ಕೀರ್ತನೆ
ದಾವೀದನ ಕೀರ್ತನೆ
138 ನನ್ನ ಪೂರ್ಣಹೃದಯದಿಂದ ನಾನು ನಿನ್ನನ್ನ ಹೊಗಳ್ತೀನಿ.+
ಬೇರೆ ದೇವರುಗಳ ಮುಂದೆ,*
ನಾನು ನಿನ್ನ ಹಾಡಿ ಹೊಗಳ್ತೀನಿ.
2 ನಾನು ನಿನ್ನ ಪವಿತ್ರ ಆಲಯದ* ಕಡೆ ಬಗ್ಗಿ ನಮಸ್ಕರಿಸ್ತೀನಿ,+
ನಿನ್ನ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆಗಾಗಿ,
ನಾನು ನಿನ್ನ ಹೆಸ್ರನ್ನ ಕೊಂಡಾಡ್ತೀನಿ,+
ನೀನು ನಿನ್ನ ಮಾತನ್ನ, ನಿನ್ನ ಹೆಸ್ರನ್ನ ಬೇರೆ ಎಲ್ಲ ವಿಷ್ಯಗಳಿಗಿಂತ ಪ್ರಾಮುಖ್ಯವಾಗಿ ಇಟ್ಟಿದ್ದೀಯ.*
4 ಯೆಹೋವನೇ, ಭೂಮಿಯಲ್ಲಿ ಎಲ್ಲ ರಾಜರು ನಿನ್ನನ್ನ ಹೊಗಳ್ತಾರೆ,+
ಯಾಕಂದ್ರೆ ನೀನು ಕೊಟ್ಟ ಮಾತುಗಳ ಬಗ್ಗೆ ಅವರು ಕೇಳಿಸಿಕೊಂಡ್ರು.
5 ಅವರು ಯೆಹೋವನ ಮಾರ್ಗಗಳ ಬಗ್ಗೆ ಹಾಡ್ತಾರೆ,
ಯಾಕಂದ್ರೆ ಯೆಹೋವನ ಮಹಿಮೆ ಅಪಾರ.+
6 ಯೆಹೋವ ಮಹೋನ್ನತನಾಗಿದ್ರೂ ಆತನ ಗಮನವೆಲ್ಲ ದೀನರ ಮೇಲೆನೇ ಇರುತ್ತೆ,+
ಆದ್ರೆ ಆತನು ಅಹಂಕಾರಿಗಳನ್ನ ದೂರದಲ್ಲೇ ಇಡ್ತಾನೆ.+
7 ನಾನು ಅಪಾಯದಲ್ಲಿದ್ರೂ ನೀನು ನನ್ನ ಪ್ರಾಣನ ಕಾಪಾಡ್ತೀಯ.+
ಕೋಪದಿಂದ ಕೆರಳಿರೋ ನನ್ನ ಶತ್ರುಗಳ ವಿರುದ್ಧ ನೀನು ನಿನ್ನ ಕೈ ಚಾಚ್ತೀಯ,
ನಿನ್ನ ಬಲಗೈ ನನ್ನನ್ನ ಕಾಪಾಡುತ್ತೆ.
8 ಯೆಹೋವ ನನ್ನ ಪರ ನಿಂತು ಎಲ್ಲ ಕೆಲಸ ಮಾಡಿ ಮುಗಿಸ್ತಾನೆ.
ಯೆಹೋವನೇ, ನಿನ್ನ ಪ್ರೀತಿ ಶಾಶ್ವತ.+
ನೀನು ನಿನ್ನ ಕೈಯಾರೆ ಮಾಡಿದ ಸೃಷ್ಟಿಯನ್ನ ತೊರೆದುಬಿಡಬೇಡ.+