ಕೀರ್ತನೆ
ದಾವೀದನ ಮಿಕ್ತಾಮ್.*
16 ದೇವರೇ, ನಿನ್ನಲ್ಲಿ ನಾನು ಆಶ್ರಯ ಪಡೆದಿದ್ದೀನಿ. ನನ್ನನ್ನ ಕಾಪಾಡು.+
2 ಯೆಹೋವನಿಗೆ ನಾನು ಹೀಗೆ ಹೇಳಿದೆ “ಯೆಹೋವನೇ ಎಲ್ಲ ಒಳ್ಳೇ ವಿಷ್ಯಗಳು ನಿನ್ನಿಂದಾನೇ ಬರುತ್ತೆ.
4 ಬೇರೆ ದೇವರುಗಳ ಹಿಂದೆ ಹೋಗೋರು ತಮ್ಮ ದುಃಖನ ಜಾಸ್ತಿ ಮಾಡ್ಕೊಳ್ತಾರೆ.+
ನಾನು ಯಾವತ್ತೂ ಆ ದೇವರುಗಳಿಗೆ ರಕ್ತವನ್ನ ಪಾನ ಅರ್ಪಣೆಯಾಗಿ ಸಲ್ಲಿಸಲ್ಲ,
ನನ್ನ ಬಾಯಲ್ಲಿ ಅವುಗಳ ಹೆಸ್ರೂ ಬರಲ್ಲ.+
ನನ್ನ ಆಸ್ತಿಯನ್ನ ಕಾದುಕಾಪಾಡ್ತಾನೆ.
6 ನನಗೆ ಆಸ್ತಿಯಾಗಿ ಒಳ್ಳೇ ಜಾಗಗಳು ಸಿಕ್ಕಿವೆ.
ನನ್ನ ಆಸ್ತಿಯಲ್ಲಿ ನನಗೆ ನಿಜವಾಗ್ಲೂ ತೃಪ್ತಿ ಇದೆ.+
7 ನನಗೆ ಸಲಹೆ ಕೊಟ್ಟ ಯೆಹೋವನನ್ನ ನಾನು ಹೊಗಳ್ತೀನಿ.+
ರಾತ್ರಿಯಲ್ಲೂ ನನ್ನ ಮನದಾಳದ ಭಾವನೆಗಳು* ನನ್ನನ್ನ ತಿದ್ದುತ್ತವೆ.+
8 ಯಾವಾಗ್ಲೂ ಯೆಹೋವನನ್ನ ನನ್ನ ಮುಂದೆನೇ ಇಟ್ಕೊಂಡಿರ್ತಿನಿ.+
ಆತನು ನನ್ನ ಬಲಗಡೆನೇ ಇರೋದ್ರಿಂದ ನಾನು ಯಾವತ್ತೂ ಅಲುಗಾಡಲ್ಲ.*+
9 ಹಾಗಾಗಿ ನನ್ನ ಹೃದಯ ಖುಷಿಪಡುತ್ತೆ, ರೋಮ ರೋಮದಲ್ಲೂ ಸಂತೋಷ ಹರಿದಾಡುತ್ತೆ.
ನನ್ನ ಜೀವ* ಸುರಕ್ಷಿತವಾಗಿರುತ್ತೆ.
10 ಯಾಕಂದ್ರೆ ನೀನು ನನ್ನನ್ನ ಸಮಾಧಿಯಲ್ಲೇ* ಬಿಟ್ಟುಬಿಡಲ್ಲ.+
ನಿನ್ನ ನಿಷ್ಠಾವಂತ ಭಕ್ತನನ್ನ ಕೊಳೆತು ಹೋಗೋಕೆ* ಬಿಡಲ್ಲ.+
11 ನೀನು ನನಗೆ ಜೀವನದ ದಾರಿಯನ್ನ ತೋರಿಸ್ಕೊಡ್ತೀಯ.+
ನೀನು ಇರೋ ಕಡೆ* ತುಂಬ ಖುಷಿ ಇರುತ್ತೆ.+
ನಿನ್ನ ಬಲಗಡೆ ಯಾವಾಗ್ಲೂ ಸಂತೋಷ ಇರುತ್ತೆ.