ಯೆಶಾಯ
55 ಬಾಯಾರಿದವರೇ,+ ನೀವೆಲ್ಲ ಬಂದು ನೀರು ಕುಡಿರಿ!+
ಹಣ ಇಲ್ಲದವರೇ ನೀವೂ ಬನ್ನಿ! ನೀವೂ ತಗೊಂಡು ತಿನ್ನಿ!
ಹೌದು, ಬಂದು ಹಣ ಕೊಡದೆ ಉಚಿತವಾಗಿ+ ದ್ರಾಕ್ಷಾಮದ್ಯವನ್ನೂ ಹಾಲನ್ನೂ+ ತಗೊಳ್ಳಿ.
2 ಯಾವುದು ಆಹಾರ ಅಲ್ವೋ ಅದನ್ನ ನೀವು ಯಾಕೆ ಹಣ ಕೊಟ್ಟು ಕೊಂಡ್ಕೊಳ್ತೀರ?
ಯಾವ ವಿಷ್ಯಗಳು ಸಂತೃಪ್ತಿ ಕೊಡಲ್ವೋ ಅವುಗಳಿಗಾಗಿ ಯಾಕೆ ನಿಮ್ಮ ಸಂಬಳವನ್ನ ಖರ್ಚು ಮಾಡ್ತೀರ?
ನಾನು ಹೇಳೋದನ್ನ ಶ್ರದ್ಧೆಯಿಂದ ಕೇಳಿಸ್ಕೊಳ್ಳಿ, ಒಳ್ಳೇ ಆಹಾರ ತಿನ್ನಿ,+
ಆಗ ನೀವು ನಿಜವಾದ ಪೌಷ್ಠಿಕ ಆಹಾರ ತಿಂದು ಅತ್ಯಾನಂದ ಪಡ್ತೀರ.+
3 ಕಿವಿಗೊಟ್ಟು ಕೇಳಿಸ್ಕೊಳ್ಳಿ, ನನ್ನ ಹತ್ರ ಬನ್ನಿ.+
ನಾನು ಹೇಳೋದನ್ನ ಕೇಳಿದ್ರೆ ನೀವು ಜೀವಂತವಾಗಿ ಇರ್ತಿರ,
ದಾವೀದನ ಕಡೆ ನನಗೆ ಶಾಶ್ವತ ಪ್ರೀತಿ ಇದೆ ಮತ್ತು ಅದು ನಿಜ ಅಂತ ತೋರಿಸೋಕೆ+
ನಾನು ಖಂಡಿತ ನಿಮ್ಮ ಜೊತೆ ಶಾಶ್ವತವಾದ ಒಂದು ಒಪ್ಪಂದ ಮಾಡ್ಕೊಳ್ತೀನಿ.+
5 ಇಗೋ! ನಿನಗೆ ಗೊತ್ತಿಲ್ಲದ ಒಂದು ಜನಾಂಗವನ್ನ ನೀನು ಕರಿತೀಯ,
ನಿನ್ನನ್ನ ಅರಿಯದ ಜನಾಂಗದವರು ನಿನ್ನ ಹತ್ರ ಓಡೋಡಿ ಬರ್ತಾರೆ.
ನಿನ್ನ ದೇವರೂ ಇಸ್ರಾಯೇಲ್ಯರ ಪವಿತ್ರ ದೇವರೂ ಆಗಿರೋ ಯೆಹೋವನಿಂದಾಗಿ ಅವರು ನಿನ್ನ ಹತ್ರ ಬರ್ತಾರೆ.+
ಯಾಕಂದ್ರೆ ಆತನು ನಿನ್ನನ್ನ ಘನತೆಗೇರಿಸ್ತಾನೆ.+
6 ಯೆಹೋವ ಸಿಗೋ ಸಮ್ಯದಲ್ಲೇ ಆತನಿಗಾಗಿ ಹುಡುಕಿ.+
ಆತನು ಹತ್ರ ಇರೋವಾಗಲೇ ಆತನಿಗೆ ಮೊರೆಯಿಡಿ.+
7 ಕೆಟ್ಟವನು ತನ್ನ ಮಾರ್ಗವನ್ನ,
ಕೆಡುಕ ತನ್ನ ಆಲೋಚನೆಯನ್ನ ಬಿಟ್ಟುಬಿಡಲಿ,+
ಅವನು ಯೆಹೋವನ ಹತ್ರ ವಾಪಸ್ ಬರಲಿ. ಯಾಕಂದ್ರೆ ಆತನು ಅವನಿಗೆ ಕರುಣೆ ತೋರಿಸ್ತಾನೆ,+
ಅವನು ನಮ್ಮ ದೇವರ ಹತ್ರ ತಿರುಗಿ ಬರಲಿ. ಯಾಕಂದ್ರೆ ಆತನು ಉದಾರವಾಗಿ* ಕ್ಷಮಿಸ್ತಾನೆ.+
8 ಯೆಹೋವ ಹೀಗೆ ಹೇಳ್ತಿದ್ದಾನೆ “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳ ತರ ಇಲ್ಲ,+
ನನ್ನ ಮಾರ್ಗಗಳು ನಿಮ್ಮ ಮಾರ್ಗಗಳ ತರ ಇಲ್ಲ.
9 ಭೂಮಿಗಿಂತ ಆಕಾಶ ಎಷ್ಟೋ ಎತ್ರದಲ್ಲಿರೋ ತರ,
ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳು ಎಷ್ಟೋ ಉನ್ನತವಾಗಿವೆ,
ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳು ಎಷ್ಟೋ ಶ್ರೇಷ್ಠವಾಗಿವೆ.+
10 ಮಳೆ ಮತ್ತು ಮಂಜು ಆಕಾಶದಿಂದ ಬಿದ್ದು
ಭೂಮಿಯನ್ನ ತೋಯಿಸಿ ಬೀಜಗಳನ್ನ ಮೊಳಕೆಯೊಡೆಸಿ ಅವು ಫಲ ಕೊಡೋ ತರ ಮಾಡಿ,
ಬಿತ್ತುವವನಿಗೆ ಬೀಜವನ್ನೂ ತಿನ್ನುವವನಿಗೆ ಆಹಾರವನ್ನೂ ಕೊಡದೆ ಹೇಗೆ ಸುಮ್ಮನೆ ವಾಪಸ್ ಹೋಗಲ್ವೋ
ಅದು ನಿಜವಾಗದೆ ನನ್ನ ಹತ್ರ ವಾಪಸ್ ಬರಲ್ಲ.+
ಅದು ನನ್ನ ಇಷ್ಟವನ್ನೆಲ್ಲ ಖಂಡಿತ ನೆರವೇರಿಸುತ್ತೆ,+
ನಾನು ಯಾವ ಕೆಲಸಕ್ಕಾಗಿ ಅದನ್ನ ಕಳಿಸ್ತೀನೋ ಆ ಕೆಲಸವನ್ನ ಸಫಲಗೊಳಿಸಿನೇ ಅದು ವಾಪಸ್ ಬರುತ್ತೆ.
ನಿಮ್ಮ ಮುಂದೆ ಪರ್ವತಗಳು, ಬೆಟ್ಟಗಳು ಉಲ್ಲಾಸಿಸ್ತವೆ, ಹರ್ಷದಿಂದ ಕೂಗ್ತವೆ.+
ಹೊಲಗಳಲ್ಲಿರೋ ಎಲ್ಲ ಮರಗಳು ಚಪ್ಪಾಳೆ ಹೊಡೆಯುತ್ತೆ.+
ಅದು ಯೆಹೋವನಿಗೆ ಕೀರ್ತಿ ತರುತ್ತೆ,+
ಯಾವತ್ತಿಗೂ ಅಳಿಯದ ಶಾಶ್ವತ ಗುರುತಾಗಿ ಉಳಿಯುತ್ತೆ.”