ಥೆಸಲೋನಿಕದವರಿಗೆ ಬರೆದ ಮೊದಲನೇ ಪತ್ರ
3 ನಮಗೆ ನಿಮ್ಮನ್ನ ನೋಡ್ದೆ ಇರೋಕೇ ಆಗಲಿಲ್ಲ. ಹಾಗಾಗಿ ನಾವು ಮಾತ್ರ ಅಥೆನ್ಸಲ್ಲೇ+ ಇರೋದು ಒಳ್ಳೇದಂತ ನೆನಸಿ, 2 ನಮ್ಮ ಸಹೋದರ ತಿಮೊತಿನ+ ನಿಮ್ಮ ಹತ್ರ ಕಳಿಸಿದ್ವಿ. ಅವನು ಕ್ರಿಸ್ತನ ಬಗ್ಗೆ ಸಿಹಿಸುದ್ದಿ ಸಾರೋ ದೇವರ ಸೇವಕ.* ನಿಮ್ಮ ನಂಬಿಕೆಯನ್ನ ಕಟ್ಟಿ ನಿಮ್ಮನ್ನ ಸಂತೈಸೋಕೆ ಅವನನ್ನ ಕಳಿಸಿದ್ವಿ. 3 ಈಗಿರೋ ಕಷ್ಟಗಳಿಂದ ಯಾರ ನಂಬಿಕೆನೂ ಕಮ್ಮಿ ಆಗಬಾರದು* ಅನ್ನೋದೇ ನಮ್ಮ ಆಸೆ. ಅಂಥ ಕಷ್ಟಗಳು ನಮಗೆ ತಪ್ಪಿದ್ದಲ್ಲ* ಅಂತ ನಿಮಗೆ ಚೆನ್ನಾಗಿ ಗೊತ್ತಲ್ವಾ.+ 4 ಮುಂದೆ ನಮಗೆ ಕಷ್ಟಗಳು ಬಂದೇ ಬರುತ್ತೆ ಅಂತ ನಾವು ನಿಮ್ಮ ಜೊತೆ ಇದ್ದಾಗ್ಲೇ ಹೇಳ್ತಿದ್ವಲ್ವಾ. ಈಗ ಅದೇ ತರ ಆಯ್ತು. ಇದೂ ನಿಮಗೆ ಗೊತ್ತಿದೆ.+ 5 ಸೈತಾನ+ ನಿಮ್ಮನ್ನೆಲ್ಲಿ ತನ್ನ ಕಡೆ ಸೆಳೆದಿದ್ದಾನೋ, ನಾವು ಪಟ್ಟ ಪ್ರಯತ್ನ ಎಲ್ಲಾ ನೀರುಪಾಲಾಗಿ ಹೋಯ್ತಾ ಅಂತ ನಾನು ಹೆದರಿದೆ. ನಿಮ್ಮನ್ನ ನೋಡ್ದೆ ನನ್ನಿಂದ ಇರೋಕೇ ಆಗಲಿಲ್ಲ. ಹಾಗಾಗಿ ನಿಮ್ಮ ನಂಬಿಗಸ್ತಿಕೆ ಬಗ್ಗೆ ತಿಳ್ಕೊಳ್ಳೋಕೆ+ ತಿಮೊತಿಯನ್ನ ನಿಮ್ಮ ಹತ್ರ ಕಳಿಸಿದೆ.
6 ಅವನು ಈಗಷ್ಟೇ ನಮ್ಮ ಹತ್ರ ಬಂದಿದ್ದಾನೆ.+ ನಿಮಗಿರೋ ನಂಬಿಕೆ ಪ್ರೀತಿ ಬಗ್ಗೆ ಒಳ್ಳೇ ಸುದ್ದಿ ತಂದಿದ್ದಾನೆ. ನೀವು ಯಾವಾಗ್ಲೂ ನಮ್ಮನ್ನ ತುಂಬ ನೆನಪಿಸ್ಕೊಳ್ತೀರ, ನಾವು ನಿಮ್ಮನ್ನ ನೋಡೋಕೆ ಆಸೆಯಿಂದ ಕಾಯ್ತಾ ಇರೋ ಹಾಗೆ ನೀವೂ ನಮ್ಮನ್ನ ನೋಡೋಕೆ ಕಾಯ್ತಾ ಇದ್ದೀರ ಅಂತ ಹೇಳಿದ. 7 ಹಾಗಾಗಿ ಸಹೋದರರೇ, ನಾವು ತುಂಬ ಕಷ್ಟಪರೀಕ್ಷೆ,* ವೇದನೆ ಅನುಭವಿಸ್ತಾ ಇದ್ರೂ ನಿಮ್ಮ ಬಗ್ಗೆ, ನಿಮ್ಮ ನಂಬಿಗಸ್ತಿಕೆ ಬಗ್ಗೆ ಕೇಳಿ ನಮಗೆ ತುಂಬ ನೆಮ್ಮದಿ ಸಿಕ್ಕಿದೆ.+ 8 ನೀವು ಒಡೆಯನಿಗೆ ನಂಬಿಗಸ್ತರಾಗಿ ಇರೋದ್ರಿಂದ ನಮಗೆ ಮತ್ತೆ ಜೀವ ಬಂದ ಹಾಗಾಗಿದೆ.* 9 ಹೇಳೋಕೆ ಆಗದಷ್ಟು ಸಂತೋಷ ನಮಗೆ ದೇವರ ಮುಂದೆ ನಿಮ್ಮಿಂದ ಸಿಕ್ಕಿದೆ. ಅದಕ್ಕಾಗಿ ನಾವು ಆತನಿಗೆ ತುಂಬ ಧನ್ಯವಾದ ಹೇಳ್ತೀವಿ. 10 ನಿಮ್ಮನ್ನ ನೋಡೋಕೆ, ನಿಮ್ಮ ನಂಬಿಕೆ ಬಲಪಡಿಸೋಕೆ* ಬೇಕಾದದ್ದನ್ನ ಮಾಡೋಕೆ ನಾವು ಹಗಲೂರಾತ್ರಿ ಶ್ರದ್ಧೆಯಿಂದ ಅಂಗಲಾಚಿ ಬೇಡ್ತಿದ್ದೀವಿ.+
11 ನಾವು ನಿಮ್ಮ ಹತ್ರ ಬರೋಕೆ ನಮ್ಮ ತಂದೆಯಾದ ದೇವರು ಮತ್ತು ನಮ್ಮ ಪ್ರಭು ಯೇಸು ಹೇಗಾದ್ರೂ ದಾರಿ ಮಾಡ್ಲಿ. 12 ನಾವು ನಿಮ್ಮನ್ನ ಪ್ರೀತಿಸೋ ಹಾಗೆ ನೀವೂ ಒಬ್ರು ಇನ್ನೊಬ್ರನ್ನ, ಎಲ್ರನ್ನ ಪ್ರೀತಿಸಬೇಕು, ಆ ಪ್ರೀತಿ ಜಾಸ್ತಿ ಆಗಬೇಕು,+ ಆ ಪ್ರೀತಿ ಹೃದಯದಲ್ಲಿ ತುಂಬಿರಬೇಕು. ಇದಕ್ಕೆ ಒಡೆಯ ನಿಮಗೆ ಸಹಾಯ ಮಾಡ್ಲಿ. 13 ನಮ್ಮ ಪ್ರಭು ಯೇಸು ತನ್ನ ಎಲ್ಲ ಪವಿತ್ರ ಜನ್ರ ಜೊತೆ ಬರುವಾಗ+ ನಮ್ಮ ತಂದೆಯಾಗಿರೋ ದೇವರ ಮುಂದೆ ನೀವು ಪವಿತ್ರರೂ ನಿರ್ದೋಷಿಗಳೂ ಆಗಿರೋ ಹಾಗೆ ನಿಮ್ಮ ಹೃದಯ ಗಟ್ಟಿಮಾಡ್ಲಿ.+