ಯೋನ
2 ಆಮೇಲೆ ಯೋನ ಮೀನಿನ ಹೊಟ್ಟೆ ಒಳಗಿಂದ ತನ್ನ ದೇವರಾದ ಯೆಹೋವನಿಗೆ ಪ್ರಾರ್ಥನೆ ಮಾಡ್ತಾ+ 2 ಹೀಗಂದ
“ನಾನು ಸಂಕಷ್ಟದಲ್ಲಿದ್ದಾಗ ಯೆಹೋವನಿಗೆ ಪ್ರಾರ್ಥನೆ ಮಾಡ್ದೆ, ಆತನು ನನಗೆ ಉತ್ರ ಕೊಟ್ಟನು.+
3 ನೀನು ನನ್ನನ್ನ ಆಳಕ್ಕೆ, ವಿಶಾಲ ಸಮುದ್ರದ ತಳಕ್ಕೆ ಬಿಸಾಡಿದಾಗ
ಪ್ರವಾಹಗಳು ನನ್ನನ್ನ ಸುತ್ಕೊಂಡ್ವು.+
ನನ್ನ ಮೇಲೆ ದೊಡ್ಡದೊಡ್ಡ ಅಲೆಗಳೂ ತೆರೆಗಳೂ ಹೊಯ್ದಾಡ್ತಿದ್ವು.+
4 ನಾನಾಗ ‘ನೀನು ನನ್ನನ್ನ ನಿನ್ನ ದೃಷ್ಟಿಗೆ ಮರೆಯಾಗುವಷ್ಟು ದೂರ ಕಳಿಸಿದ್ಯಲ್ಲಾ,
ಇನ್ಮುಂದೆ ನಾನು ನಿನ್ನ ಪವಿತ್ರ ಆಲಯ ನೋಡೋಕೆ ಆಗಲ್ವಲ್ಲಾ’ ಅಂದೆ.
ಸಮುದ್ರದ ಕಳೆಗಳು ತಲೆಗೆ ಸುತ್ಕೊಂಡಿದ್ವು.
6 ಬೆಟ್ಟಗಳ ಬುಡದ ತನಕ ನಾನು ಮುಳುಗಿಹೋದೆ.
ಭೂಮಿಯ ಬಾಗಿಲು ನನ್ನನ್ನ ಶಾಶ್ವತವಾಗಿ ಮುಚ್ಚಿಬಿಡಲಿತ್ತು.
ಆದ್ರೆ ನನ್ನ ದೇವರಾದ ಯೆಹೋವನೇ, ನೀನು ನನ್ನನ್ನ ಸಮಾಧಿಯ ತಳದಿಂದ ಜೀವಂತವಾಗಿ ಮೇಲೆತ್ತಿದೆ.+
7 ನನ್ನ ಉಸಿರು ನಿಂತುಹೋಗ್ತಿರುವಾಗ ನಾನು ಯೆಹೋವನನ್ನೇ ನೆನಪಿಸ್ಕೊಂಡೆ.+
ಆಗ ನನ್ನ ಪ್ರಾರ್ಥನೆ ನಿನಗೆ, ನಿನ್ನ ಪವಿತ್ರಾಲಯಕ್ಕೆ ಮುಟ್ಟಿತು.+
8 ವ್ಯರ್ಥವಾದ ಮೂರ್ತಿಗಳನ್ನ ಪೂಜಿಸುವವರು ಶಾಶ್ವತ ಪ್ರೀತಿ ತೋರಿಸೋ ನಿನ್ನನ್ನ* ಬಿಟ್ಟುಬಿಟ್ಟಿದ್ದಾರೆ.
9 ಆದ್ರೂ ನಾನು ಧನ್ಯವಾದ ಸಲ್ಲಿಸ್ತಾ ನಿನಗೆ ಬಲಿ ಅರ್ಪಿಸ್ತೀನಿ.
ನನ್ನ ಹರಕೆ ತೀರಿಸ್ತೀನಿ.+
ರಕ್ಷಣೆ ಯೆಹೋವನಿಂದಾನೇ.”+
10 ಆಮೇಲೆ ಯೆಹೋವ ಆ ಮೀನಿಗೆ ಆಜ್ಞೆ ಕೊಟ್ಟಾಗ ಅದು ಯೋನನನ್ನ ತೀರದಲ್ಲಿ ಕಕ್ಕಿಬಿಡ್ತು.