ಕೀರ್ತನೆ
ದಾವೀದನ ಮಧುರ ಗೀತೆ. ನೆಹಿಲೋತಿಗಾಗಿ* ನಿರ್ದೇಶಕನಿಗೆ ಸೂಚನೆ.
5 ಯೆಹೋವನೇ, ನನ್ನ ಮಾತನ್ನ ಕೇಳಿಸ್ಕೊ.+
ನನ್ನ ದುಃಖ ನೋಡು.
2 ಸಹಾಯ ಕೇಳ್ತಾ ಗೋಳಾಡುವಾಗ ನನಗೆ ಗಮನಕೊಡು,
ಯಾಕಂದ್ರೆ ನನ್ನ ರಾಜನೇ, ನನ್ನ ದೇವರೇ ನಾನು ನಿನಗೇ ಪ್ರಾರ್ಥಿಸ್ತೀನಿ.
3 ಯೆಹೋವನೇ, ನೀನು ಮುಂಜಾನೆನೇ ನನ್ನ ಧ್ವನಿ ಕೇಳಿಸ್ಕೊಳ್ತೀಯ,+
ನಾನು ಬೆಳಿಗ್ಗೆನೇ ನನ್ನ ಚಿಂತೆನ ನಿನ್ನ ಹತ್ರ ತೋಡ್ಕೊಂಡು+ ನಿನ್ನ ಉತ್ರಕ್ಕಾಗಿ ಕಾಯ್ತೀನಿ.
4 ಯಾಕಂದ್ರೆ ಕೆಟ್ಟತನದಲ್ಲಿ ಖುಷಿಪಡೋ ದೇವರು ನೀನಲ್ಲ.+
ಕೆಟ್ಟವರು ನಿನ್ನ ಹತ್ರ ಇರಕ್ಕಾಗಲ್ಲ.+
6 ಸುಳ್ಳು ಹೇಳೋರನ್ನ ಸರ್ವನಾಶ ಮಾಡ್ತೀಯ.+
ಹಿಂಸೆ ಕೊಡೋರು* ಮತ್ತು ಮೋಸ ಮಾಡೋರು ಯೆಹೋವನಿಗೆ ಅಸಹ್ಯ.+
7 ನಾನು ನಿನ್ನ ಆಲಯಕ್ಕೆ+ ಬರೋಕೆ ನಿನ್ನ ಶಾಶ್ವತ ಪ್ರೀತಿನೇ+ ಕಾರಣ.
ನಿನ್ನ ಮೇಲಿನ ಭಯಭಕ್ತಿಯಿಂದ ನಿನ್ನ ಪವಿತ್ರ ಆಲಯದ* ಕಡೆ ತಿರುಗಿ ಬಗ್ಗಿ ನಮಸ್ಕರಿಸ್ತೀನಿ.+
8 ಯೆಹೋವನೇ, ನನ್ನ ಸುತ್ತ ಶತ್ರುಗಳು ಇರೋದ್ರಿಂದ ನನ್ನನ್ನ ನಿನ್ನ ನೀತಿಯ ದಾರಿಯಲ್ಲಿ ನಡೆಸು.
ಹಾಗೆ ನಡಿವಾಗ ಎಡವಿ ಬೀಳದ ಹಾಗೆ ನನಗೆ ಸಹಾಯಮಾಡು.+
9 ಅವರ ಯಾವ ಮಾತನ್ನೂ ನಂಬಕ್ಕಾಗಲ್ಲ.
ಅವರ ನಾಲಿಗೆ ಸವಿಯಾದ ಮಾತನ್ನ ಆಡಿದ್ರೂ,
ಅವರ ಮನಸ್ಸಿನ ತುಂಬ ಹೊಟ್ಟೆಕಿಚ್ಚೇ ಇದೆ.
ಅವರ ಬಾಯಿ ತೆರೆದಿರೋ ಸಮಾಧಿ ತರ ಇದೆ.+
10 ಆದ್ರೆ ದೇವರು ಅವರನ್ನ ಅಪರಾಧಿಗಳು ಅಂತ ಖಂಡಿಸ್ತಾನೆ.
ಅವರು ತೋಡಿದ ಗುಂಡಿಯಲ್ಲಿ ಅವರೇ ಬೀಳ್ತಾರೆ.+
ಅವರು ತುಂಬ ಅಪರಾಧಗಳನ್ನ ಮಾಡಿರೋದ್ರಿಂದ ದಯವಿಟ್ಟು ಅವರನ್ನ ಹೊಡೆದೋಡಿಸು.
ಯಾಕಂದ್ರೆ ಅವರು ನಿನ್ನ ವಿರುದ್ಧ ದಂಗೆ ಎದ್ದಿದ್ದಾರೆ.
11 ಆದ್ರೆ ನಿನ್ನಲ್ಲಿ ಆಶ್ರಯ ಪಡಿಯೋರೆಲ್ಲ ಖುಷಿಪಡ್ತಾರೆ,+
ಅವರು ಯಾವಾಗ್ಲೂ ಆನಂದದಿಂದ ಜೈಕಾರ ಹಾಕ್ತಾರೆ.
ತೊಂದರೆ ಕೊಡೋರಿಂದ ನೀನು ಅವರನ್ನ ಕಾಪಾಡ್ತೀಯ.
ನಿನ್ನ ಹೆಸ್ರನ್ನ ಪ್ರೀತಿಸೋರು ನಿನ್ನಿಂದ ಸಂತೋಷಪಡ್ತಾರೆ.
12 ಯಾಕಂದ್ರೆ ಯೆಹೋವನೇ, ನೀತಿವಂತನನ್ನ ನೀನು ಆಶೀರ್ವದಿಸ್ತೀಯ.
ನಿನ್ನ ದಯೆ ಅವನ ಸುತ್ತ ದೊಡ್ಡ ಗುರಾಣಿ ತರ ಇದ್ದು ಕಾಪಾಡುತ್ತೆ.+