ಯೆಶಾಯ
57 ನೀತಿವಂತ ನಾಶವಾಗಿ ಹೋಗಿದ್ದಾನೆ,
ಆದ್ರೆ ಯಾರೂ ಅದ್ರ ಬಗ್ಗೆ ಯೋಚಿಸ್ತಿಲ್ಲ.
ನಿಷ್ಠಾವಂತ ಜನ್ರನ್ನ ಕಸಿದುಕೊಳ್ಳಲಾಗಿದೆ,*+
ಆದ್ರೆ ನೀತಿವಂತ ಸತ್ತು ವಿಪತ್ತಿಂದ ತಪ್ಪಿಸ್ಕೊಂಡಿದ್ದಾನೆ ಅಂತ
ಯಾರೂ ಅರ್ಥ ಮಾಡ್ಕೊಳ್ತಿಲ್ಲ.
2 ಅವನಿಗೆ ಈಗ ನೆಮ್ಮದಿ ಸಿಕ್ಕಿದೆ.
ಅಡ್ಡದಾರಿ ಹಿಡಿಯದ ಜನ್ರೆಲ್ಲ ತಮ್ಮ ಮಂಚದ* ಮೇಲೆ ವಿಶ್ರಾಂತಿ ಪಡ್ಕೊಳ್ತಿದ್ದಾರೆ.
4 ನೀವು ಯಾರನ್ನ ಗೇಲಿ ಮಾಡ್ತಿದ್ದೀರ?
ಯಾರ ವಿರುದ್ಧ ನೀವು ನಿಮ್ಮ ಬಾಯನ್ನ ದೊಡ್ಡದಾಗಿ ತೆರೆದು ನಾಲಿಗೆ ಹೊರಗೆ ಹಾಕಿ ಹಂಗಿಸ್ತಿದ್ದೀರ?
ನೀವು ಪಾಪಿಗಳಿಗೆ, ವಂಚಕರಿಗೆ
ಹುಟ್ಟಿದ ಮಕ್ಕಳಲ್ವಾ?+
ಸೊಂಪಾಗಿ ಬೆಳೆದಿರೋ ಎಲ್ಲ ಮರಗಳ+ ಕೆಳಗೆ ಕಾಮದ ಆಸೆಯಿಂದ ರೊಚ್ಚಿಗೆ ಏಳ್ತಿರುವವರು ನೀವಲ್ವಾ?
ಕಣಿವೆಗಳಲ್ಲಿ, ಕಡಿದಾದ ಬಂಡೆಗಳ ಸಂದುಗಳಲ್ಲಿ
ಮಕ್ಕಳನ್ನ ಬಲಿ ಕೊಡ್ತಿರುವವರು ನೀವಲ್ವಾ?+
6 ನುಣುಪಾದ ಕಲ್ಲುಗಳಿಂದ ಮಾಡಿದ ಮೂರ್ತಿಗಳನ್ನ ನೀನು* ಆರಿಸ್ಕೊಂಡೆ ಅಲ್ವಾ?+
ಹೌದು, ಅದೇ ನಿನ್ನ ಪಾಲು.
ನೀನು ನಿನ್ನ ಪಾನ ಅರ್ಪಣೆಯನ್ನ, ಕಾಣಿಕೆಗಳನ್ನ ಅವುಗಳಿಗೂ ಅರ್ಪಿಸ್ತೀಯ.+
ಅವುಗಳಿಂದಾಗಿ ನಾನು ಸಂತೃಪ್ತನಾಗಬೇಕಾ?*
7 ಎತ್ರವಾದ, ಶ್ರೇಷ್ಠವಾದ ಬೆಟ್ಟದ ಮೇಲೆ ನೀನು ನಿನ್ನ ಮಂಚವನ್ನ ಹಾಕೊಂಡೆ,+
ಬಲಿಗಳನ್ನ ಅರ್ಪಿಸೋಕೆ ಅಲ್ಲಿಗೆ ಹತ್ತಿಹೋದೆ.+
8 ಬಾಗಿಲಿನ ಹಿಂದೆ, ಮನೆ ಬಾಗಿಲಿನ ಚೌಕಟ್ಟಿನ ಹಿಂದೆ ನೀನು ನಿನ್ನ ಸ್ಮರಣೆಯ ಗುರುತನ್ನ ನಿಲ್ಲಿಸಿದೆ.
ನೀನು ನನ್ನನ್ನ ಬಿಟ್ಟುಹೋದೆ, ನಿನ್ನ ಬಟ್ಟೆಗಳನ್ನ ಕಳಚಿಹಾಕಿದೆ,
ನೀನು ಮೇಲೆ ಹೋಗಿ ನಿನ್ನ ಮಂಚವನ್ನ ಅಗಲ ಮಾಡ್ಕೊಂಡೆ.
ಅವ್ರ ಜೊತೆ ಒಪ್ಪಂದ ಮಾಡ್ಕೊಂಡೆ.
ಸಮಾಧಿಗೆ* ಇಳಿದುಹೋಗೋಕೆ
ನೀನು ನಿನ್ನ ಪ್ರತಿನಿಧಿಗಳನ್ನ ದೂರ ಕಳಿಸಿದೆ.
10 ನಿನ್ನ ಅನೇಕ ವಿಧಾನಗಳನ್ನ ಅನುಸರಿಸೋದ್ರಲ್ಲೇ ನೀನು ಕಷ್ಟಪಟ್ಟೆ,
ಆದ್ರೆ ‘ಇದ್ರಿಂದ ಏನೂ ಉಪಯೋಗವಿಲ್ಲ!’ ಅಂತ ನೀನು ಅಂದ್ಕೊಳ್ಳಲಿಲ್ಲ.
ನೀನು ಹೊಸ ಬಲ ಪಡ್ಕೊಂಡೆ.
ಹಾಗಾಗಿ ನೀನು ಸೋತು ಹೋಗಲಿಲ್ಲ.*
ನೀನು ನನ್ನನ್ನ ನೆನಪಿಸ್ಕೊಳ್ಳಲಿಲ್ಲ.+
ಯಾವುದನ್ನೂ ಮನಸ್ಸಿಗೆ ತಗೊಳ್ಳಲಿಲ್ಲ.+
ನಾನು ಮೌನವಾಗಿದ್ದು ನೀನು ಮಾಡಿದ್ದನ್ನೆಲ್ಲ ಮುಚ್ಚಿಟ್ಟೆ.+
ಹಾಗಾಗಿ ನೀನು ನನಗೆ ಭಯಪಡಲಿಲ್ಲ.
ಗಾಳಿ ಅವುಗಳನ್ನ ಹೊಡ್ಕೊಂಡು ಹೋಗುತ್ತೆ,
ಉಫ್ ಅಂತ ಊದಿದ್ರೆ ಸಾಕು ಅವೆಲ್ಲ ಹಾರಿಹೋಗುತ್ತೆ,
ಆದ್ರೆ ನನ್ನನ್ನ ಆಶ್ರಯಿಸುವವನು ದೇಶವನ್ನ ಸೊತ್ತಾಗಿ ಹೊಂದ್ತಾನೆ,
ನನ್ನ ಪವಿತ್ರ ಬೆಟ್ಟವನ್ನ ಸ್ವಾಧೀನ ಮಾಡ್ಕೊಳ್ತಾನೆ.+
14 ಆಗ ಹೀಗೆ ಹೇಳಲಾಗುತ್ತೆ ‘ದಾರಿ ಮಾಡಿ, ದಾರಿ ಸಿದ್ಧಪಡಿಸಿ!+
ನನ್ನ ಜನ್ರ ದಾರಿಯಲ್ಲಿ ಯಾವುದೇ ಅಡ್ಡಿತಡೆ ಇದ್ರೂ ಅದನ್ನ ತೆಗೆದುಹಾಕಿ.’”
15 ಯಾಕಂದ್ರೆ ಮಹೋನ್ನತನೂ ಶ್ರೇಷ್ಠನೂ
ನಿತ್ಯನಿರಂತರಕ್ಕೂ ಜೀವಿಸುವವನೂ*+ ಪವಿತ್ರನು ಅನ್ನೋ ಹೆಸ್ರಿರೋ ದೇವರೂ+ ಹೀಗಂತಿದ್ದಾನೆ
“ನಾನು ಉನ್ನತವಾದ, ಪವಿತ್ರವಾದ ಸ್ಥಳದಲ್ಲಿ ವಾಸಿಸ್ತೀನಿ,+
ಆದ್ರೆ ಜಜ್ಜಿ ಹೋಗಿರುವವರ ಜೊತೆ, ದೀನಮನಸ್ಸು ಇರುವವ್ರ ಜೊತೆ ವಾಸಿಸ್ತಾ
ದೀನರ ಪ್ರಾಣಗಳು ಮತ್ತೆ ಚೈತನ್ಯ ಪಡ್ಕೊಳ್ಳೋ ತರ ಮಾಡ್ತೀನಿ,
ಜಜ್ಜಿ ಹೋಗಿರುವವ್ರ ಮನಸ್ಸಿಗೆ ನವಚೈತನ್ಯವನ್ನ ತುಂಬ್ತೀನಿ.+
ಯಾಕಂದ್ರೆ ನನ್ನಿಂದಾಗಿ ಜನ ಬಳಲಿಹೋಗ್ತಾರೆ.+
ನಾನು ಸೃಷ್ಟಿಮಾಡಿದ ಉಸಿರಾಡೋ ಪ್ರಾಣಿಗಳು ಬಲಹೀನಗೊಳ್ತವೆ.
17 ಅವನು ಅನ್ಯಾಯದ ಲಾಭಕ್ಕಾಗಿ ದುರಾಸೆಯಿಂದ ಪಾಪ ಮಾಡೋದನ್ನ+ ನೋಡಿ ನನಗೆ ತುಂಬ ಕೋಪ ಬಂತು,
ಹಾಗಾಗಿ ನಾನು ಅವನಿಗೆ ಹೊಡೆದೆ, ನನ್ನ ಮುಖವನ್ನ ಮರೆಮಾಡ್ಕೊಂಡೆ, ನನಗೆ ತುಂಬ ಸಿಟ್ಟು ಬಂದಿತ್ತು.
ಹಾಗಿದ್ರೂ ಅವನು ತನ್ನಿಷ್ಟದ ಹಾಗೆ ನಡಿತಾ ಧರ್ಮಭ್ರಷ್ಟನ ತರ+ ವರ್ತಿಸ್ತಾ ಬಂದ.
19 ಯೆಹೋವ ಹೀಗೆ ಹೇಳ್ತಿದ್ದಾನೆ “ನಾನೇ ತುಟಿಗಳ ಮೇಲೆ ಸ್ತುತಿಸೋ ಮಾತುಗಳನ್ನ ಇಡ್ತಿದ್ದೀನಿ.
ದೂರದಲ್ಲಿ ಇರುವವ್ರಿಗೂ ಹತ್ರದಲ್ಲಿ ಇರುವವ್ರಿಗೂ ಶಾಂತಿಯನ್ನ ನಾನು ಕೊಡ್ತಾ ಇರ್ತಿನಿ.+
ನಾನೇ ಅವನನ್ನ ವಾಸಿಮಾಡ್ತೀನಿ.
20 ಆದ್ರೆ ಕೆಟ್ಟವರು, ಅಲ್ಲೋಲಕಲ್ಲೋಲ ಆಗಿರೋ ಶಾಂತಗೊಳ್ಳದ ಸಮುದ್ರದ ತರ ಇದ್ದಾರೆ,
ಅದ್ರಲ್ಲಿರೋ ನೀರು ಕಡಲಪಾಚಿಯನ್ನೂ ಕೆಸ್ರನ್ನೂ ಹೊರಹಾಕ್ತಾ ಇರುತ್ತೆ.
21 ಕೆಟ್ಟವರಿಗೆ ಮನಶ್ಶಾಂತಿ ಇರಲ್ಲ”+ ಅಂತ ನನ್ನ ದೇವರು ಹೇಳ್ತಿದ್ದಾನೆ.