ಸುಳ್ಳು ಯಾವುದೂ ಇಲ್ಲ. ಪವಿತ್ರಶಕ್ತಿ ನಿಮಗೆ ಕಲಿಸಿಕೊಟ್ಟಿರೋ ಹಾಗೆ ನೀವು ಆತನನ್ನ ಒಪ್ಕೊಳ್ಳಿ.+ 28 ಚಿಕ್ಕ ಮಕ್ಕಳೇ, ಆತನನ್ನ ಒಪ್ಕೊಳ್ಳಿ. ಆಗ್ಲೇ ಆತನು ಮತ್ತೆ ಬರುವಾಗ ನಮಗೆ ಧೈರ್ಯದಿಂದ ಮಾತಾಡೋಕೆ+ ಆಗುತ್ತೆ. ಆತನನ್ನ ನೋಡಿ ನಾಚಿಕೆಯಿಂದ ಬಚ್ಚಿಟ್ಕೊಳ್ಳಲ್ಲ. 29 ಯೇಸು ನೀತಿವಂತ ಅಂತ ನಿಮಗೆ ಗೊತ್ತಿರೋದ್ರಿಂದ ಸರಿಯಾದ ವಿಷ್ಯಗಳನ್ನ ಮಾಡೋ ಜನ್ರು ದೇವರ ಮಕ್ಕಳು ಅಂತ ಗೊತ್ತಾಗುತ್ತೆ.+