ಕೀರ್ತನೆ
ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.
40 ನಾನು ಯೆಹೋವನಿಗಾಗಿ ತಾಳ್ಮೆಯಿಂದ ಕಾದೆ,*
ನಾನು ಹೇಳೋದನ್ನ ಕೇಳಿಸ್ಕೊಳ್ಳೋಕೆ ಆತನು ಬಾಗಿದ,* ಸಹಾಯಕ್ಕಾಗಿ ನಾನಿಟ್ಟ ಮೊರೆಯನ್ನ ಕೇಳಿಸ್ಕೊಂಡ.+
2 ಹರಿಯೋ ಪ್ರವಾಹದ ನೀರಿಂದ ಆತನು ನನ್ನನ್ನ ಮೇಲಕ್ಕೆತ್ತಿದ,
ಕೆಸರಿನ ಗುಂಡಿಯಿಂದ ಎಬ್ಬಿಸಿದ.
ಕಡಿದಾದ ಬಂಡೆಗಳ ಮೇಲೆ ನನ್ನನ್ನ ನಿಲ್ಲಿಸಿ,
ನನ್ನ ಪಾದಗಳನ್ನ ಸ್ಥಿರಮಾಡಿದ.
3 ಆಮೇಲೆ ಆತನು ನನ್ನ ಬಾಯಿಗೆ ಒಂದು ಹೊಸ ಹಾಡನ್ನ,+
ನಮ್ಮ ದೇವರನ್ನ ಹೊಗಳೋ ಹಾಡನ್ನ ಹಾಕಿದ.
ಇದನ್ನ ನೋಡಿ ಎಲ್ರೂ ಆಶ್ಚರ್ಯಪಡ್ತಾರೆ,
ಯೆಹೋವನಲ್ಲಿ ಭರವಸೆ ಇಡ್ತಾರೆ.
4 ಯೆಹೋವನ ಮೇಲೆ ಭರವಸೆ ಇಡೋ ವ್ಯಕ್ತಿ ಖುಷಿಯಾಗಿ ಇರ್ತಾನೆ,
ಪ್ರತಿಭಟಿಸೋ ಜನ್ರ ಹಿಂದೆ, ತಪ್ಪು ದಾರಿಯಲ್ಲಿ ನಡೆಯೋರ* ಹಿಂದೆ ಅವನು ಹೋಗಲ್ಲ.
ನೀನು ಸರ್ವಾಂಗಹೋಮ ಬಲಿಯನ್ನಾಗಲಿ ಪಾಪಪರಿಹಾರಕ ಬಲಿಯನ್ನಾಗಲಿ ಕೇಳಲಿಲ್ಲ.+
7 ಆಮೇಲೆ ನಾನು ಹೀಗೆ ಹೇಳಿದೆ “ನೋಡು, ನಾನು ಬಂದಿದ್ದೀನಿ.
9 ಮಹಾ ಸಭೆಯಲ್ಲಿ ನಾನು ನಿನ್ನ ನೀತಿಯ ಸಿಹಿಸುದ್ದಿಯನ್ನ ಹೇಳ್ತೀನಿ.+
ನೋಡು! ಇದ್ರ ಬಗ್ಗೆ ಹೇಳದ ಹಾಗೆ ನಾನು ನನ್ನ ತುಟಿಗಳನ್ನ ಕಚ್ಚಿಕೊಂಡಿರಲ್ಲ,+
ಯೆಹೋವನೇ, ಇದ್ರ ಬಗ್ಗೆ ನಿನಗೆ ಚೆನ್ನಾಗಿ ಗೊತ್ತು.
10 ನಾನು ನಿನ್ನ ನೀತಿಯನ್ನ ನನ್ನ ಹೃದಯದಲ್ಲಿ ಮುಚ್ಚಿಡಲ್ಲ.
ನಿನ್ನ ನಂಬಿಗಸ್ತಿಕೆಯನ್ನ, ರಕ್ಷಣೆಯನ್ನ ಎಲ್ರಿಗೂ ಹೇಳ್ತೀನಿ.
ಮಹಾ ಸಭೆಯಲ್ಲಿ ನಿನ್ನ ಶಾಶ್ವತ ಪ್ರೀತಿಯನ್ನ, ನಿನ್ನ ಸತ್ಯವನ್ನ ಬಚ್ಚಿಡಲ್ಲ.”+
11 ಯೆಹೋವನೇ, ನನಗೆ ಕರುಣೆಯನ್ನ ತೋರಿಸದೆ ಇರಬೇಡ.
ನಿನ್ನ ಶಾಶ್ವತ ಪ್ರೀತಿ ಮತ್ತು ನಿನ್ನ ಸತ್ಯ ಯಾವಾಗ್ಲೂ ನನ್ನನ್ನ ಕಾಪಾಡಲಿ.+
12 ನನ್ನನ್ನ ಸುತ್ಕೊಂಡಿರೋ ಕಷ್ಟಗಳಿಗೆ ಲೆಕ್ಕಾನೇ ಇಲ್ಲ.+
ಎಷ್ಟು ತಪ್ಪುಗಳನ್ನ ಮಾಡಿದ್ದೀನಿ ಅಂದ್ರೆ ನಾನು ಎಲ್ಲಿ ಹೋಗಬೇಕು ಅಂತಾನೇ ಗೊತ್ತಾಗ್ತಿಲ್ಲ,+
ಅವು ನನ್ನ ಕೂದಲಿಗಿಂತ ಜಾಸ್ತಿ ಇವೆ,
ನಾನು ಧೈರ್ಯ ಕಳ್ಕೊಂಡಿದ್ದೀನಿ.
13 ಯೆಹೋವನೇ, ನನಗೆ ದಯೆ ತೋರಿಸು, ನನ್ನನ್ನ ಕಾಪಾಡು.+
ಯೆಹೋವನೇ, ಬೇಗ ಬಂದು ನನಗೆ ಸಹಾಯಮಾಡು.+
14 ನನ್ನ ಪ್ರಾಣ ತೆಗೀಬೇಕು ಅಂತ ಇರೋ ಎಲ್ರಿಗೂ
ನಾಚಿಕೆ, ಅವಮಾನ ಆಗಲಿ.
ನನಗೆ ಕಷ್ಟ ಬಂದಾಗ ಖುಷಿಪಡೋರು
ಅವಮಾನದಿಂದ ವಾಪಸ್ ಹೋಗ್ಲಿ.
15 ಯಾರು ನನ್ನನ್ನ ನೋಡಿ “ನಿಂಗೆ ಹಂಗೆ ಆಗಬೇಕು!” ಅಂತಾರೋ,
ಅವರಿಗಾಗೋ ಅವಮಾನದಿಂದ ಅವ್ರೇ ಭಯಪಡಲಿ.
ನಿನ್ನ ರಕ್ಷಣೆಯ ಕಾರ್ಯಗಳನ್ನ ಪ್ರೀತಿಸೋರು,
“ಯೆಹೋವನಿಗೆ ಗೌರವ ಸಿಗಲಿ”+ ಅಂತ ಯಾವಾಗ್ಲೂ ಹೇಳಲಿ.
17 ಯೆಹೋವ ನನ್ನ ಕಡೆ ಗಮನ ಕೊಡಲಿ,
ಯಾಕಂದ್ರೆ ನಾನು ನಿಸ್ಸಹಾಯಕ, ಬಡವ.