ಯೆಶಾಯ
18 ಗಿರ್ರನೆ ತಿರುಗೋ ಕೀಟಗಳ ದೇಶದ ಗತಿಯನ್ನ ಏನು ಹೇಳಲಿ!
ಇಥಿಯೋಪ್ಯದ ನದಿಗಳ ಹತ್ರ ಇರೋ ಪ್ರಾಂತ್ಯದ ಗತಿಯನ್ನ ಏನು ಹೇಳಲಿ!+
2 ಅದು ತನ್ನ ಪ್ರತಿನಿಧಿಗಳನ್ನ ಸಮುದ್ರದ ಮಾರ್ಗವಾಗಿ
ಪಪೈರಸ್ ದೋಣಿಗಳಲ್ಲಿ ನೀರಿನ ಮೂಲಕ ಆ ಕಡೆಗೆ ಕಳಿಸಿತು. ಆಗ ಅವ್ರಿಗೆ ಅದು ಹೀಗೆ ಹೇಳಿತು:
“ಚುರುಕಾಗಿರೋ ಸಂದೇಶವಾಹಕರೇ,
ಎತ್ರವಾಗಿರೋ, ಮೃದು ಚರ್ಮ ಹೊಂದಿರೋ,
ಎಲ್ಲ ಜನಾಂಗಗಳು ಹೆದರೋ,+
ಬಲಿಷ್ಠವಾಗಿರೋ, ಜಯಶಾಲಿಯಾಗಿರೋ ಜನಾಂಗದ ಹತ್ರ ಹೋಗಿ,
ನದಿಗಳು ಹೊಡ್ಕೊಂಡು ಹೋಗಿರೋ ದೇಶಕ್ಕೆ ಹೋಗಿ.”
3 ದೇಶದ ಎಲ್ಲ ನಿವಾಸಿಗಳೇ, ಭೂಮಿಯಲ್ಲಿ ವಾಸಿಸುವವರೇ,
ನೀವು ನೋಡಲಿರೋ ವಿಷ್ಯ ಬೆಟ್ಟಗಳ ಮೇಲೆ ಎತ್ತಿ ನಿಲ್ಲಿಸೋ ಧ್ವಜದ ಹಾಗಿರುತ್ತೆ,*
ನೀವು ಕೇಳಿಸ್ಕೊಳ್ಳಲಿರೋ ಶಬ್ದ ಕೊಂಬನ್ನ ಊದುವಾಗ ಬರೋ ಶಬ್ದದ ತರ ಇರುತ್ತೆ.
4 ಯಾಕಂದ್ರೆ ಯೆಹೋವ ನನಗೆ ಹೀಗೆ ಹೇಳಿದ್ದಾನೆ
“ಸೂರ್ಯನ ಬೆಳಕಿನ ಜೊತೆ ಜಳಜಳಿಸೋ ಬಿಸಿ ತರ,
ಬೇಸಿಗೆ ಕಾಲದ ಕೊಯ್ಲಿನ ಸಮ್ಯದಲ್ಲಿ ಮೋಡದಿಂದ ಬೀಳೋ ಇಬ್ಬನಿ ತರ,
ನಾನು ನನ್ನ ಸ್ಥಳವನ್ನ* ನಿರಾತಂಕವಾಗಿ ನೋಡ್ತಾ ಇರ್ತಿನಿ.
5 ಹೂ ಅರಳುತ್ತೆ, ಅರಳಿದ ಹೂ ಮಾಗಿದ ದ್ರಾಕ್ಷಿಯಾಗುತ್ತೆ,
ಆದ್ರೆ ಅದ್ರ ಕೊಯ್ಲಿನ ಸಮಯಕ್ಕೂ ಮುಂಚೆ
ಕುಡುಗೋಲುಗಳಿಂದ ಚಿಗುರನ್ನ ಕತ್ತರಿಸಲಾಗುತ್ತೆ,
ಬಳ್ಳಿಯ ಕೊಂಬೆಗಳನ್ನ ಕತ್ತರಿಸಿ ಬಿಸಾಡಲಾಗುತ್ತೆ.
6 ಬೆಟ್ಟದ ಹಸಿದಿರೋ ಪಕ್ಷಿಗಳಿಗಾಗಿ,
ಭೂಮಿಯ ಕ್ರೂರ ಪ್ರಾಣಿಗಳಿಗಾಗಿ ಅವುಗಳನ್ನ ಬಿಟ್ಟುಬಿಡಲಾಗುತ್ತೆ.
ಬೆಟ್ಟದ ಪಕ್ಷಿಗಳು ಅವುಗಳನ್ನ ಬೇಸಿಗೆಯಿಡೀ ತಿನ್ನುತ್ತವೆ.
ಭೂಮಿಯ ಕ್ರೂರ ಪ್ರಾಣಿಗಳು ಕೊಯ್ಲಿನ ಕಾಲದಲ್ಲೆಲ್ಲ ಅವುಗಳನ್ನ ತಿಂದು ಹೊಟ್ಟೆ ತುಂಬಿಸ್ಕೊಳ್ತವೆ.