ಇಬ್ರಿಯರಿಗೆ ಬರೆದ ಪತ್ರ
8 ನಾವು ಹೇಳ್ತಿರೋ ಮುಖ್ಯ ವಿಷ್ಯ ಇದು, ನಮ್ಮ ಮಹಾ ಪುರೋಹಿತ ಎಂಥವನಂದ್ರೆ+ ಸ್ವರ್ಗದಲ್ಲಿ ಮಹಾನ್ ದೇವರ ಸಿಂಹಾಸನದ ಬಲಗಡೆ ಆತನು ಕೂತಿದ್ದಾನೆ.+ 2 ಆತನು ಪವಿತ್ರ ಸ್ಥಳದಲ್ಲಿ, ನಿಜವಾದ ಡೇರೆಯಲ್ಲಿ ಸೇವಕನಾಗಿದ್ದಾನೆ.*+ ಆ ಡೇರೆ ಹಾಕಿರೋದು ಮನುಷ್ಯನಲ್ಲ ಯೆಹೋವ.* 3 ಪ್ರತಿಯೊಬ್ಬ ಮಹಾ ಪುರೋಹಿತನಿಗೆ ಉಡುಗೊರೆಗಳನ್ನ ಬಲಿಗಳನ್ನ ಕೊಡೋ ಜವಾಬ್ದಾರಿಯಿದೆ. ಅದೇ ತರ ಈ ಮಹಾ ಪುರೋಹಿತನೂ ಏನಾದ್ರೂ ಅರ್ಪಿಸಬೇಕಿತ್ತು.+ 4 ಆತನು ಭೂಮಿಯಲ್ಲೇ ಇದ್ದಿದ್ರೆ ಪುರೋಹಿತ ಆಗ್ತಿರಲಿಲ್ಲ.+ ಯಾಕಂದ್ರೆ ನಿಯಮ ಪುಸ್ತಕದ ಪ್ರಕಾರ ಉಡುಗೊರೆಗಳನ್ನ ಕೊಡೋಕೆ ಇಲ್ಲಿ ಈಗಾಗ್ಲೇ ಬೇರೆ ಪುರೋಹಿತರು ಇದ್ದಾರೆ. 5 ಇವರು ಮಾಡ್ತಿರೋ ಪವಿತ್ರ ಸೇವೆ ಸ್ವರ್ಗದಲ್ಲಿರೋ ವಿಷ್ಯಗಳ+ ಮಾದರಿ ತರ, ನೆರಳಿನ ತರ ಇದೆ.+ ದೇವರು ಮೋಶೆಗೆ ಡೇರೆ ಹೇಗೆ ಮಾಡಬೇಕಂತ ಆಜ್ಞೆ ಕೊಟ್ಟಾಗ ಅದನ್ನ ತೋರಿಸಿದನು. “ನಾನು ನಿನಗೆ ಬೆಟ್ಟದಲ್ಲಿ ತೋರಿಸಿದ ಮಾದರಿಯಲ್ಲೇ ನೀನು ಎಲ್ಲವನ್ನೂ ಜಾಗ್ರತೆಯಿಂದ ಮಾಡಬೇಕು” ಅಂತ ದೇವರು ಹೇಳಿದನು.+ 6 ಆದ್ರೆ ಈಗ ಯೇಸುಗೆ ಅದಕ್ಕಿಂತ ಅತಿ ಶ್ರೇಷ್ಠ ಸೇವೆಯನ್ನ* ಕೊಡಲಾಗಿದೆ. ಯಾಕಂದ್ರೆ ಆತನು ಮುಂಚೆ ಇದ್ದಿದ್ದಕ್ಕಿಂತ ಒಳ್ಳೇ ಒಪ್ಪಂದಕ್ಕೆ+ ಮಧ್ಯಸ್ಥ+ ಆಗಿದ್ದಾನೆ. ಆ ಒಪ್ಪಂದವನ್ನ ಕಾನೂನುಬದ್ಧವಾಗಿ ಹಿಂದಿನದಕ್ಕಿಂತಲೂ ಉತ್ತಮ ವಾಗ್ದಾನಗಳ ಮೇಲೆ ಸ್ಥಾಪಿಸಲಾಯ್ತು.+
7 ಆ ಮೊದಲ್ನೇ ಒಪ್ಪಂದದಲ್ಲಿ ಕುಂದುಕೊರತೆ ಇಲ್ಲದೆ ಇದ್ದಿದ್ರೆ ಎರಡ್ನೇ ಒಪ್ಪಂದ ಬೇಕಾಗಿರಲಿಲ್ಲ.+ 8 ಆದ್ರೆ ಆತನು ಜನ್ರಲ್ಲಿರೋ ಕುಂದುಕೊರತೆ ನೋಡಿ ಹೇಳಿದ್ದು: “‘ನೋಡು! ನಾನು ಇಸ್ರಾಯೇಲ್ ಜನ್ರ ಜೊತೆ, ಯೆಹೂದದ ಜನ್ರ ಜೊತೆ ಒಂದು ಹೊಸ ಒಪ್ಪಂದ ಮಾಡ್ಕೊಳ್ಳೋ ದಿನ ಬರುತ್ತೆ’ ಅಂತ ಯೆಹೋವ* ಹೇಳ್ತಾನೆ. 9 ‘ಈ ಒಪ್ಪಂದ ನಾನು ಅವ್ರ ಪೂರ್ವಜರ ಜೊತೆ ಮಾಡಿದ ಒಪ್ಪಂದದ ತರ ಇರಲ್ಲ. ಅವ್ರ ಪೂರ್ವಜರನ್ನ ನಾನು ಕೈಹಿಡಿದು ಈಜಿಪ್ಟ್ ದೇಶದಿಂದ ಕರ್ಕೊಂಡು ಬಂದ ದಿನ ಆ ಒಪ್ಪಂದ ಮಾಡಿದ್ದೆ.+ ಅವರು ನನ್ನ ಆ ಒಪ್ಪಂದ ಮುರಿದಿದ್ರಿಂದ ಅವ್ರನ್ನ ನೋಡ್ಕೊಳ್ಳೋದನ್ನ ಬಿಟ್ಟುಬಿಟ್ಟೆ’ ಅಂತ ಯೆಹೋವ* ಹೇಳ್ತಾನೆ.
10 ಯೆಹೋವ* ಹೀಗೆ ಹೇಳ್ತಾನೆ: ‘ಆ ದಿನಗಳಾದ್ಮೇಲೆ ನಾನು ಇಸ್ರಾಯೇಲ್ ಜನ್ರ ಜೊತೆ ಈ ಒಪ್ಪಂದ ಮಾಡ್ಕೊಳ್ತೀನಿ. ಅದೇನಂದ್ರೆ, ನನ್ನ ನಿಯಮಗಳನ್ನ ಅವ್ರ ಮನಸ್ಸಲ್ಲಿ ಇಡ್ತೀನಿ. ಅವ್ರ ಹೃದಯದಲ್ಲಿ ಅದನ್ನೆಲ್ಲ ಬರಿತೀನಿ.+ ನಾನು ಅವ್ರಿಗೆ ದೇವರಾಗ್ತೀನಿ, ಅವರು ನನ್ನ ಜನ ಆಗ್ತಾರೆ.+
11 “ಯೆಹೋವನನ್ನ* ತಿಳ್ಕೊಳ್ಳಿ” ಅಂತ ಯಾರೂ ತನ್ನ ಅಕ್ಕಪಕ್ಕದವ್ರಿಗೆ ಆಗ್ಲಿ ಸಹೋದರನಿಗಾಗ್ಲಿ ಇನ್ಮುಂದೆ ಹೇಳಲ್ಲ. ಯಾಕಂದ್ರೆ ಚಿಕ್ಕವ್ರಿಂದ ದೊಡ್ಡವ್ರ ತನಕ ಎಲ್ರೂ ನನ್ನನ್ನ ತಿಳ್ಕೊಳ್ತಾರೆ. 12 ನಾನು ಅವ್ರ ತಪ್ಪುಗಳನ್ನ ಕ್ಷಮಿಸ್ತೀನಿ. ಅವ್ರ ಪಾಪಗಳನ್ನ ಇನ್ಯಾವತ್ತೂ ನೆನಪಿಸ್ಕೊಳ್ಳಲ್ಲ.’”+
13 “ಒಂದು ಹೊಸ ಒಪ್ಪಂದ” ಅಂತ ಆತನು ಹೇಳಿದಾಗ ಮೊದಲ ಒಪ್ಪಂದ ಮುಗೀತು ಅಂತರ್ಥ.+ ಮುಗಿದಿರೋ ಹಳೇದಾಗ್ತಿರೋ ಆ ಒಪ್ಪಂದ ಬೇಗ ಕಣ್ಮರೆಯಾಗುತ್ತೆ.+